ಆಪರೇಷನ್ ಸಿಂಧೂರ: ಕರಾಚಿ, ಲಾಹೋರ್‌ನಲ್ಲಿ ಡ್ರೋನ್ ದಾಳಿ; 26 ಮಂದಿ ಸಾವು, ಪಾಕಿಗಳು ತತ್ತರ

ಇಸ್ಲಾಮಾಬಾದ್: ನಿನ್ನೆಯಷ್ಟೇ ನಡೆದ ಭಾರತೀಯ ಸೇನೆಯ ಆಪರೇಷನ್ ಸಿಂಧೂರ ಕಾರ್ಯಾಚರಣೆ ಯಿಂದಾಗಿ ಹೈರಾಣಾಗಿರುವ ಪಾಕಿಸ್ತಾನದಲ್ಲಿ ಇಂದು ಬೆಳಗ್ಗೆಯಿಂದ ಮತ್ತೆ ಸೈರನ್ ಮೊಳಗುತ್ತಿದ್ದು, ಲಾಹೋರ್ ಮತ್ತು ಕರಾಚಿಯಲ್ಲಿ ‘ಆತ್ಮಹತ್ಯಾ ಡ್ರೋನ್’ ದಾಳಿ ನಡೆಯುತ್ತಿದೆ ಎಂದು ಹೇಳಲಾಗಿದೆ.

ಗುರುವಾರ ಪಾಕಿಸ್ತಾನದ ಲಾಹೋರ್‌ನಲ್ಲಿ ದೊಡ್ಡ ಸರಣಿ ಸ್ಫೋಟಗಳು ಕೇಳಿ ಬಂದಿದ್ದರಿಂದ ಸೈರನ್‌ಗಳು ಮೊಳಗಲಾರಂಭಿಸಿವೆ. ಭಯಭೀತರಾದ ಜನರು ಮನೆಗಳಿಂದ ಹೊರಗೆ ಓಡಿ ಬರುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ಈ ಬಗ್ಗೆ ಪಾಕಿಸ್ತಾನದ ಸ್ಥಳೀಯ ಮಾಧ್ಯಮಗಳು ವರದಿ ಮಾಡಿದ್ದು, ಅಜ್ಞಾತ ಸ್ಥಳಗಳಿಂದ ಹಾರಿ ಬಂದ ಆತ್ಮಹತ್ಯಾ ಡ್ರೋನ್ ಗಳು ಕರಾಚಿ ಮತ್ತು ಲಾಹೋರ್ ನ ನಿಗಧಿತ ಪ್ರದೇಶ ಮತ್ತು ಕಟ್ಟಡಗಳಿಗೆ ನುಗ್ಗಿ ಸ್ಫೋಟಗೊಳ್ಳುತ್ತಿವೆ ಎಂದು ವರದಿ ಮಾಡಿವೆ.

ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತಿಯಾಗಿ ಭಾರತವು ಮಂಗಳವಾರ ಮುಂಜಾನೆ ‘ಆಪರೇಷನ್ ಸಿಂಧೂರ’ ಎಂಬ ಕಾರ್ಯಾಚರಣೆಯಲ್ಲಿ ಪಾಕಿಸ್ತಾನದಲ್ಲಿನ ಭಯೋತ್ಪಾದಕ ಶಿಬಿರಗಳನ್ನು ಹೊಡೆದುರುಳಿಸಿದ ಒಂದು ದಿನದ ನಂತರ ಈ ಘಟನೆ ನಡೆದಿದೆ.

26 ಮಂದಿ ಸಾವು, ಹಲವರಿಗೆ ಗಾಯ

ಇನ್ನು ಇಂದು ಬೆಳಗ್ಗೆಯಿಂದ ನಡೆಯುತ್ತಿರುವ ಆತ್ಮಹತ್ಯಾ ಡ್ರೋನ್ ದಾಳಿಯಲ್ಲಿ ಈ ವರೆಗೂ 26 ಮಂದಿ ಸಾವನ್ನಪ್ಪಿ ಹಲವರು ಗಾಯಗೊಂಡಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಪ್ರಮುಖವಾಗಿ ಈ ಆತ್ಮಹತ್ಯಾ ಡ್ರೋನ್ ದಾಳಿಗಳು ಲಾಹೋರ್ ನ ವಾಲ್ಟನ್ ವಿಮಾನ ನಿಲ್ದಾಣದ ಬಳಿಯ ಗೋಪಾಲ್ ನಗರ ಮತ್ತು ನಸೀರಾಬಾದ್ ಪ್ರದೇಶಗಳಲ್ಲಿ ನಡೆದಿವೆ ಎನ್ನಲಾಗಿದೆ.

ವಿಡಿಯೋ ವೈರಲ್

ಈ ಡ್ರೋನ್ ದಾಳಿ ಬೆನ್ನಲ್ಲೇ ಜನರು ಭಯಭೀತರಾಗಿ ತಮ್ಮ ಮನೆಗಳಿಂದ ಹೊರಗೆ ಓಡಿಹೋಗುತ್ತಿರುವು ದನ್ನು ಮತ್ತು ದಾಳಿ ನಡೆದ ಕಟ್ಟಡಗಳಿಂದ ಹೊಗೆ ಬರುತ್ತಿರುವುದು ವಿಡಿಯೋದಲ್ಲಿ ದಾಖಲಾಗಿದೆ. 5-6 ಅಡಿ ಅಳತೆಯ ಡ್ರೋನ್‌ನಿಂದ ಸ್ಫೋಟ ಸಂಭವಿಸಿರ ಬಹುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

Leave a Reply

Your email address will not be published. Required fields are marked *

error: Content is protected !!