ರಾಜ್ಯೋತ್ಸವ ಪ್ರಶಸ್ತಿ 2020: 65 ಸಾಧಕರಿಗೆ ಪ್ರಕಟ

ಬೆಂಗಳೂರು: ಕೋವಿಡ್-19, ಉಪ ಚುನಾವಣೆ ಮಧ್ಯೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಬುಧವಾರ ಪ್ರಕಟಗೊಂಡಿದೆ. ಸಾಹಿತ್ಯದಲ್ಲಿ ಪ್ರೊ.ಸಿ.ಪಿ.ಸಿದ್ಧಾಶ್ರಮ, ಸಂಗೀತ ಕ್ಷೇತ್ರದಲ್ಲಿ ಹಂಬಯ್ಯ ನೂಲಿ, ಪತ್ರಕರ್ತ ಟಿ ವೆಂಕಟೇಶ್ ಸೇರಿದಂತೆ 65 ಮಂದಿಗೆ ಈ ಬಾರಿ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗಿದೆ.

ರಾಜ್ಯೋತ್ಸವ ಪ್ರಶಸ್ತಿ ಪಡೆದ ಪ್ರಮುಖರು:
ಸಾಹಿತ್ಯ: ಪ್ರೊ.ಸಿ.ಪಿ.ಸಿದ್ಧಾಶ್ರಮ (ಧಾರವಾಡ), ವಿ.ಮುನಿವೆಂಕಟಪ್ಪ (ಕೋಲಾರ), ರಾಮಣ್ಣ ಬ್ಯಾಟಿ (ಗದಗ), ವಲೇರಿಯನ್ ಡಿಸೋಜ (ವಲ್ಲಿವಗ್ಗ), ಡಿ.ಎನ್.ಅಕ್ಕಿ (ಯಾದಗಿರಿ).

ಸಂಗೀತ: ಹಂಬಯ್ಯ ನೂಲಿ (ರಾಯಚೂರು), ಅನಂತ ತೇರದಾಳ (ಬೆಳಗಾವಿ), ಬಿ.ವಿ.ಶ್ರೀನಿವಾಸ್ ಮತ್ತು ಗಿರಿಜಾ ನಾರಾಯಣ (ಬೆಂಗಳೂರು ನಗರ), ಕೆ.ಲಿಂಗಪ್ಪ ಶೇರಿಗಾರ (ದಕ್ಷಿಣ ಕನ್ನಡ)

ನ್ಯಾಯಾಂಗ: ಕೆ.ಎನ್.ಭಟ್ (ಬೆಂಗಳೂರು), ಎಂ.ಕೆ.ವಿಜಯಕುಮಾರ (ಉಡುಪಿ)

ಮಾಧ್ಯಮ: ಸಿ.ಮಹೇಶ್ವರನ್ (ಮೈಸೂರು), ಟಿ.ವೆಂಕಟೇಶ್ (ಬೆಂಗಳೂರು ನಗರ)

ಯೋಗ: ಡಾ.ಎ.ಎಸ್.ಚಂದ್ರಶೇಖರ (ಮೈಸೂರು)

ಶಿಕ್ಷಣ: ಎಂ.ಎನ್.ಷಡಕ್ಷರಿ (ಚಿಕ್ಕಮಗಳೂರು), ಡಾ.ಆರ್.ರಾಮಕೃಷ್ಣ (ಚಾಮರಾಜನಗರ), ಡಾ.ಎಂ.ಜಿ.ಈಶ್ವರಪ್ಪ (ದಾವಣಗೆರೆ), ಡಾ.ಪುಟ್ಟಸಿದ್ದಯ್ಯ (ಮೈಸೂರು), ಅಶೋಕ್ ಶೆಟ್ಟರ್ (ಬೆಳಗಾವಿ), ಡಿ.ಎಸ್.ದಂಡಿನ್ (ಗದಗ)

ಸಂಕೀರ್ಣ: ಡಾಕೆ.ವಿ.ರಾಜು (ಕೋಲಾರ), ನಂ.ವೆಂಕೋಬರಾವ್ (ಹಾಸನ), ಡಾ.ಕೆ.ಎಸ್.ರಾಜಣ್ಣ (ಮಂಡ್ಯ), ವಿ.ಲಕ್ಷ್ಮಿನಾರಾಯಣ (ಮಂಡ್ಯ).

