ಅಲಯನ್ಸ್ ಕ್ಲಬ್ ಉಡುಪಿ ರೋಯಲ್ ಅಧ್ಯಕ್ಷರಾಗಿ ಡಾ. ಗಾಯತ್ರಿ ಸಂತೋಷ್
ಉಡುಪಿಯಲ್ಲಿ ನೂತನವಾಗಿ ಆರಂಭವಾದ ಅಲಯನ್ಸ್ ಕ್ಲಬ್ ಉಡುಪಿ ರೋಯಲ್ ಇದರ ಅಧ್ಯಕ್ಷರಾಗಿ ಡಾ. ಗಾಯತ್ರಿ ಸಂತೋಷ್ ಅವರು ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿಯಾಗಿ ಜೋಸೆಫ್ ರೆಬೆಲ್ಲೋ, ಖಜಾಂಚಿಯಾಗಿ ಸುಶೀಲಾ ಜಗನ್ನಾಥ್ ನೇಮಕಗೊಂಡಿದ್ದಾರೆ.
ಉಡುಪಿ ಅಲಯನ್ಸ್ ಜಿಲ್ಲೆ 275 S ರ ಜಿಲ್ಲಾ ಗವರ್ನರ್ ಸುನೀಲ್ ಸಾಲ್ಯಾನ್ ಕಡೆಕಾರ್ ಅವರ ಮಾರ್ಗದರ್ಶನದಲ್ಲಿ ಅಲಯನ್ಸ್ ಕ್ಲಬ್ ಉಡುಪಿ ರೋಯಲ್ ಆರಂಭವಾಗಿದ್ದು ಡಾ.ಗಾಯತ್ರಿ ಸಂತೋಷ್ ಅವರು ತಮ್ಮ ಅಧ್ಯಕ್ಷೀಯ ಅವಧಿಯಲ್ಲಿ ಆರೋಗ್ಯಕ್ಕೆ ಸಂಬಂಧಿಸಿದ ಮತ್ತು ಆರೋಗ್ಯ ಮಾಹಿತಿ ಕಾರ್ಯಕ್ರಮಗಳನ್ನು ಹೆಚ್ಚಿನ ಮಟ್ಟದಲ್ಲಿ ಮಾಡುವ ಯೋಜನೆಗಳನ್ನು ಇಟ್ಟುಕೊಂಡಿದ್ದಾರೆಂದು ಜಿಲ್ಲಾ ಪಿ.ಆರ್.ಓ ಜಯರಾಮ ಆಚಾರ್ಯ ಸಾಲಿಗ್ರಾಮ ತಿಳಿಸಿದ್ದಾರೆ.





