ನಿರ್ಲಕ್ಷ್ಯದಲ್ಲಿ ಬಸ್ ಚಲಾಯಿಸಿ ಬ್ರೇಕ್ ಹಾಕಿದ ಚಾಲಕನ ಬಂಧನ

ಉಡುಪಿ: ಬನ್ನಂಜೆಯ ರಾಹೆ-169Aಯಲ್ಲಿ ನಿರ್ಲಕ್ಷ್ಯ ರೀತಿಯಲ್ಲಿ ಬಸ್ ಚಲಾಯಿಸಿ ಬ್ರೇಕ್ ಹಾಕಿ ಬಳಿಕ ವಿರುದ್ಧ ದಿಕ್ಕಿನಲ್ಲಿ ಬಸ್‌ನ್ನು ಚಲಾಯಿಸಿದ ಆರೋಪದಲ್ಲಿ ಬಸ್ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ.

ಮಂಗಳವಾರ ಆರೋಪಿ ದೇವರಾಜ ಎಂಬಾತನು KA20D 8236ನೇ ಶ್ರೀದುರ್ಗಾಂಬ ಖಾಸಗಿ ಬಸ್ಸ್‌ನ್ನು ಕರಾವಳಿ ಕಡೆಯಿಂದ ಉಡುಪಿ ಕಡೆಗೆ ಸಾರ್ವಜನಿಕರ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ದುಡುಕುತನ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಬನ್ನಂಜೆ ಜಯಲಕ್ಷ್ಮೀ ಸಿಲ್ಕ್ ಬಳಿ ನಿಯಂತ್ರಣ ತಪ್ಪಿ ಬಸ್ಸು ತಿರುಗಿ ನಿಂತಿದ್ದು, ಬಳಿಕ ಆರೋಪಿ ಬಸ್ಸಿನ ಚಾಲಕನು ಬಸ್ಸ್‌ನ್ನು ವಿರುದ್ದ ದಿಕ್ಕಿನಲ್ಲಿ ಚಲಾಯಿಸಿಕೊಂಡು ಉಡುಪಿ ಕಡೆಗೆ ಹೋಗಿರುತ್ತಾನೆ. 

ಘಟನೆಯಲ್ಲಿ ಬಸ್ಸಿನಲ್ಲಿದ್ದ ಪ್ರಯಾಣಿಕರಿಗೆ ಯಾವುದೇ ಗಾಯವಾಗಿರುವುದಿಲ್ಲ.

ಆರೋಪಿತ ಚಾಲಕ ದೇವರಾಜ್‌ನನ್ನು ಬಂಧಿಸಿದ್ದು ಮತ್ತು ಬಸ್ಸ್‌ನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!