ಸ್ವಂತ ಮನೆ, ಕಾರು ಇಲ್ಲದ ಪ್ರಧಾನಿ ಮೋದಿ ಆಸ್ತಿ ಮೌಲ್ಯ ಎಷ್ಟು ಕೋಟಿ ಗೊತ್ತಾ…?

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ತಮ್ಮ ಕ್ಷೇತ್ರವಾದ ವಾರಣಾಸಿಯಲ್ಲಿ ಚುನಾವಣಾ ನಾಮಪತ್ರದೊಂದಿಗೆ ಸಲ್ಲಿಸಿರುವ ಅಫಿಡವಿಟ್‌ನಲ್ಲಿ ರೂ 3.02 ಕೋಟಿ ಮೌಲ್ಯದ ಸಂಪತ್ತು ಇದೆ ಎಂದು ಘೋಷಿಸಿದ್ದಾರೆ. ಆದರೆ ಅವರ ಅಫಿಡವಿಟ್‌ ಪ್ರಕಾರ ಅವರ ಬಳಿ ಯಾವುದೇ ಮನೆ ಅಥವಾ ಕಾರುಗಳಿಲ್ಲ.

ಅಫಿಡವಿಟ್‌ ಪ್ರಕಾರ ಅವರು ರೂ 2.86 ಕೋಟಿ ಮೌಲ್ಯದ ಫಿಕ್ಸೆಡ್‌ ಡೆಪಾಸಿಟ್‌ ಅನ್ನು ಎಸ್‌ಬಿಐನಲ್ಲಿ ಮಾಡಿದ್ದಾರೆ. ಅವರ ಬಳಿ ಇರುವ ನಗದು ರೂ 52,920 ಆಗಿದೆ ಹಾಗೂ ಗಾಂಧಿನಗರ ಮತ್ತು ವಾರಣಾಸಿಯಲ್ಲಿರುವ ಅವರ ಎರಡು ಬ್ಯಾಂಕ್‌ ಖಾತೆಗಳಲ್ಲಿ ರೂ 80,304 ಹಣವಿದೆ.

ಪ್ರಧಾನಿ ಎನ್‌ಎಸ್‌ಸಿ ಯಲ್ಲಿ ರೂ 9.12 ಲಕ್ಷ ಹೂಡಿಕೆ ಮಾಡಿದ್ದಾರೆ ಹಾಗೂ ರೂ 2.68 ಲಕ್ಷ ಮೌಲ್ಯದ ನಾಲ್ಕು ಚಿನ್ನದ ಉಂಗುರಗಳನ್ನು ಹೊಂದಿದ್ದಾರೆ. ಅವರ ಆದಾಯ 2018-19ರಲ್ಲಿ ರೂ 11.14 ಲಕ್ಷ ಆಗಿದ್ದರೆ ಅದು 2022-23ರಲ್ಲಿ ರೂ 23.56 ಲಕ್ಷಕ್ಕೆ ಏರಿಕೆಯಾಗಿದೆ.

ದಿಲ್ಲಿ ವಿವಿಯಿಂದ 1978ರಲ್ಲಿ ಬಿಎ ಪದವಿ ಪಡೆದಿರುವುದಾಗಿ ಹಾಗೂ 1983ರಲ್ಲಿ ಗುಜರಾತ್‌ ವಿವಿಯಿಂದ ಎಂಎ ಪದವಿ ಪಡೆದಿದ್ದಾಗಿ ಹಾಗೂ ತಮ್ಮ ವಿರುದ್ಧ ಯಾವುದೇ ಕ್ರಿಮಿನಲ್‌ ಪ್ರಕರಣಗಳಿಲ್ಲ ಎಂದು ಅವರು ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!