ಸಿದ್ದರಾಮಯ್ಯ ಹಿಂದೆ ಸುತ್ತುತಿದ್ದ ಐವಾನ್’ಗೆ ಆಗ ಕ್ರೈಸ್ತ ಸಮುದಾಯ ನೆನಪಾಗಲಿಲ್ಲವೇ?: ಜೋಯ್ಲಸ್
ಬೆಂಗಳೂರು: ರೈತ ನಾಯಕರಾದ ಕರ್ನಾಟ ಬಿ.ಎಸ್.ಯಡಿಯೂರಪ್ಪ ಅವರ ಜನಪರ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ರಾಜ್ಯದಲ್ಲಿ ಉತ್ತಮ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ಮುಖ್ಯಮಂತ್ರಿಯವರು ಪ್ರಧಾನಮಂತ್ರಿಗಳಾದ ನರೇಂದ್ರ
ಮೋದಿ ಅವರ “ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಸಬ್ ಕಾ ವಿಶ್ವಾಸರ್ವಸ್ಪರ್ಶಿ ಆಡಳಿತವನ್ನು ನೀಡುತಿದ್ದು, ಇದನ್ನು ಸಹಿಸಲಾಗದೆ ಹತಾಶ ಕಾಂಗ್ರೆಸ್ ಪಕ್ಷವು ರಾಜ್ಯದಲ್ಲಿ ಸಮುದಾಯವನ್ನು ಎತ್ತಿಕಟ್ಟುವ ಕೆಲಸದಲ್ಲಿ ನಿರತವಾಗಿದೆ ಎಂದು ಕ್ರಿಶ್ಚಿಯನ್ ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ಜೋಯ್ಲಸ್ ಡಿಸೋಜ ಅವರು ಟೀಕಿಸಿದ್ದಾರೆ.
ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ಎಂಬ ಮಾತಿನಂತೆ 2011
ಅಂದು ಮುಖ್ಯಮಂತ್ರಿಗಳಾಗಿದ್ದ ಬಿ.ಎಸ್.ಯಡಿಯೂರಪ್ಪ ಅವರು, ಕರ್ನಾಟಕದ ಇತಿಹಾಸದಲ್ಲೇ ಮೊತ್ತ ಮೊದಲ ಬಾರಿಗೆ ರಾಜ್ಯದ ಕ್ರೈಸ್ತ ಸಮುದಾಯದ ಅಭಿವೃದ್ಧಿಗೆ 50 ಕೋಟಿ ರೂಪಾಯಿ ಅನುದಾನವನ್ನು ಮೀಸಲಿರಿಸಿದ್ದರು. ಬಳಿಕ 2020 ಅನುದಾನವನ್ನು ಮೀಸಲಿಡುವ ಮೂಲಕ ಅತ್ಯಂತ ಹೆಚ್ಚು ಅನುದಾನವನ್ನು ಕ್ರೈಸ್ತ ಸಮುದಾಯದ ಅಭಿವೃದ್ಧಿಗೆ ನೀಡಿದ ಕೀರ್ತಿ ಯಡಿಯೂರಪ್ಪ ಅವರಿಗೆ ಸಲ್ಲುತ್ತದೆ ಎಂದು ತಿಳಿಸಿದ್ದಾರೆ.
ಮತ ಬ್ಯಾಂಕ್ ರಾಜಕೀಯಕ್ಕಾಗಿ
ಕಾಂಗ್ರೆಸ್ಸಿನ ಐವಾನ್ ಡಿ’ಸೋಜ ಅವರು ವಿಧಾನ ಪರಿಷತ್ ಸದಸ್ಯರಾಗಿದ್ದ ಸಂದರ್ಭದಲ್ಲಿ ಅವರದೇ ಪಕ್ಷದ ಸರ್ಕಾರ ರಾಜ್ಯದಲ್ಲಿ ಅಧಿಕಾರದಲ್ಲಿತ್ತು. ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹಿಂದೆ ಬಾಲಂಗೋಚಿಯಂತೆ ಸುತ್ತುತಿದ್ದ ಐವಾನ್ ಅವರಿಗೆ ಅಂದು ಕ್ರೈಸ್ತ ಸಮುದಾಯದವರ ಬಗ್ಗೆ ಯಾಕೆ ನೆನಪಾಗಲಿಲ . ಕೇವಲ ಪ್ರಚಾರಕ್ಕಾಗಿ ಭಾಷಣ ಮಾಡುವ ಅವರಿಂದ ಕ್ರೈಸ್ತ ಸಮುದಾಯದ ಅಭಿವೃದ್ಧಿ ಸಾಧ್ಯವಿಲ್ಲ ಎಂಬುದನ್ನು ಅರಿತ ಜನರು ಇಂದು ಕಾಂಗ್ರೆಸ್ಸನ್ನು ಬೀದಿಯಲಿ ನಿಲ್ಲಿಸಿದ್ದಾರೆ ಎಂದು ತಿಳಿಸಿದ್ದಾರೆ. ಕ್ರೈಸ್ತ ಸಮುದಾಯದ ಅಭಿವೃದ್ಧಿಯ ವಿಚಾರದಲಿ ಬಿಜೆಪಿ ಸರ್ಕಾರದ ಕಡೆಗೆ ಬೆರಳು ತೋರಿಸುವ ಕಾಂಗ್ರೆಸ್ ಪಕ್ಷ, ಕ್ರೈಸ್ತ ಸಮುದಾಯಕ್ಕೆ ತನ್ನ ಕೊಡುಗೆ ಏನೆಂಬುದನ್ನು ಬಹಿರಂಗ ಪಡಿಸಬೇಕು ಎಂದು ಅವರು ಸವಾಲು ಹಾಕಿದ್ದಾರೆ.
