ಶಿರ್ವ: ಮುಖ್ಯ ರಸ್ತೆಯ ಅಂಗಡಿಯ ಮುಂಭಾಗವೇ ಆತ್ಮಹತ್ಯೆ ಮಾಡಿಕೊಂಡ ಯುವಕ!
ಶಿರ್ವ: (ಉಡುಪಿ ಟೈಮ್ಸ್ ವರದಿ) ಇಲ್ಲಿನ ಮುಖ್ಯ ರಸ್ತೆಯ ಸೈಕಲ್ ಅಂಗಡಿಯ ಮುಂಭಾಗವೇ ಯುವಕನೊರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಗುರುವಾರ ರಾತ್ರಿ ನಡೆದಿದೆ.
ವಿಪರೀತ ಕುಡಿತದ ಚಟಹೊಂದಿರುವ ಮಟ್ಟಾರು ನಿವಾಸಿ ಅಕ್ಷತ್ ಪೂಜಾರಿ (35) ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಶಿರ್ವ ಠಾಣೆಯಲ್ಲಿ ದೂರು ದಾಖಲಾಗಿದೆ.
ಶಿರ್ವ ಮುಖ್ಯ ರಸ್ತೆಯಲ್ಲಿರುವ ಶೀನ ಪೂಜಾರಿಯವರ ಸೈಕಲ್ ಶಾಪ್ ಮುಂಬಾಗ ಅಕ್ಷತ್ ಪೂಜಾರಿ ಆತ್ಮತ್ಯೆ ಮಾಡಿಕೊಂಡಿದ್ದು, ಗುರುವಾರ ರಾತ್ರಿಯಿಂದ ಶುಕ್ರವಾರ ಮುಂಜಾನೆಯ ಅವಧಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಿರ್ವ ಪೊಲೀಸರು ತಿಳಿಸಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ, ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.