ಉಡುಪಿ: 7 ಪದವಿ ವಿದ್ಯಾರ್ಥಿಗಳ ಸಹಿತ 18 ಜನರಿಗೆ ಕೋವಿಡ್ ಪಾಸಿಟಿವ್!

ಉಡುಪಿ: (ಉಡುಪಿ ಟೈಮ್ಸ್ ವರದಿ)ಮಂಗಳವಾರ ರಾಜ್ಯಾದ್ಯಾಂತ ಪದವಿ ಕಾಲೇಜ್ ಪಾರಂಭವಾಗಿದ್ದು, ಕಾಲೇಜ್‌ಗಳಲ್ಲಿ ವಿದ್ಯಾರ್ಥಿಗಳ ಕೋವಿಡ್ ಪರೀಕ್ಷೆ ನಡೆಸಿದ್ದು, ಏಳು ಅಂತಿಮ ವರ್ಷದ ಪದವಿ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಕೊರೋನಾ ಸೋಂಕು ಪಾಸಿಟಿವ್ ದೃಢ ಪಟ್ಟಿದೆ. ಅದರಲ್ಲಿ ಮಣಿಪಾಲದ ಐದು, ಕಾರ್ಕಳದ 2 ವಿದ್ಯಾರ್ಥಿಗಳಲ್ಲಿ ಪಾಸಿಟಿವ್ ದೃಢ ಪಟ್ಟಿದೆ.

ಲಾಕ್ ಡೌನ್ ಘೋಷಿಸಿದ ಎಂಟು ತಿಂಗಳ ಬಳಿಕ ಶಾಲಾ ಕಾಲೇಜ್ ಆರಂಭಿಸುವ ಬಗ್ಗೆ ಸರಕಾರದಲ್ಲಿ ಹಲವಾರು ಗೊಂದಲಗಳಿದ್ದರೂ, ನ.17 ರಿಂದ ಪದವಿ ತರಗತಿಗಳನ್ನು ಪ್ರಾರಂಭಸಿತ್ತು.

ಉಡುಪಿ ಜಿಲ್ಲೆಯಲ್ಲಿ ಕಳೆದ ನಾಲ್ಕು ದಿನಗಳಿಂದ 6000 ವಿದ್ಯಾರ್ಥಿಗಳ ಹಾಗೂ ಕಾಲೇಜ್ ಸಿಬಂದಿಗಳ ತಪಾಸಣೆ ನಡೆಸಲಾಗಿತ್ತು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಸುಧೀರ್‍ಚಂದ್ರ ಸೂಡ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!