ಉಡುಪಿ: ಕ್ರೈಸ್ತ ಅಭಿವೃದ್ಧಿ ನಿಗಮ ಮರುಸ್ಥಾಪಿಸುವಂತೆ ಕ್ರೈಸ್ತ ಸಂಘಟನೆಗಳ ಆಗ್ರಹ

ಉಡುಪಿ: ಕರ್ನಾಟಕ ಕ್ರೈಸ್ತ ಅಭಿವೃದ್ಧಿ ನಿಗಮದ ಪ್ರಸ್ತಾವನೆಯನ್ನು ರದ್ದು ಗೊಳಿಸಿರುವ ಸರಕಾರದ ನಿರ್ಧಾರನ್ನು ಮರು ಪರಿಶೀಲಿಸಬೇಕು ಎಂದು ಕ್ರೈಸ್ತ ಸಂಘಟನೆಗಳು ಆಗ್ರಹಿಸಿದೆ.

ಈ ಬಗ್ಗೆ  ಉಡುಪಿಯ ಪತ್ರಿಕಾ ಭವನದಲ್ಲಿ ಮಾತನಾಡಿದ ಕ್ರಿಶ್ಚನ್ ಪೋರಂ ಫಾರ್ ಹೂಮನ್ ರೈಟ್ಸ್ ಉಡುಪಿ ಇದರ ಕಾರ್ಯದರ್ಶಿ ಪ್ರಶಾಂತ್ ಜತ್ತನ್ನ ಅವರು, 2019 ನೇ ಹನಕಾಸು ವರ್ಷದ ಬಜೆಟ್‌ನಲ್ಲಿ ನಮೂದಿತಗೊಂಡಿದ್ದ ಕ್ರೈಸ್ತ  ಅಭಿವೃದ್ಧಿ ನಿಗಮದ ಸ್ಥಾಪನೆಯ ಪ್ರಸ್ತಾವಣೆಯನ್ನು ಸರಕಾರ ರದ್ದು ಗೊಳಿಸಿರುವುದು ರಾಜ್ಯದ ಕ್ರೈಸ್ತ ಸಮುದಾಯಕ್ಕೆ ನಿರಾಸೆಯುಂಟು ಮಾಡಿದೆ.

ಬಹಳಷ್ಟು ಬಡ ಕ್ರೈಸ್ತರು ಸರಕಾರದ ಯೋಜನೆಗಳನ್ನು ಅವಲಂಬಿಸಿಕೊ0ಡಿದ್ದು,  ಸರಕಾರದ ಈ ನಿರ್ಧಾರದಿಂದ ರಾಜ್ಯದ ಬಡ ಹಾಗೂ ಆರ್ಥಿಕವಾಗಿ ಹಿಂದುಳಿದ ಕ್ರೈಸ್ತರು ಸರಕಾರಿ ಸೌಲಭ್ಯದಿಂದ ವಂಚಿತಾರಗುವ ಸಾಧ್ಯತೆ ಇದೆ ಎಂದರು.
 ರಾಜ್ಯಾದ್ಯಂತ ಇರುವ ಕ್ರೈಸ್ತ ಸಮುದಾಯವು, ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ  ಸರಕಾರದ ಜೊತೆಗೂಡಿ ಕಾರ್ಯ ನಿರ್ವಹಿಸುತ್ತಿದ್ದು, ಶಿಕ್ಷಣ, ಸಮಾಜ ಸೇವೆ  ಹಾಗೂ ವೈದ್ಯಕೀಯ ಕ್ಷೇತ್ರಗಳಲ್ಲಿ ಶ್ರಮಿಸುತ್ತಿದ್ದೆ.

ಇಂತಹ ಸಂದರ್ಭದಲ್ಲಿ ಸರಕಾರದ ಈ ನಿರ್ಧಾರ ರಾಜ್ಯದಲ್ಲಿ ಸೌಹಾರ್ಧತೆಯಿಂದ ಸಹಬಾಳ್ವೆ ನಡೆಸತ್ತಿರುವ ಕ್ರೈಸ್ತರಿಗೆ ಅತೀವ ನೊಂವು0ಟು ಮಾಡಿದೆ. ಆದ್ದರಿಂದ, ಸರಕಾರ ಕ್ರೈಸ್ತ ಅಭಿವೃದ್ಧಿ ನಿಗಮದ ಸ್ಥಾಪನೆಯ ಪ್ರಸ್ತಾವಣೆ ರದ್ದತಿಯ ನಿರ್ಧಾರವನ್ನು ಕೈ ಬಿಟ್ಟು, ಪ್ರಸ್ತಾಪಿತ ನಿಗಮವನ್ನು ಸ್ಥಾಪಿಸಿ, ಈ ವರೆಗೆ ಕ್ರೈಸ್ತರಿಗೆ ದೊರಕುತ್ತಿದ್ದ ಸವಲತ್ತುಗಳೊಂದಿಗೆ ಅಲ್ಪ ಸಂಖ್ಯಾತ ಇಲಾಖೆಯಿಂದ ಕೊಡಲಾಗುತ್ತಿದ್ದ ಸೌಲಭ್ಯಗಳನ್ನು ಕೂಡಾ ನಿಗಮದ ಅಡಿಯಲ್ಲಿ ರಾಜ್ಯದ ಕ್ರೈಸ್ತರಿಗೆ ಸಿಗುವಂತೆ ಮಾಡಬೇಕು ಎಂದು ಮುಖ್ಯ ಮಂತ್ರಿ ಬಿ ಎಸ್ ಯಡಿರೂರಪ್ಪ ಅವರಿಗೆ ಮನವಿ ಮಾಡಿದರು.

 ಗೋಷ್ಠಿಯಲ್ಲಿ ಕಥೋಲಿಕ್ ಸಭಾ ಉಡುಪಿ ಪ್ರದೇಶ್ ಅಧ್ಯಕ್ಷ ರೊಬರ್ಟ್ ಮಿನೇಜಸ್, ನಿಕಟ ಪೂರ್ವ ಅಧ್ಯಕ್ಷ ಅಲ್ವಿನ್ ಕ್ವಾಡ್ರಸ್,  ಕರ್ನಾಟಕ ಕ್ರೈಸ್ತ ಸಂಘ ಸಂಸ್ಥೆಗಳ ಅಂತರಾಷ್ಟ್ರೀಯ ಒಕ್ಕೂಟದ ಗೌರವಾಧ್ಯಕ್ಷ ಲೂವೀಸ್ ಲೋಬೊ, ಕರ್ನಾಟಕ ಕ್ರೈಸ್ತ ಸಂಘ ಸಂಸ್ಥೆಗಳ ಅಂತರಾಷ್ಟ್ರೀಯ ಒಕ್ಕೂಟದ ಅಧ್ಯಕ್ಷ ಡಾ. ನೇರಿ ಕರ್ನೆಲಿಯೋ, ಭಾರತೀಯ ಕ್ರೈಸ್ತ ಒಕ್ಕೂಟ ಉಡುಪಿ ಇದರ ಅಧ್ಯಕ್ಷ ಚಾರ್ಲ್ಸ್ ಅಂಬ್ಲರ್, ಸೈಂಟ್ ಮೇರಿ ಒರ್ಥಡೊಕ್ಸ್ ಸಿರಿಯನ್ ಚರ್ಚ್ ಉಡುಪಿ ಇದರ ಕಾರ್ಯದರ್ಶಿ ಆಲನ್ ರೋಹನ್ ವಾಝ್, ಟ್ರಸ್ಟಿ ತೋಮಸ್ ಸುವಾರೀಸ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!