ಉದ್ಯಾವರ: ಕ್ರಿಸ್ಮಸ್ ಹಬ್ಬಕ್ಕೆ ಪೂರ್ವಭಾವಿಯಾಗಿ ಕೇಕ್ ಮಿಕ್ಸಿಂಗ್
ಉದ್ಯಾವರ:(ಉಡುಪಿ ಟೈಮ್ಸ್ ವರದಿ) ಐಸಿವೈಎಂ ಉದ್ಯಾವರ ಸುವರ್ಣ ಮಹೋತ್ಸವ ಸಮಿತಿಯ ನೇತೃತ್ವದಲ್ಲಿ, ಬೇಕ್ ಸ್ಟುಡಿಯೊ ಉದ್ಯಾವರ ಇವರ ಸಹಕಾರದೊಂದಿಗೆ ಕ್ರಿಸ್ಮಸ್ ಹಬ್ಬಕ್ಕೆ ಪೂರ್ವಭಾವಿಯಾಗಿ ಕೇಕ್ ಮಿಕ್ಸಿಂಗ್ ಕಾರ್ಯಕ್ರಮ ಉದ್ಯಾವರ ಸಂತ ಫ್ರಾನ್ಸಿಸ್ ಜೇವಿಯರ್ ಸಭಾಭವನದಲ್ಲಿ ನಡೆಯಿತು.
ಕ್ರಿಸ್ಮಸ್ ಹಬ್ಬ ಬಂತೆಂದರೆ ಸಾಕು ವಿವಿಧ ವಿನ್ಯಾಸದ ಬಣ್ಣ ಬಣ್ಣದ ಕೇಕ್ ಮತ್ತು ಕುಸ್ವಾರ್ ಗಳು ಸಿದ್ಧಗೊಳ್ಳುತ್ತವೆ. ಅದೇ ರೀತಿ ಐಸಿವೈಎಂ ಸುವರ್ಣ ಮಹೋತ್ಸವ ತನ್ನ ಸುವರ್ಣ ಮಹೋತ್ಸವದ ಅಂಗವಾಗಿ 32ನೇ ಕಾರ್ಯಕ್ರಮವಾಗಿ ಇಂದು ಉದ್ಯಾವರ ಸಂತ ಫ್ರಾನ್ಸಿಸ್ ಜೇವಿಯರ್ ಸಭಾಂಗಣದಲ್ಲಿ ಕೇಕ್ ಮಿಕ್ಸಿಂಗ್ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿತು.
ಸಂತ ಫ್ರಾನ್ಸಿಸ್ ಜೇವಿಯರ್ ದೇವಾಲಯದ ಧರ್ಮಗುರು ವಂ. ರೊಲ್ವಿನ್ ಅರಾನ್ಹಾ, ಸಿಎಫ್ಐ ಕೊರಂಗ್ರಪಾಡಿ ದೇವಾಲಯದ ಧರ್ಮಗುರು ರೆ. ಅಕ್ಷಯ್ ಅಮ್ಮನ್ನ, ಯುಬಿಎಂ ಉದ್ಯಾವರ ದೇವಾಲಯದ ಧರ್ಮಗುರು ರೆ. ಬೆನಡಿಕ್ಟ್ ಅಂಚನ್, ನಗರಸಭಾ ಸದಸ್ಯ ವಿಜಯ ಪೂಜಾರಿ, ಯುವ ಉದ್ಯಮಿ ಜೇಸನ್ ಡಯಾಸ್, ಸೌಹಾರ್ದ ಸಮಿತಿ ಅಧ್ಯಕ್ಷ ವಿಲ್ಫ್ರೆಡ್ ಡಿಸೋಜಾ,
ಪಾಲನಾ ಮಂಡಳಿ ಉಪಾಧ್ಯಕ್ಷ ಮೆಲ್ವಿನ್ ನೊರೊನ್ಹಾ, ವಾಸುದೇವ ಕೃಪಾ ಇದರ ಪ್ರಿನ್ಸಿಪಾಲ್ ಅಮಿತಾಂಜಲಿ ಕಿರಣ್, ಆಯೋಗಗಳ ಸಂಚಾಲಕ ಗಾಡ್ಫ್ರಿ ಡಿಸೋಜಾ, ಕೆಮ್ಮಲೆ ಗ್ರೂಪ್ ನ ಪಾಲುದಾರ ಡೋನ್ ಕರ್ಕಡ, ಸುವರ್ಣ ಮಹೋತ್ಸವ ಸಮಿತಿಯ ಅಧ್ಯಕ್ಷ ಮೈಕಲ್ ಡಿಸೋಜ, ಕಾರ್ಯದರ್ಶಿ ಡೋರಾ ಅರೋಜ, ಕಾರ್ಯಕ್ರಮದ ಸಂಚಾಲಕರಾದ ಡ್ಯಾಲನ್ ಅರೋಜಾ ಮತ್ತು ಡೆರಿಕ್ ಮಾರ್ಟಿಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸುವರ್ಣ ಮಹೋತ್ಸವ ಸಮಿತಿಯ ಸಂಚಾಲಕ ಸ್ಟೀವನ್ ಕುಲಾಸೊ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.