ಮಂಗಳೂರಿನಲ್ಲಿ ಪ್ರಧಾನಿ ಮೋದಿ ಭರ್ಜರಿ ರೋಡ್ ಶೋ
ಮಂಗಳೂರು: ಮೈಸೂರಿನಲ್ಲಿ ಬಿಜೆಪಿ ಕಾರ್ಯಕರ್ತರ ಸಭೆಯ ಬಳಿಕ ಹಿಂದುತ್ವದ ಭದ್ರಕೋಟೆ ಎನಿಸಿರುವ ಮಂಗಳೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಭರ್ಜರಿ ರೋಡ್ ಶೋ ನಡೆಸಿದರು.
ನಾರಾಯಣಗುರು ವೃತ್ತದಿಂದ ತೆರೆದ ವಾಹನದಲ್ಲಿ ಆರಂಭವಾದ ರೋಡ್ ಶೋ ವೇಳೆ ರಸ್ತೆಯ ಇಕ್ಕೆಲಗಳಲ್ಲಿ ಕಿಕ್ಕಿರಿದ ಸಾವಿರಾರು ಬಿಜೆಪಿ ಕಾರ್ಯಕರ್ತರಿಂದ ಮೋದಿ ಮೋದಿ ಜಯ ಘೋಷ ಮೊಳಗಿಸಿತ್ತು.
ಮೋದಿ ಮುಖವಾಡ, ಕೇಸರಿ ಭಾವುಟ ಹಿಡಿದು ನಿಂತಿದ ಅಭಿಮಾನಿಗಳು, ಜಯ ಘೋಷ ಕೂಗಿ ಸಂಭ್ರಮಿಸಿದರು. ಮಹಿಳಾ ಅಭಿಮಾನಿಗಳು ಮೋದಿ ಅವರತ್ತ ಹೂವಿನ ಮಳೆಗರೆದು ಸ್ವಾಗತ ಕೋರಿದರು. ಪ್ರಧಾನಿ ಮೋದಿ ಅವರೊಂದಿಗೆ ಮಂಗಳೂರು ಕ್ಷೇತ್ರದ ಅಭ್ಯರ್ಥಿ ಬ್ರಿಜೇಶ್ ಚೌಟ, ಕೋಟ ಶ್ರೀನಿವಾಸ್ ಪೂಜಾರಿ ಉಪಸ್ಥಿತರಿದ್ದರು.
ಸಂಸ್ಕೃತಿ ಅನಾವರಣ: ಪ್ರಧಾನಿ ರೋಡ್ ಶೋ ನಡೆಯುವ ರಸ್ತೆಗಳ ಇಕ್ಕೆಲುಗಳಲ್ಲಿ ಕರವಾಳಿಯ ಸಂಸ್ಕೃತಿಯನ್ನು ಅನಾವರಣ ಮಾಡಲಾಯಿತು. ಇದರಂತೆ ದೈವಾರಾಧನೆಯ ತುಣುಕ, ಕಂಬಳದ ಚಿತ್ರಣ, ಹಲಿ ವೇಷ, ಭರತ ನಾಟ್ಯ ಪ್ರದರ್ಶನ ಮೂಲಕ ಮೋದಿಯವರ ಗಮನ ಸೆಳೆಯಲಾಯಿತು. ಕಲಾವಿದರು ರಸ್ತೆಯ ಪಕ್ಕದಲ್ಲಿ ಹುಲಿ ವೇಷ ಹಾಗೂ ಭರತ ನಾಟ್ಯ ಪ್ರದರ್ಶಿಸಿದರು. ದೈವಾರಾಧನೆಯ ತುಣುಕುಗಳನ್ನು ಬೃಹತ್ ಎಲ್‌ಇಡಿ ಪರದೆಯ ಮೇಲೆ ಪ್ರಸಾರ ಮಾಡಲಾಯಿತು.
ರೋಡ್ ಶೋಗೆ ಎಸ್‌ಪಿಜಿ ಭದ್ರತಾ ಕಾರ್ಯ ವಹಿಸಿಕೊಂಡಿತು.