ಉದ್ಯಾವರ: ನೆಹರೂ ಬಗ್ಗೆ ಜಿಲ್ಲಾ ಮಟ್ಟದ ಭಾಷಣ ಸ್ಪರ್ಧೆಯ ಫಲಿತಾಂಶ
ಉದ್ಯಾವರ : ಸೇವಾ ಮತ್ತು ಸಾಂಸ್ಕೃತಿಕ ವೇದಿಕೆ ಉದ್ಯಾವರ ಫ್ರೆಂಡ್ಸ್ ಸರ್ಕಲ್ ಆಶ್ರಯದಲ್ಲಿ ಮಕ್ಕಳ ದಿನಾಚರಣೆಯ ಪ್ರಯುಕ್ತ ಉಡುಪಿ ಜಿಲ್ಲಾ ಮಟ್ಟದ ಪ್ರಾಥಮಿಕ ಶಾಲಾ ಮತ್ತು ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಏರ್ಪಡಿಸಿದ ನೆಹರೂರವರ ಬಗ್ಗೆ ವಿಡಿಯೋ ಭಾಷಣ ಸ್ಪರ್ಧೆಯ ಫಲಿತಾಂಶ ಈ ಕೆಳಗಿನಂತಿದೆ.
ಪ್ರಾಥಮಿಕ ಶಾಲಾ ವಿಭಾಗ
ಪ್ರಥಮ ಬಹುಮಾನ ಕು| ಮನಸ್ವೀ ಕುಲಾಲ್, ೪ನೇ ತರಗತಿ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಲಂಬಾಡಿ ಪದವು, ನಿಟ್ಟೆ, ದ್ವಿತೀಯ ಬಹುಮಾನ ಕು| ಸಮೃದ್ಧಿ ಕುಂದಾಪುರ, ೪ನೇ ತರಗತಿ, ವಿಶ್ವ ವಿನಾಯಕ ನ್ಯಾಷನಲ್ ಇಂಗ್ಲೀಷ್ ಮೀಡಿಯಂ ಸ್ಕೂಲ್, ತೆಕ್ಕಟ್ಟೆ, ಕುಂದಾಪುರ, ತೃತಿಯ ಬಹುಮಾನ ಮಾ| ನಿತಿನ್ ಬಿ. ದೇವಾಡಿಗ, ೭ನೇ ತರಗತಿ, ಎಸ್.ಆರ್.ಎಸ್.ಎಂ.ಎನ್. ಹಿರಿಯ ಪ್ರಾಥಮಿಕ ಶಾಲೆ, ಹೇರಾಡಿ, ಬಾರ್ಕೂರು ಹಾಗೂ ಪ್ರೋತ್ಸಾಹಕ ಬಹುಮಾನ ಕು. ಸಮೀಕ್ಷಾ ಕುಲಾಲ್, ೫ನೇ ತರಗತಿ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸಾಂತೂರು ಕೊಪ್ಲ, ಇನ್ನಾ, ಮಾ| ಲಿಖಿತ್ ಯು. ಕರ್ಕೇರ, ೬ನೇ ತರಗತಿ ಹಿಂದೂ ಹಿರಿಯ ಪ್ರಾಥಮಿಕ ಶಾಲೆ, ಉದ್ಯಾವರ, ಉಡುಪಿ, ಕು| ಆರಾಧ್ಯ ಶೆಟ್ಟಿ, ೨ನೇ ತರಗತಿ , ವಿದ್ಯೋದಯ ಪಬ್ಲಿಕ್ ಸ್ಕೂಲ್, ವಾದಿರಾಜ ರಸ್ತೆ, ಉಡುಪಿ. ಕು. ಐಶ್ವರ್ಯ, ೭ನೇ ತರಗತಿ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ತಲ್ಲೂರು, ಕು. ಖ್ಯಾತಿ ಎಚ್. ಕುಂದರ್ ೭ನೇ ತರಗತಿ, ವಿದ್ಯಾವರ್ಧಕ ಸೆಂಟ್ರಲ್ ಸ್ಕೂಲ್, ಶಿರ್ವ.
