6,471 ಕೋಟಿ ರೂ ಮೌಲ್ಯದ 2,000 ರೂ ಮುಖಬೆಲೆ ನೋಟು ಜನರಲ್ಲಿದೆ! ಆರ್ಬಿಐ ಹೇಳಿಕೆ…
ಮುಂಬೈ: 2000 ರೂ.ಗಳ ನೋಟುಗಳಲ್ಲಿ ಶೇ.98.18 ರಷ್ಟು ನೋಟುಗಳು ವಾಪಸ್ ಮರಳಿದ್ದು, ಕೇವಲ 6,471 ಕೋಟಿ ರೂ. ಮೌಲ್ಯದ 2000 ರೂ ಮುಖಬೆಲೆ ನೋಟುಗಳು ಮಾತ್ರ ಸಾರ್ವಜನಿಕರ ಬಳಿ ಇವೆ ಎಂದು ರಿಸರ್ವ್ ಬ್ಯಾಂಕ್ ಆಪ್ ಇಂಡಿಯಾ ಶನಿವಾರ ತಿಳಿಸಿದೆ.
ಮೇ 19, 2023 ರಂದು, ಭಾರತೀಯ ರಿಸರ್ವ್ ಬ್ಯಾಂಕ್ 2000 ರೂ.ಗಳ ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂತೆಗೆದು ಕೊಳ್ಳುವುದಾಗಿ ಘೋಷಿಸಿತು.
ಮೇ 19, 2023 ರಂದು ವ್ಯವಹಾರದ ಮುಕ್ತಾಯದ ಸಮಯದಲ್ಲಿ 3.56 ಲಕ್ಷ ಕೋಟಿ ರೂಪಾಯಿ ಮೌಲ್ಯದ 2 ಸಾವಿರ ರೂ. ನೋಟುಗಳು ಚಲಾವಣೆಯಲ್ಲಿದ್ದವು. ಈಗ 2000 ರೂ.ಗಳ ನೋಟುಗಳ ಒಟ್ಟು ಮೌಲ್ಯವು ಫೆಬ್ರವರಿ 28, 2025 ರ ವರೆಗೆ 6,471 ಕೋಟಿ ರೂಪಾಯಿಗಳಿಗೆ ಇಳಿದಿದೆ ಎಂದು ಆರ್ಬಿಐ ತಿಳಿಸಿದೆ.





