ಸುರೇಂದ್ರ ಬಂಟ್ವಾಳ್ ನ ಹಲವು ಸ್ನೇಹಿತರ ವಶಕ್ಕೆ – ತೀವ್ರ ವಿಚಾರಣೆ

ಬಂಟ್ವಾಳ: ನಟ ಸುರೇಂದ್ರ ಬಂಟ್ವಾಳ್ ಹತ್ಯೆಯ ಕುರಿತಂತೆ  ಆತನ ಹಲವು ಮಂದಿ ಸ್ನೇಹಿತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ಪೊಲೀಸ್ ತನಿಖಾ ತಂಡಗಳು ಕೃತ್ಯಕ್ಕೆ ಸಂಬಂಧಿಸಿ, ಅನೇಕ ಮಹತ್ವದ ಮಾಹಿತಿ ಕಲೆ ಹಾಕಿದ್ದಾರಲ್ಲದೆ ಒಂದೆರಡು ದಿನದಲ್ಲಿ ಹಂತಕರನ್ನು ಬಂಧಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಸುರೇಂದ್ರ ಬಂಟ್ವಾಳ್ ಹತ್ಯಗೆ ನಿಖರವಾದ ಕಾರಣ ಆರೋಪಿಗಳ ಬಂಧನವಾದ ಬಳಿಕವಷ್ಠೆ ಬಯಲಿಗೆ ಬರಬೇಕಾಗಿದ್ದು, ಆತನ ಪರಮಾಪ್ತನನ್ನು ಬಳಸಿಕೊಂಡು ವೈಯಕ್ತಿಕ ವಿಚಾರದಲ್ಲಿ ಕೊಲೆಗೈದಿರುವುದು ಪೊಲೀಸರು ತಮ್ಮ ತನಿಖೆಯಲ್ಲಿ ಮೇಲ್ನೊಟಕ್ಕೆ ಶಂಕಿಸಿದ್ದಾರೆ.

ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಯ ಬಳಿಕ ಮೃತದೇಹವನ್ನು ಗುರುವಾರ ಬೆಳಿಗ್ಗೆ ಮನೆಮಂದಿಗೆ ಒಪ್ಪಿಸಲಾಗಿದ್ದು, ಸುರೇಂದ್ರನ ಅಮ್ಟಾಡಿ ಗ್ರಾಮದ ಕಲಾಯಿ ನಿವಾಸದಲ್ಲಿ ವಿಧಿವಿಧಾನಗಳನ್ನು ಪೂರೈಸಿದ ನಂತರ ಬಂಟ್ವಾಳ ಬಡ್ಡಕಟ್ಟೆ ಹಿಂದೂ ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರ ನಡೆಯಿತು.ಅತನ ಮೂಲಮನೆಯಾದ ಭಂಡಾರಿಹಿತ್ಲು ಬಳಿ ರಸ್ತೆಯಲ್ಲಿ ಕೆಲನಿಮಿಷಗಳ ಕಾಲ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಅವಕಾಶ ನೀಡಲಾಯಿತು. 

ವೈರಲ್ ಆದ ಆರೋಪಿಯ ಮಾತು: ಸುರೇಂದ್ರನ ಹತ್ಯೆಯಲ್ಲಿ ಸದ್ಯಕ್ಕೆ ಪ್ರಮುಖ ಆರೋಪಿಯೆಂದು ಗುರುತಿಸಲಾದ ಆತನ ಪರಮಾಪ್ತ ಸತೀಶ್ ಕುಲಾಲ್ ಗುರುವಾರ ತನ್ನ ವಾಯ್ಸ್ ಮೆಸೇಜ್ ಮೂಲಕ” ವತ್ಸಿ ಅಪಾಟ್ ೯ಮೆಂಟ್ ನ ಕೊಲೆಯನ್ನು ತಾನೇ ಮಾಡಿದ್ದು,ಇತ್ತೀಚೆಗೆ ಕೊಲೆಗೀಡಾದ ಕಿಶನ್ ಹೆಗ್ಡೆಯ ಕೊಲೆಗೆ ಪ್ರತೀಕಾರವಾಗಿ ತಾನೇ ಸುರೇಂದ್ರನ ಕೊಲೆ ಮಾಡಿದ್ದು, ಒಂದೆರಡುದಿನದಲ್ಲಿ ಪೊಲೀಸರ ಮುಂದೆ ಶರಣಾಗುವುದಾಗಿ ಹೇಳಿಕೊಂಡಿದ್ದಾನೆ. ತಾನು 22 ವರ್ಷದಿಂದ ಸುರೇಂದ್ರನ ಜೊತೆಗಿದ್ದು,ಅತನ ಎಲ್ಲಾ ವ್ತವಹಾರವು ಗೊತ್ತು ಎಂದು ಆಡಿಯೋದಲ್ಲಿ ಹೇಳಿಕೊಂಡಿದ್ದಾನೆ”.ಈ ಆಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸತೀಶ್ ಕುಲಾಲ್ ಕೂಡ ಬಂಟ್ವಾಳ ಪರಿಸರ ನಿವಾಸಿಯಾಗಿದ್ದಾನೆ.