ಪ್ರೌಢ ಶಾಲಾ ವಿಭಾಗ
ಪ್ರಥಮ ಬಹುಮಾನ ಕು| ರಿತಿಕಾ ಎಸ್. ೯ನೇ ತರಗತಿ ಸರಕಾರಿ ಪ್ರೌಢ ಶಾಲೆ, ಸಿದ್ಧಾಪುರ, ದ್ವಿತೀಯ ಬಹುಮಾನ ಕು| ಆಶಿಕಾ ಕೆಲ, ೯ನೇ ತರಗತಿ, ಸರಕಾರಿ ಪ್ರೌಢ ಶಾಲೆ, ಸಿದ್ಧಾಪುರ, ತೃತೀಯ ಬಹುಮಾನ ಕು| ಶರಣ್ಯಾ ತಂತ್ರಿ, ೯ನೇ ತರಗತಿ ಸೈಂಟ್ ಜೋಸೆಫ್ ಇಂಗೀಷ್ ಮೀಡಿಯಂ ಸ್ಕೂಲ್, ಬೆಳ್ಮಣ್, ಪ್ರೋತ್ಸಾಹಕ ಬಹುಮಾನ : ಕು| ಧೃತಿ , ೧೦ನೇ ತರಗತಿ, ಸರಕಾರಿ ಪ್ರೌಢ ಶಾಲೆ, ಸೂಡ, ಕು| ಎಚ್. ವರ್ಷಾ ರವಿಶಂಕರ್, ೯ನೇ ತರಗತಿ , ಸರಕಾರಿ ಪದವಿ ಪೂರ್ವ ಕಾಲೇಜು (ಪ್ರೌಢ ಶಾಲಾ ವಿಭಾಗ), ಹಾಲಾಡಿ , ಕು| ಶ್ರೇಯಾ ಜೆ. ಶೆಟ್ಟಿ, ೯ನೇ ತರಗತಿ, ಸರಕಾರಿ ಪ್ರೌಢ ಶಾಲೆ, ಹೆಸ್ಕೂತ್ತೂರು, ಕು| ಅಲ್ಶಿಫಾ ಬಾನು, ೧೦ನೇ ತರಗತಿ, ಸರಕಾರಿ ಸಂಯುಕ್ತ ಪ್ರೌಢ ಶಾಲೆ, ವಳಕಾಡು, ಕು| ಅಪೇಕ್ಷಾ ಡಿ. ಪೂಜಾರಿ, ೯ನೇ ತರಗತಿ, ವಿವೇಕ ಆಂಗ್ಲ ಮಾಧ್ಯಮ ಶಾಲೆ, ಕೋಟ, ಕು| ವೈಷ್ಣವಿ ಶೆಟ್ಟಿ, ೯ನೇ ತರಗತಿ, ಸರಕಾರಿ ಪ್ರೌಢ ಶಾಲೆ, ಸಿದ್ಧಾಪುರ.
ಸ್ಪರ್ಧೆಯ ತೀರ್ಪುದಾರರಾಗಿ ವಿಮರ್ಶಕ, ಶಿಕ್ಷಕ ಪ್ರಭಾಕರ ಜಿ.ಪಿ., ಸಾಮಾಜಿಕ ಕಾರ್ಯಕರ್ತೆ ಶ್ರೀಮತಿ ಅಮೃತಾ ಡಿ. ಶೆಟ್ಟಿ, ರಾಷ್ಟ್ರಮಟ್ಟದ ಭಾಷಣ ಸ್ಪರ್ಧೆಯಲ್ಲಿ ಬಹುಮಾನ ವಿಜೇತ ಶ್ರೇಯಸ್ ಜಿ. ಕೋಟ್ಯಾನ್ ಸಹಕರಿಸಿದ್ದರು.
ಜಿಲ್ಲೆಯಾದ್ಯಂತ ಪ್ರಾಥಮಿಕ ಶಾಲೆಯ ೪೨೨ ಸ್ಪರ್ಧಿಗಳು ಮತ್ತು ಪ್ರೌಢ ಶಾಲೆಯ ೩೦೬ ಸ್ಪರ್ಧಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ವಿಜೇತರಿಗೆ ರೂ. ೩೦೦೦, ರೂ.೨೦೦೦, ರೂ. ೧೦೦೦ ಮತ್ತು ರೂ. ೫೦೦ ರಂತೆ ೫ ಪ್ರೋತ್ಸಾಹಕ ನಗದು ಬಹುಮಾನ ಮತ್ತು ಪುಸ್ತಕ ಸ್ಮರಣಿಕೆ ಮತ್ತು ಪ್ರಮಾಣ ಪತ್ರ ನೀಡಲಾಗುವುದು. ಭಾಗವಹಿಸಿದ ಎಲ್ಲರಿಗೂ ಪ್ರಮಾಣ ಪತ್ರ ನೀಡುವ ಬಗ್ಗೆ ಸಂಸ್ಥೆ ಯೋಚಿಸುತ್ತಿದೆ.