ಕುಂದಾಪುರ: ಅ.23ರಂದು “ರಿಬ್ಬನ್ಸ್ & ಬಲೂನ್ಸ್”ನ 134ನೇ ಶಾಖೆ ಉದ್ಘಾಟನೆ
ಕುಂದಾಪುರ: (ಉಡುಪಿ ಟೈಮ್ಸ್ ವರದಿ) ಮುಂಬಯಿಯ ಪ್ರಖ್ಯಾತ ಕೇಕ್ ತಯಾರಿಕಾ ಸಂಸ್ಥೆಯ ‘ರಿಬ್ಬನ್ಸ್ ಅಂಡ್ ಬಲೂನ್ಸ್’ನ 134ನೇ ಶಾಖೆ ಕುಂದಾಪುರದಲ್ಲಿ ಉದ್ಘಾಟನೆಗೊಳ್ಳಲಿದೆ.
ಉಡುಪಿ ಜಿಲ್ಲೆಯ 15 ನೇ ಶಾಖೆ ಅ.23ರಂದು ಬೆಳಗ್ಗೆ11ಕ್ಕೆ ಕುಂದಾಪುರದ ಮುಖ್ಯ ರಸ್ತೆಯ ಹಾಲಂಬಿ ಕಾಂಪ್ಲೆಕ್ಸ್‌ನ ನೆಲಮಹಡಿಯಲ್ಲಿ ಉದ್ಘಾಟನೆಗೊಳ್ಳಲಿದೆ.
ಮುಖ್ಯ ಅತಿಥಿಗಳಾಗಿ ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ್ ಶೆಟ್ಟಿ, ಸಹಾಯಕ ಕಮೀಷನರ್ ಕೆ. ರಾಜು, ಪುರಸಭಾ ಮುಖ್ಯಧಿಕಾರಿ ಗೋಪಾಲ್ ಶೆಟ್ಟಿ, ಕುಂದಾಪುರ ಹೋಲಿ ರೋಸರಿ ಚರ್ಚ್‌ನ ಧರ್ಮಗುರುಗಳು ವಂ. ಫಾ. ಸ್ಟ್ಯಾನಿ ತವರೊ, ಉದ್ಯಮಿ ಸುಬ್ರಯ ಹಾಲಂಬಿ ಉಪಸ್ಥಿತರಿರುವರು.
ಕೆ. ಶ್ರೀಕಾಂತ್ ಭಟ್ ಮತ್ತು ರಾಜೇಶ್ ರಾವ್ ಪಾಲುದಾರಿಕೆಯಲ್ಲಿ ಚಂದನ್ ಫುಡ್ ಸ್ಟುಡಿಯೋ ಅಡಿಯಲ್ಲಿ ಕಾರ್ಯಾಚರಿಸಲಿರುವ ರಿಬ್ಬನ್ಸ್ & ಬಲೂನ್ಸ್ ಸಂಸ್ಥೆಯ ಗ್ರಾಹಕರಿಗೆ ಸೇವೆ ನೀಡಲು ಸಿದ್ದಗೊಂಡಿದೆ.
ರಿಬ್ಬನ್ಸ್ & ಬಲೂನ್ಸ್’ ಸಂಸ್ಥೆಯು ಬರ್ತ್‌ಡೇ ಪಾರ್ಟಿ ಮತ್ತು ಇನ್ನಿತರ ಈವೆಂಟ್ ಗಳನ್ನು ಕೂಡ ಆಯೋಜಿಸುತ್ತಿದೆ ಎಂದು ಸಂಸ್ಥೆಯ ಬಿಸಿನೆಸ್ ಡೆವಲಪ್‌ಮೆಂಟ್ ಮ್ಯಾನೇಜರ್ ನಿತೇಶ್ ಶೆಟ್ಟಿ ತಿಳಿಸಿದ್ದಾರೆ.
ಈಗಾಗಲೇ ಮಂಗಳೂರು ನಗರದ ವಾಮಂಜೂರು, ಬಳ್ಳಾಲ್‌ಬಾಗ್, ಬೆಂದೂರ್‌ವೆಲ್, ದೇರಳಕಟ್ಟೆ, ಕಾವೂರು, ಸುರತ್ಕಲ್ ಹಾಗೂ ಮೂಡುಬಿದ್ರೆ, ಕಿನ್ನಿಗೋಳಿ, ಬಜ್ಪೆ, ಶಿರ್ವ,ಕಾಪು, ಸಂತೆಕಟ್ಟೆ, ಮಣಿಪಾಲ್, ಉಡುಪಿಯಲ್ಲಿ ಕಾರಾಚರಿಸುತ್ತಿದೆ.
ಮುಂಬಯಿ, ಪುಣೆ ಸೇರಿದಂತೆ ಸಂಸ್ಥೆಯು ವಿವಿಧೆಡೆಗಳಲ್ಲಿ ಶಾಖೆ ಹೊಂದಿದ್ದು, ಗ್ರಾಹಕರ ಮೆಚ್ಚುಗೆಗೆ ಪಾತ್ರವಾದ ಸಂಸ್ಥೆಯಾಗಿದೆ.