ಅ.23: ಅಂಬಲಪಾಡಿ “ಶ್ರೀದೇವಿ ಗ್ಲಾಸ್ & ಅಲ್ಯೂಮಿನಿಯಂ ಎಕ್ಸ್‌ಟ್ರೂಶನ್ಸ್” ನೂತನ ಮಳಿಗೆ ಉದ್ಘಾಟನೆ
ಉಡುಪಿ:(ಉಡು ಪಿಟೈಮ್ಸ್ ವರದಿ) ಅಂಬಲಪಾಡಿ ಬೈಪಾಸ್ ಬಳಿ “ಶ್ರೀದೇವಿ ಗ್ಲಾಸ್ & ಅಲ್ಯೂಮಿನಿಯಂ ಎಕ್ಸ್‌ಟ್ರೂಶನ್ಸ್” ನೂತನ ಮಳಿಗೆ ಅ.23 ರಂದು ಬೆಳಿಗ್ಗೆ ಉದ್ಘಾಟನೆಗೊಳ್ಳಲಿದೆ.
ಉಡುಪಿ ಕರಾವಳಿ ಬೈಪಾಸ್ ಬಳಿ ಮೂವತ್ತು ವರ್ಷಗಳಿಂದ ಕಾರ್ಯಾಚರಿಸುತ್ತಿದ್ದ ಹೆಸರಾಂತ ಗ್ಲಾಸ್ ಮತ್ತು ಅಲ್ಯೂಮಿನಿಯಂ ವಿತರಕ ಸಂಸ್ಥೆಯಾದ ಶ್ರೀದೇವಿ ಗ್ಲಾಸ್‌ನ ರಜತ ಮಹೋತ್ಸವದ ಸವಿನೆನಪಿಗಾಗಿ ಈ ಹೊಸ ಶೋ ರೂಮ್ ಪ್ರಾರಂಭಿಸಲಾಗಿದೆ.
ಒಂದೇ ಸೂರಿನಡಿ ಎಲ್ಲಾ ವರ್ಗದ ಜನತೆಗೆ ಕೈಗೆಟಕುವ ದರದಲ್ಲಿ ಗ್ಲಾಸ್ ಮತ್ತು ಅಲ್ಯೂಮಿನಿಯಂ ಹಾಗೂ ಸಿಲಿಂಗ್ ಮೇಟಿರಿಯಲ್, ವುಡನ್ , ಸ್ಟೀಲ್ ಎನೋಡೈಸ್‌ಡ್ ವಸ್ತುಗಳು, ಎಲ್ಲಾ ಬಗೆಯ ಕಲರ್ ಕೋಟಿಂಗ್ಸ್, ಎಸಿಪಿ ಶೀಟ್ಸ್, ಪಿವಿಸಿ ಡೋರ್ ಸೀಲಿಂಗ್ ಮೆಟೀರಿಯಲ್ಸ್, ಹಾರ್ಡ್‌ವೇರ್ ಐಟಮ್ ಸ್ಪರ್ಧಾತ್ಮಕ ದರದಲ್ಲಿ ಮಾರಾಟ ಮಾಡಲಾಗುತ್ತದೆ.
ಅ 23 ರಂದು ಬೆಳಿಗ್ಗೆ 10.30ಕ್ಕೆ ಉಜ್ವಲ್ ಡೆವಲಪ್ಪರ್‍ಸ್‌ನ ಮಾಲಕ ಪಿ. ಪುರುಷೋತ್ತಮ ಶೆಟ್ಟಿ, ಎಸಿಸಿಇಎ ಉಡುಪಿ ಅಧ್ಯಕ್ಷ ಎಂ..ಗೋಪಾಲ್ ಭಟ್, ಉಡುಪಿ ಬಿಲ್ಡಿಂಗ್ ಅಸೋಸಿಯೇಶನ್ ಅಧ್ಯಕ್ಷ ಡಾ. ಜೆರಿವಿನ್ಸೆಂಟ್ ಡಯಾಸ್ ದೀಪ ಪ್ರಜ್ವಲನ ಮಾಡಲಿದ್ದಾರೆ.
ಪುಷ್ಪ ವುಡನ್ ಕೋಟಿಂಗ್ಸ್: ತಮ್ಮದೆ ಸಂಸ್ಥೆಯ ನುರಿತ ಸಿಬಂದಿಗಳಿಂದ ವುಡನ್ ಕೋಟಿಂಗ್ಸ್ ಪ್ರಾರಂಭಿಸಿದ್ದು, ಈಗಾಗಲೇ ಉಡುಪಿ, ಮಲ್ಪೆ, ಮಣಿಪಾಲ ಅಸುಪಾಸಿನ ಸಾವಿರಾರು ಮಂದಿ ನಮ್ಮ ನೈಪುಣ್ಯದ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ, ವುಡನ್ ಕೋಟಿಂಗ್ಸ್ ಮಧ್ಯಮ , ಬಡ ವರ್ಗದ ಜನತೆ ಸಹಕಾರಿಯಗುತ್ತಿದೆಂದು ಸಂಸ್ಥೆಯ ಆಡಳಿತ ಮಂಡಳಿಯ ಮುಖ್ಯಸ್ಥರು ತಿಳಿಸಿದ್ದಾರೆ.