ದಿ.ಮೇಟಿ ಮುದಿಯಪ್ಪ ಯುವ ಕಥಾ ಸ್ಪರ್ಧೆ- ಡಾ.ನಮ್ರತಾ ಬಿ ಪ್ರಥಮ
ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಉಡುಪಿ ತಾಲೂಕು ಘಟಕದ ಆಶ್ರಯದಲ್ಲಿ ಸಾಹಿತಿ, ಕವಿ ದಿ. ಮೇಟಿ ಮುದಿಯಪ್ಪ ನೆನಪಿನ ಉಡುಪಿ ಜಿಲ್ಲಾಮಟ್ಟದ ಯುವ ಕಥಾ ಸ್ಪರ್ಧೆಯಲ್ಲಿ ಡಾ. ನಮೃತಾ ಬಿ. ಅವರು ಪ್ರಥಮ ಬಹುಮಾನಕ್ಜೆ ಆಯ್ಕೆಯಾಗಿರುತ್ತಾರೆ.
ಬಹುಮಾನವು ನಗದು ರೂ. 5000 ಹಾಗೂ ಪ್ರಶಸ್ತಿ ಪತ್ರ, ಫಲಕ ಒಳಗೊಂಡಿರುತ್ತದೆ. ದ್ವಿತೀಯ ಬಹುಮಾನ ನಗದು ಮೂರು ಸಾವಿರದೊಂದಿಗೆ ಡಾ. ಜಿ.ಪಿ.ನಾಗರಾಜ್ ಆಯ್ಕೆಯಾಗಿರುತ್ತಾರೆ. ತೀರ್ಪುಗಾರರ ಮೆಚ್ಚುಗೆ ಬಹುಮಾನಕ್ಕಾಗಿ ರಾಮಾಂಜಿ ನಮ್ಮಭೂಮಿ, ಮಂಜುನಾಥ ಕಾರ್ತಟ್ಟು ಹಾಗೂ ಮಂಜುನಾಥ ಹಿಲಿಯಾಣ ಆಯ್ಕೆಯಾಗಿರುತ್ತಾರೆ.
ಪ್ರಸಿದ್ಧ ಕಥೆಗಾರ ಡಾ. ಬಿ. ಜನಾರ್ದನ ಭಟ್ ತೀರ್ಪುಗಾರರಾಗಿ ಸಹಕರಿಸಿದ್ದರು. ಮುಂದಿನ ಸಾಹಿತ್ಯ ಪರಿಷತ್ತಿನ ಸಮಾರಂಭದಲ್ಲಿ ಬಹುಮಾನವನ್ನು ನೀಡಲಾಗುವುದು ಎಂದು ಕ ಸಾ ಪ ಉಡುಪಿ ತಾಲೂಕು ಅಧ್ಯಕ್ಷ ರವಿರಾಜ್ ಎಚ್.ಪಿ, ಗೌರವ ಕಾರ್ಯದರ್ಶಿಗಳಾದ ಜನಾರ್ದನ ಕೊಡವೂರು, ರಂಜಿನಿ ವಸಂತ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.