ಸಂಘ-ಸಂಸ್ಥೆ: ಯೂತ್‌ ಫಾರ್ ಸೇವಾ, ಬೆಟರ್‌ ಇಂಡಿಯಾ (ಬೆಂಗಳೂರು ನಗರ), ದೇವದಾಸಿ ಸ್ವಾವಲಂಬನ ಕೇಂದ್ರ (ಬಳ್ಳಾರಿ), ಯುವ ಬ್ರಿಗೇಟ್ (ಬೆಂಗಳೂರು ಗ್ರಾಮಾಂತರ), ಧರ್ಮೋತ್ಥಾನ ಟ್ರಸ್ಟ್ (ಧರ್ಮಸ್ಥಳ)

ಸಮಾಜಸೇವೆ: ಎನ್.ಎಸ್.ಕುಂದರಗಿ ಹೆಗಡೆ (ಉತ್ತರ ಕನ್ನಡ, ಪ್ರೇಮಾ ಕೋದಂಡರಾಮ ಶ್ರೇಷ್ಠಿ, ಮೋಹಿನಿ ಸಿದ್ದೇಗೌಡ (ಚಿಕ್ಕಮಗಳೂರು), ಮಣೆಗಾರ ಮಿರಾನ್ ಸಾಹೇಬ್ (ಉಡುಪಿ).

ವೈದ್ಯಕೀಯ: ಡಾ.ಅಶೋಕ್ ಸೊನ್ನದ್ (ಬಾಗಲಕೋಟೆ), ಡಾ.ಬಿ.ಎಸ್.ಶ್ರೀನಾಥ (ಶಿವಮೊಗ್ಗ), ಡಾ.ಎ.ನಾಗರತ್ನ (ಬಳ್ಳಾರಿ), ಡಾ.ವೆಂಕಟಪ್ಪ (ರಾಮನಗರ)

ಕೃಷಿ: ಸುರತ್ ಸಿಂಗ್ ಕನೂರ್ ಸಿಂಗ್ ರಜಪೂತ್ (ಬೀದರ್), ಎಸ್.ವಿ.ಸುಮಂಗಲಮ್ಮ ವೀರಭದ್ರಪ್ಪ (ಚಿತ್ರದುರ್ಗ), ಡಾ.ಸಿದ್ರಾಮಪ್ಪ ಬಸವಂತರಾವ್ ಪಾಟೀಲ್ (ಕಲಬುರ್ಗಿ).

ರಂಗಭೂಮಿ: ಅನಸೂಯಮ್ಮ (ಹಾಸನ), ಎಚ್.ಷಡಕ್ಷರಪ್ಪ (ದಾವಣಗೆರೆ), ತಿಪ್ಪೇಸ್ವಾಮಿ (ಚಿತ್ರದುರ್ಗ).

ಚಲನಚಿತ್ರ: ಬಿ.ಎಸ್.ಬಸವರಾಜ್ (ತುಮಕೂರು), ಆಪಾಢಾಂಡ ತಿಮ್ಮಯ್ಯ ರಘು (ಕೊಡಗು).

ಚಿತ್ರಕಲೆ: ಎಂ.ಜೆ.ವಾಚೇದ್‌ಮಠ (ಧಾರವಾಡ)

ಜಾನಪದ: ಗುರುರಾಜ ಹೊಸಕೋಟೆ (ಬಾಗಲಕೋಟೆ), ಡಾ.ಹಂಪನಹಳ್ಳಿ ತಿಮ್ಮೇಗೌಡ (ಹಾಸನ).

ಶಿಲ್ಟಕಲೆ: ಎನ್.ಎಸ್.ಜನಾರ್ದನಮೂರ್ತಿ (ಮೈಸೂರು).

ನೃತ್ಯ: ವಿದುಷಿ ಜ್ಯೋತಿ ಪಟ್ಟಾಭಿರಾಮ್

ಜಾನಪದ/ತೊಗಲು ಗೊಂಬೆಯಾಟ: ಕೇಶಪ್ಪ ಶಿಳ್ಳೇಕ್ಯಾತರ (ಕೊಪ್ಪಳ) 

Leave a Reply

Your email address will not be published. Required fields are marked *

error: Content is protected !!