ಸಾಸ್ತಾನ : ಸಾಲ ಬಾಧೆ ವ್ಯಕ್ತಿ ಆತ್ಮಹತ್ಯೆ
ಸಾಸ್ತಾನ (ಉಡುಪಿ ಟೈಮ್ಸ್ ವರದಿ ): ಶಾಲೆಯೊಂದರ ಬಾವಿಗೆ ಬಿದ್ದು ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಸಾಸ್ತಾನದ ಸಮೀಪದ ಪಾಂಡೇಶ್ವರದಲ್ಲಿ ನಡೆದಿದೆ.
ಮೃತ ವ್ಯಕ್ತಿಯನ್ನು ಸ್ಥಳೀಯ ನಿವಾಸಿ ಅಬ್ಬಾಸ್ ಎಂದು ಗುರುತಿಸಲಾಗಿದೆ. ಅತೀಯಾದ
ಸಾಲದ ಸಮಸ್ಯೆ ಆತ್ಮಹತ್ಯೆಗೆ ಕಾರಣ ಎಂದು ತಿಳಿದು ಬಂದಿದೆ. ಅಬ್ಬಾಸ್ ಇಂದು ಸಂಜೆ ಪಾಂಡೇಶ್ವರದ ಶಾಲೆಯ ಬಳಿಯ ಸ್ಥಳೀಯ ವ್ಯಕ್ತಿಯೊಬ್ಬರಿಗೆ ಮನೆಗೆ ಚೀಟಿವೊಂದನ್ನು ನೀಡುವಂತೆ ಕೊಟ್ಟಿದ್ದರು. ಮನೆಯವರು ಸ್ಥಳಕ್ಕೆ ಆಗಮಿಸುವ ಮೊದಲೇ ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದುಬಂದಿದೆ.