ಹೆಬ್ರಿ: ಮನೆಗೆ ನುಗ್ಗಿ 6 ಲಕ್ಷ ರೂ. ಮೌಲ್ಯದ ನಗ ನಗದು ಕಳವು

ಕಡತ ಚಿತ್ರ

ಹೆಬ್ರಿ, ಎ.21: ಮನೆಗೆ ನುಗ್ಗಿದ ಕಳ್ಳರು ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಹಾಗೂ ನಗದು ಕಳವು ಮಾಡಿರುವ ಘಟನೆ ಮುದ್ರಾಡಿ ಎಂಬಲ್ಲಿ ನಡೆದಿದೆ.

ಮುದ್ರಾಡಿ ಗ್ರಾಮದ ಪ್ರಣೀತ್ ಎ.18ರಂದು ಮನೆಗೆ ಬೀಗ ಹಾಕಿ ಹೆಂಡತಿ ಅಜ್ಜಿ ಮನೆಯಾದ ಬೈಲೂರಿಗೆ ಹೋಗಿದ್ದು ಎ.20ರಂದು ಬೆಳಗ್ಗೆ ವಾಪಸು ಬಂದು ನೋಡಿದಾಗ ಈ ಕಳವು ಪ್ರಕರಣ ಬೆಳಕಿಗೆ ಬಂದಿದೆ.

ಮನೆಯ ಬಾಗಿಲು ಮುರಿದು ಒಳನುಗ್ಗಿದ ಕಳ್ಳರು, ಕಾಪಾಟಿನಲ್ಲಿಟ್ಟಿದ್ದ ನೆಕ್ಲೆಸ್, ಒಂದು ಜೊತೆ ಬಳೆ, ಚೈನ್, ಎರಡು ಜೊತೆ ಕಿವಿಯ ಬೆಂಡೊಲೆ, ಕಿವಿಯ ಹ್ಯಾಂಗಿಗ್ ಚೈನ್, ಮೂರು ಉಂಗುರ, ಚಿಕ್ಕ ಕರಿಮಣಿ ಸರ, ಬೆಳ್ಳಿ ಆಭರಣ ಹಾಗೂ 15,000 ರೂ. ನಗದು ಸೇರಿದಂತೆ ಒಟ್ಟು 6 ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ಕಳವು ಮಾಡಿಕೊಂಡು ಹೋಗಿದ್ದಾರೆ ಎಂದು ದೂರ ಲಾಗಿದೆ.

ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!