ರೈಲ್ವೆಯಲ್ಲಿ ಉದ್ಯೋಗ ಕೊಡಿಸುವುದಾಗಿ ಹದಿನೈದಕ್ಕೂ ಹೆಚ್ಚು ಜನರಿಗೆ ವಂಚಿಸಿದಾತನ ಬಂಧನ

ಉಡುಪಿ: (ಉಡುಪಿ ಟೈಮ್ಸ್ ವರದಿ) ಕೊಂಕಣ ರೈಲ್ವೆಯಲ್ಲಿ ಉದ್ಯೋಗ ಕೊಡಿಸುವುದಾಗಿ ಹದಿನೈದಕ್ಕೂ ಹೆಚ್ಚು ಜನರಿಗೆ ವಂಚಿಸಿದಾತ ಉಡುಪಿ ಪೊಲೀಸರ ಅತಿಥಿಯಾಗಿದ್ದಾನೆ.

ಉಡುಪಿ, ಮಂಗಳೂರು, ಉತ್ತರ ಕನ್ನಡದ ನಿರುದ್ಯೋಗಿಗಳಿಗೆ ರೈಲ್ವೆಯಲ್ಲಿ ಕೆಲಸ ತೆಗೆಸಿಕೊಡುವುದಾಗಿ ನಂಬಿಸಿ ವಂಚಿಸಿದಾತ ಹೊನ್ನಾವರದ ಹಾರಂಗಡಿ ನಿವಾಸಿ ಗಣೇಶ ನಾರಾಯಣ ನಾಯ್ಕ್ ಎಂದು ತಿಳಿದು ಬಂದಿದೆ. ಕೊಂಕಣ ರೈಲ್ವೆ ಉದ್ಯೋಗಿಯೆಂದು ನಕಲಿ ಐಡಿ ಕಾರ್ಡ್ ಮಾಡಿಸಿಕೊಂಡು ಇತ ವಂಚಿಸುತ್ತಿದ್ದ.

ಮಣಿಪಾಲ ಕೆಎಂಸಿ ಆಸ್ಪತ್ರೆಯ ಸೆಕ್ಯೂರಿಟಿ ಮಥಾಯಿಸ್ ಗೆ ಉದ್ಯೋಗ ಭರವಸೆ ನೀಡಿದ್ದ ಗಣೇಶನನ್ನ ಸಂಪರ್ಕಿಸಿದಾಗ ಇತನ ವಂಚನೆ ಬೆಳಕಿಗೆ ಬಂದಿದೆ.

ಈ ಬಗ್ಗೆ ಕಾರ್ಯಪ್ರವೃತ್ತರಾದ ಉಡುಪಿ ವೃತ್ತ ನಿರೀಕ್ಷಕರಾದ ಮಂಜುನಾಥ ನಾಯಕ್, ಉಡುಪಿ ನಗರ ಠಾಣೆಯ ಪೊಲೀಸ್ ಉಪನಿರೀಕ್ಷಕಗಳಾದ ಸಕ್ತಿವೇಲು.ಇ ಮತ್ತು ವಾಸಪ್ಪ ನಾಯ್ಕ ಹಾಗೂ ಸಿಬ್ಬಂದಿಗಳನ್ನು ಒಳಗೊಂಡ ವಿಶೇಷ ತಂಡವನ್ನು ರಚಿಸಿದ್ದು, ರೈಲ್ವೆ ಪೊಲೀಸ್ ಇನ್ಸ್‌‌ಪೆಕ್ಟರ್ ಸಂತೋಷ್ ಗಾಂವ್ಕರ್  ಹಾಗೂ ಸಿಬ್ಬಂದಿಯವರ ಸಹಕಾರದೊಂದಿಗೆ ಆರೋಪಿಯನ್ನು ಮಂಗಳವಾರ ಬಂಧಿಸಿಲಾಗಿದೆ. ಆತನ ವಿಚಾರಣೆಗೆ ಒಳಪಡಿಸಿದಾಗ ಹದಿನೈದಕ್ಕೂ ಹೆಚ್ಚು ಜನರಲ್ಲಿ ಹದಿನೈದರಿಂದ ಇಪ್ಪತ್ತು ಸಾವಿರ ಪಡೆದು ಉದ್ಯೋಗದ ಭರವಸೆ ನೀಡಿ ವಂಚಿಸಿದ್ದು ತನಿಖೆಯಿಂದ ತಿಳಿದು ಬಂದಿದೆ.

ಪರ್ಕಳದ ವನಿತಾ ಎಂಬವರಿಂದ ಹಣ ಪಡೆದು, ನಕಲಿ ನೇಮಕಾತಿ ಪತ್ರವನ್ನು ನೀಡಿ ಉದ್ಯೋಗ ಕೊಡಿಸದೆ ಮೋಸ ಮಾಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಈ ಕಾರ್ಯಚರಣೆಯು ಪೊಲೀಸ್‌ ಅಧೀಕ್ಷಕ ಎನ್‌. ವಿಷ್ಣುವರ್ಧನ್‌, ಹೆಚ್ಚುವರಿ ಉಪಾಧೀಕ್ಷಕ ಕುಮಾರಚಂದ್ರ ,ಉಡುಪಿ ನಗರ ವೃತ್ತದ ಸಿ.ಪಿ.ಐ ಮಂಜುನಾಥ , ಉಡುಪಿ ನಗರ ಠಾಣೆಯ ಪಿಎಸ್‌‌ಐಗಳಾದ ಸಕ್ತಿವೇಲು.ಇ, ಮತ್ತು ವಾಸಪ್ಪ ನಾಯ್ಕ, ಸಿಬ್ಬಂದಿಯವರಾದ ಎಎಸ್‌‌ಐ ಹರೀಶ್, ಹೆಚ್‌‌ಸಿ ಲೋಕೇಶ್, ಹೆಚ್‌‌ಸಿ ರಿಯಾಝ್,ಅಹ್ಮದ್, ಹೆಚ್‌‌ಸಿ ಹರ್ಷ, ಹೆಚ್‌‌ಸಿ ಉಮೇಶ್, ಪಿಸಿ ಇಮ್ರಾನ್, ಪಿಸಿ ಸಂತೋಷ್ ರಾಠೋಡ್,  ಪಿ.ಸಿ ವಿಶ್ವನಾಥ ಶೆಟ್ಟಿ , ಚಾಲಕರಾದ ರಾಘವೇಂದ್ರ ರವರು ಪತ್ತೆ ಕಾರ್ಯದಲ್ಲಿ ಭಾಗವಹಿಸಿರುತ್ತಾರೆ.

1 thought on “ರೈಲ್ವೆಯಲ್ಲಿ ಉದ್ಯೋಗ ಕೊಡಿಸುವುದಾಗಿ ಹದಿನೈದಕ್ಕೂ ಹೆಚ್ಚು ಜನರಿಗೆ ವಂಚಿಸಿದಾತನ ಬಂಧನ

  1. Strict action should be taken against the person who cheated the people for false appointment in konkan Railway.

Leave a Reply

Your email address will not be published. Required fields are marked *

error: Content is protected !!