ಹಿರಿಯಡ್ಕ: ಪತ್ನಿ, ಮಗುವಿನ ಯೋಗಕ್ಷೇಮ ನೋಡದ ಪತಿಯ ವಿರುದ್ಧ ಪ್ರಕರಣ ದಾಖಲು

ಹಿರಿಯಡ್ಕ, ಮೇ 15: ಪತ್ನಿ ಮತ್ತು ಮಗುವಿನ ಯೋಗಕ್ಷೇಮ ನೋಡಿಕೊಳ್ಳದ ಪತಿಯ ವಿರುದ್ಧ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪೆರ್ಡೂರು ಗ್ರಾಮದ ಅನಿತಾ (26) ಎಂಬವರು 2022ರ ಫೆ.20ರಂದು ಪ್ರಸಾದ್ ಕುಮಾರ್ ಎಂಬಾತನನ್ನು ಮದುವೆಯಾ ಗಿದ್ದು, ಮದುವೆಯ 3 ತಿಂಗಳ ಬಳಿಕ ಆತ, ನೀನು ನನಗೆ ಇಷ್ಟವಿಲ್ಲ ಎಂದು ಹೀಯಾಳಿಸಿ ಕಿರುಕುಳ ನೀಡುತ್ತಿದ್ದ ಎಂದು ದೂರಲಾಗಿದೆ. ಅನಿತಾ ಹಾಗೂ ಆಕೆ ಜನ್ಮ ನೀಡಿದ ಗಂಡು ಮಗುವಿನ ಯೋಗ ಕ್ಷೇಮ ನೋಡದೆ ನಿರ್ಲಕ್ಷಿಸಿರುವ ಪ್ರಸಾದ್ ಕುಮಾರ್ ವಿರುದ್ಧ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!