ಕ್ರಿಶ್ಚಿಯನ್ ಅಭಿವೃದ್ಧಿ ಸಮಿತಿಗೆ ಹೆಚ್ಚಿನ ಅನುದಾನವನ್ನು ನೀಡಿದ ಯಡಿಯೂರಪ್ಪನವರನ್ನು ಕ್ರೈಸ್ತ ಸಮುದಾಯ ಬೆಂಬಲಿಸುತ್ತಿರುವುದು ಇತ್ತೀಚಿನ ದಿನಗಳಲಿ ನಡೆದ ಚುನಾವಣೆಗಳಿಂದ ಸಾಬೀತಾಗುತ್ತದೆ. ಇದರಿಂದ ನೊಂದು ಹತಾಶರಾಗಿರುವ ಕಾಂಗ್ರೆಸ್, ಸಮಾಜದಲ್ಲಿ ಶಾಂತಿ ಸಾಮರಸ್ಯದಿಂದ ಬದುಕುತ್ತಿರುವ ಜನತೆಯನ್ನು ಸಮುದಾಯದ ವಿಚಾರದಲ್ಲಿ ಎತ್ತಿ ಕಟ್ಟುತ್ತಿದೆ. ಸುಳ್ಳು ಹೇಳಿಕೆಗಳನ್ನು ನೀಡಿ ಅಶಾಂತಿ ನಿರ್ಮಾಣಕ್ಕೆ ಪರೋಕ್ಷವಾಗಿ ಕಾರಣವಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ಕಾಂಗ್ರೆಸ್ ಪಕ್ಷದ ಈ ಬುದ್ಧಿಯನ್ನು ನಾಡಿನ ಕ್ರೈಸ್ತ ಸಮುದಾಯ ಅರ್ಥ ಮಾಡಿಕೊಂಡಿದೆ. ಈ ರೀತಿಯ ಸುಳ್ಳುಗಳಿಗೆ ನಾಡಿನ ಜನತೆ ಮುಂದಿನ ದಿನಗಳಲ್ಲಿ ಸೂಕ ಉತ್ತರವನ್ನು ನೀಡಲಿದ್ದಾರೆ ಎಂದು ಜೋಯ್ಲಸ್ ಡಿ’ಸೋಜ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇವತ್ತು ಎನಾದರೂ ಅಲ್ಪಸಂಖ್ಯಾತರಿಗೆ ಸರ್ಕಾರ ದಲ್ಲಿ ಮೀಸಾಲತಿ ಇದ್ದರೆ ಅದು ಐವನ್ ಡಿ ಸೋಜರ ಕೊಡುಗೆ
ಕ್ರೀಚ್ಚನ್ ಸಮುದಾಯದ ಬಗ್ಗೆ ಆಂದೋಲನದ ಮುಖಾಂತರ ಪರಿಣಾಮ ಕಾರಿಯಾಗಿ ಅರಿಯು ಮುಟ್ಟಿಸಿ ಪ್ರತಿ ಜಿಲ್ಲೆಯಲ್ಲಿ ಪ್ರಚಾರದ ಮುಖಾಂತರ ಎತ್ತಿ ಹಿಡಿದು ಅನುಧಾನ ಬಳಸಲು ಶ್ರಮಿಸಿದ ಐವನ್ ಬಗ್ಗೆ ಹಗುರವಾಗಿ ಮಾತಾನಾಡುವುದನ್ನು ಸಮುದಾಯಕ್ಕೆ ಹೆಚ್ಚಿನ ಅನುದಾನ ಒದಗಿಸುವ ಪ್ರಯತ್ನ ನಡೆಯಲಿ