ಉಡುಪಿ: ಆನ್‌ಲೈನ್ ವಂಚನೆಯಲ್ಲಿ 3.35 ಲಕ್ಷ ರೂ. ಕಳೆದುಕೊಂಡ ಇಬ್ಬರು ಮಹಿಳೆಯರು

ಉಡುಪಿ: ಆನ್‌ಲೈನ್ ವಂಚನೆ ಪ್ರಕರಪಣದಲ್ಲಿ 35 ವರ್ಷದ ಮಹಿಳೆಯೊಬ್ಬರು 2.21 ಲಕ್ಷ ರೂ. ಕಳೆದು ಕೊಂಡಿದ್ದಾರೆ. ಮಹಿಳೆಗೆ ಏಪ್ರಿಲ್ 9ರಂದು ವಾಟ್ಸಾಪ್‌ನಲ್ಲಿ ಗೂಗಲ್ ರಿವ್ಯೂ ನೀಡಿದರೆ 50 ರೂಪಾಯಿ ನೀಡುವುದಾಗಿ ಸಂದೇಶ ಬಂದಿತ್ತು.

ಈ ಸಂದೇಶವನ್ನು ನಂಬಿದ ಅವರು ರಿವ್ಯೂ ನೀಡಿದ ಬಳಿಕ 150 ರೂ.ಗಳನ್ನು ಪಡೆದಿದ್ದಾರೆ. ನಂತರ ಅವರಿಗೆ ವಿವಿಧ ಟಾಸ್ಕ್‌ಗಳನ್ನು ನೀಡಲಾಗಿದೆ. ಅವರ ವಿಶ್ವಾಸ ಗಳಿಸಿದ ಆರೋಪಿ ಅವರಿಂದ 2.21 ಲಕ್ಷ ರೂ. ದೋಚಿದ್ದಾರೆ. ಈ ಕುರಿತು ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮತ್ತೊಂದು ಘಟನೆಯಲ್ಲಿ ತ್ರಾಸಿ ಗ್ರಾಮದ 28 ವರ್ಷದ ಮಹಿಳೆಯೊಬ್ಬರು ಆನ್‌ಲೈನ್ ವಂಚಕರಿಂದ 1.14 ಲಕ್ಷ ರೂ. ಕಳೆದುಕೊಂಡಿದ್ದಾರೆ. ಎಪ್ರಿಲ್ 7 ರಂದು ಅವರ ವಾಟ್ಸಾಪ್ ನಂಬರಿಗೆ ಸಂದೇಶ ಬಂದಿದ್ದು, ಲಿಂಕ್ ಅನ್ನು ಕ್ಲಿಕ್ ಮಾಡಿ ಮತ್ತು ಮನೆಯಿಂದ ಕೆಲಸ ಮಾಡಲು ಆಯ್ಕೆ ಮಾಡಿದರೆ ಹಣ ಪಾವತಿಸಲಾಗುವುದು ಎನ್ನಲಾಗಿದೆ.

ಬಳಿಕ ಏ. 8 ಮತ್ತು ಏ. 9 ರಂದು ಅಪರಿಚಿತ ವ್ಯಕ್ತಿಗಳಿಗೆ ಹಂತ ಹಂತವಾಗಿ ಹಣವನ್ನು ಕಳುಹಿಸಿದ್ದಾರೆ. ಆದರೆ, ಮರಳಿ ಅದನ್ನು ಪಡೆಯಲು ಸಾಧ್ಯವಾಗಿಲ್ಲ ಮತ್ತು ಈ ಮೂಲಕ ಅವರು 1.14 ಲಕ್ಷ ರೂ. ಕಳೆದುಕೊಂಡಿದ್ದಾರೆ.

ಈ ಸಂಬಂಧ ಗಂಗೊಳ್ಳಿ ಪೊಲೀಸರು ಐಪಿಸಿ ಸೆಕ್ಷನ್ 417, 420 ಮತ್ತು ಐಟಿ ಕಾಯ್ದೆಯ 66 ಸಿ ಮತ್ತು 66 ಡಿ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!