ಈ ವಾಯ್ಸ್ ಆಡಿಯೋದ ಆಧಾರದಲ್ಲಿ ತನಿಖೆ ಮುಂದುವರಿಸಿರುವ ಪೊಲೀಸರ ಒಂದು ತಂಡ ಕಾರವಾರದತ್ತ ತೆರಳಿದೆ ಎಂದು ತಿಳಿದುಬಂದಿದೆ. ಈ ವಾಯ್ಸ್ ಹಿಂದೆಯು ಒಂದಷ್ಟು ಅನುಮಾನವನ್ನು ವ್ಯಕ್ತಪಡಿಸುವ ತನಿಖಾ ತಂಡ ಯಾವುದಕ್ಕು ಸತೀಶನ ಬಂಧನದ ಬಳಿಕವಷ್ಠೇ ಕೃತ್ಯದ ಈ ವಾಯ್ಸ್ ಹಿಂದೆಯು ಒಂದಷ್ಟು ಅನುಮಾನವನ್ನು ವ್ಯಕ್ತಪಡಿಸುವ ತನಿಖಾ ತಂಡ ಯಾವುದಕ್ಕು ಸತೀಶನ ಬಂಧನದ ಬಳಿಕವಷ್ಠೇ ಕೃತ್ಯದ ಹಿನ್ನಲೆ ಬೆಳಕಿಗೆ ಬರಬೇಕಷ್ಠೇ.ಆರೋಪಿಗಳ ಪತ್ತೆಗಾಗಿ ಎಸ್.ಪಿ.ಲಕ್ಮೀಪ್ರಸಾದ್ ಮೂರು ತನಿಖಾ ತಂಡವನ್ನು ರಚಸಿದ್ದು, ತನಿಖೆ ತೀವ್ರಗೊಂಡಿದೆ.ಹಂತಕರ ಪತ್ತೆಗಾಗಿ ಶೋಧ ಕಾರ್ಯ ಮುಂದುವರಿದಿದೆ.

ಅವಿವಾಹಿತನಾಗಿದ್ದ ಸುರೇಂದ್ರ ಹವ್ಯಾಸಿ ಛಾಯಾಗ್ರಾಹಕನಾಗಿ ಗುರುತಿಸಿದ್ದು, ಕೆಲಸಮಯದ ಕಾಲ ಹಿಂದು ಸಂಘಟನೆಯಲ್ಲು ಗುರುತಿಸಿಕೊಂಡು,ಕೆಲ ವಿಚಾರಗಳಿಂದ ಸಂಘಟನೆಯಿಂದ ದೂರ ಉಳಿದಿದ್ದು,ಚಲನ ಚಿತ್ರದತ್ತ ಮುಖ ಮಾಡಿದ್ದಲ್ಲದೆ ಬಡ್ಡಿ ವ್ಯವಹಾರದಲ್ಲಿತೊಡಗಿಸಿಕೊಂಡಿದ್ದ. ಬಿ.ಸಿ.ರೋಡು-ಧರ್ಮಸ್ಥಳ ರಾ.ಹೆ.ಯ ಭಂಡಾರಿಬೆಟ್ಟುವಿನಲ್ಲಿ ವತ್ಸಿ ಅಪಾಟ್೯ಮೆಂಟ್ ನ ಐದನೇ ಮಹಡಿಯಲ್ಲಿ ವಾಸವಿದ್ದ.ಬುಧವಾರ ಮಧ್ಯಾಹ್ನದ ವರೆಗೆ ಪೋನ್ ಕರೆ ಸ್ವೀಕರಿಸದ ಮತ್ತು ಸತೀಶ್ ಕುಲಾಲ್ ನ ಪೋನ್ ಕೂಡ ಸ್ವಿಚ್ ಆಫ್ ಆಗಿದ್ದರಿಂದ ಅನುಮಾನಿತರಾದ ಇತರೆ ಸ್ನೇಹಿತರು ಅಪಾಟ್ ೯ ಮೆಂಟ್ ಗೆ ಬಂದು ನೋಡಿದಾಗ ಮುಂಬಾಗಿಲಿಗೆ ಬೀಗ ಹಾಕಲಾಗಿತ್ತು.ಕಿಟಕಿಯ ಮೂಲಕ ಗಮನಿಸಿದಾಗ ಸುರೇಂದ್ರನ ಮೃತದೇಹ ಸೋಫದಲ್ಲಿ ಮಲಗಿದ ಸ್ಥಿತಿಯಲ್ಲಿ ರಕ್ತದ ಮಡವಿನಲ್ಲಿ ಕಂಡುಬಂದಿತ್ತು.

Leave a Reply

Your email address will not be published. Required fields are marked *

error: Content is protected !!