ಸರ್ಕಾರದ ಚಕ್ರ ಬಡ್ಡಿ ಮನ್ನಾ ಯೋಜನೆ: ಅಧಿಸೂಚನೆ ಹೊರಡಿಸಿದ ಆರ್‌ಬಿಐ

ಮುಂಬೈ: ಲಾಕ್‌ಡೌನ್‌ ಅವಧಿಯಲ್ಲಿ ಸಾಲಗಾರರ ಚಕ್ರ ಬಡ್ಡಿ ಮನ್ನಾ ಮಾಡುವ ಸರ್ಕಾರದ ಯೋಜನೆ ಕುರಿತು ಭಾರತೀಯ ರಿಸರ್ವ್‌ ಬ್ಯಾಂಕ್‌(ಆರ್‌ಬಿಐ) ಮಂಗಳವಾರ ಅಧಿಸೂಚನೆ ಹೊರಡಿಸಿದೆ.

ಜೊತೆಗೆ, ಎಲ್ಲಾ ಸಾಲ ನೀಡುವ ಸಂಸ್ಥೆಗಳಿಗೆ ನಿಗದಿತ ಸಮಯದಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ ಆರ್ ಬಿಐ ಸೂಚನೆ ನೀಡಿದೆ.

ಈ ಕುರಿತು ಪ್ರಕಟಣೆ ಹೊರಡಿಸಿರುವ ಆರ್‌ಬಿಐ, ಸರ್ಕಾರ ಅಕ್ಟೋಬರ್ 23, 2020 ರಂದು ನಿಗದಿತ ಸಾಲ ಖಾತೆಗಳಲ್ಲಿ (2020 ಮಾ.1 ರಿಂದ ಆ.31) ಸಾಲಗಾರರಿಗೆ ಆರು ತಿಂಗಳ ಕಾಲ ಚಕ್ರ ಬಡ್ಡಿ ಮತ್ತು ಸರಳ ಬಡ್ಡಿ ನಡುವಿನ ವ್ಯತ್ಯಾಸವನ್ನು ಎಕ್ಸ್-ಗ್ರೇಷಿಯಾ ಪಾವತಿ ನೀಡುವ ಯೋಜನೆ ಪ್ರಕಟಿಸಿದೆ.

ಇದರ ಅನುಸಾರ ಮಾರ್ಚ್ 1 ರಿಂದ ಆಗಸ್ಟ್ 31ರವರೆಗಿನ ಅವಧಿಗೆ ಆಯಾ ಸಾಲ ನೀಡುವ ಸಂಸ್ಥೆಗಳಿಂದ ಸರಳ ಬಡ್ಡಿ ಮತ್ತು ಸಂಯುಕ್ತ ಬಡ್ಡಿ ನಡುವಿನ ವ್ಯತ್ಯಾಸವನ್ನು ಜಮಾ ಮಾಡುವ ಮೂಲಕ ಕೆಲವು ವರ್ಗದ ಸಾಲಗಾರರಿಗೆ ಎಕ್ಸ್-ಗ್ರೇಷಿಯಾ ಪಾವತಿ ಕಡ್ಡಾಯಗೊಳಿಸುತ್ತದೆ ” ಎಂದಿದೆ.

ಈ ಯೋಜನೆ ಅನುಸಾರ ಸರ್ಕಾರ ಚಕ್ರ ಬಡ್ಡಿ ಮತ್ತು ಸರಳ ಬಡ್ಡಿಯ ನಡುವಿನ ವ್ಯತ್ಯಾಸವನ್ನು ಪಾವತಿಸಲಿದೆ. ಬಡ್ಡಿಯ ಮೇಲಿನ ಬಡ್ಡಿಯ ಎಕ್ಸ್‌-ಗ್ರೇಷಿಯಾ ಪಾವತಿ ಆರು ತಿಂಗಳ ಕಾಲ ಅನ್ವಯವಾಗಲಿದೆ ಮತ್ತು ಇದು ಆಯ್ದ ನಿರ್ದಿಷ್ಟ ಸಾಲಗಳಿಗೆ ಸೀಮಿತವಾಗಿರಲಿದೆ. 

ಕೆಲ ದಿನಗಳ ಹಿಂದೆ ಈ ಯೋಜನೆ ಜಾರಿಗೆ ತರುವ ಕುರಿತು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್‌ಗೆ ಪ್ರಮಾಣ ಪತ್ರ ಸಲ್ಲಿಸಿತ್ತು.

Leave a Reply

Your email address will not be published. Required fields are marked *

error: Content is protected !!