ಕೋವಿಡ್-19 ಏರಿಕೆ: ಗುಜರಾತ್ನ ನಾಲ್ಕು ಮಹಾನಗರಗಳಲ್ಲಿ ರಾತ್ರಿ ಕರ್ಫ್ಯೂ
ಅಹಮದಾಬಾದ್: ಕೊರೊನಾ ಸೋಂಕು ಪ್ರಕರಣಗಳು ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಗುಜರಾತ್ನ ನಾಲ್ಕು ಮಹಾನಗರಗಳಲ್ಲಿ ರಾತ್ರಿ ಕರ್ಫ್ಯೂ ವಿಧಿಸಲಾಗಿದೆ.
ಅಹಮದಾಬಾದ್, ಸೂರತ್, ವಡೋದರಾ ಮತ್ತು ರಾಜ್ಕೋಟ್ಗಳಲ್ಲಿ ರಾತ್ರಿ 9ರಿಂದ ಬೆಳಿಗ್ಗೆ 6ರ ವರೆಗೆ ಕರ್ಫ್ಯೂ ಜಾರಿಗೊಳಿಸಿ ಗುಜರಾತ್ ಸರ್ಕಾರ ಆದೇಶಿಸಿದೆ.
ಈ ಬಗ್ಗೆ ಹೇಳಿಕೆ ನೀಡಿರುವ ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ, ‘ಗುಜರಾತ್ನ ನಾಲ್ಕು ಮಹಾನಗರಗಳಲ್ಲಿ ನವೆಂಬರ್ 22ರಿಂದ ಕಟ್ಟುನಿಟ್ಟಿನ ಕರ್ಫ್ಯೂ ಜಾರಿಗೊಳಿಸಲಾಗುವುದು. ಅಹಮದಾಬಾದ್, ಸೂರತ್, ವಡೋದರಾ ಮತ್ತು ರಾಜ್ಕೋಟ್ಗಳಲ್ಲಿ ರಾತ್ರಿ 9ರಿಂದ ಬೆಳಿಗ್ಗೆ 6ರ ವರೆಗೆ ಕರ್ಫ್ಯೂ ಇರಲಿದೆ’ ಎಂದು ಹೇಳಿದ್ದಾರೆ.
ಹಬ್ಬಗಳ ಸಂದರ್ಭದಲ್ಲಿ ಜನಸಂದಣಿ ಹೆಚ್ಚಾಗಿದ್ದು, ಸೋಂಕು ಪ್ರಕರಣಗಳ ಹಠಾತ್ ಏರಿಕೆಗೆ ಕಾರಣ ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.