ಕೊಕ್ಕರ್ಣೆ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಥಮ ವಾರ್ಷಿಕೋತ್ಸವ

ಬ್ರಹ್ಮಾವರ: ಶ್ರೀ ಕ್ಷೇತ್ರ  ಧರ್ಮಸ್ಥಳ  ಗ್ರಾಮಾಭಿವೃದ್ಧಿ  ಯೋಜನೆ ಬ್ರಹ್ಮಾವರ ತಾಲೂಕಿನ ಕೊಕ್ಕರ್ಣೆ ವಲಯದ ಕುದಿ 34 ವಿಭಾಗದ ಬೈದೆಬೆಟ್ಟು ಗುತ್ಯಮ್ಮ ದೇವಸ್ಥಾನದ ಜೋಗಿ ಸಭಾಭವನದಲ್ಲಿ  ‘ನೇಸರ ಜ್ಞಾನವಿಕಾಸ ಕೇಂದ್ರದ’ ಪ್ರಥಮ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. 

ಕಾರ್ಯಕ್ರಮವನ್ನು ಶ್ರೀ ಕ್ಷೇತ್ರ ಗ್ರಾಮಾಭಿವೃದ್ಧಿ ಯೋಜನೆಯ ಮುಖ್ಯ ನಿರ್ವಹಣಾಧಿಕಾರಿ ಅನಿಲ್ ಕುಮಾರ್ ಎಸ್. ಉದ್ಘಾಟಿಸಿ, ಗ್ರಾಮಾಭಿವೃದ್ಧಿ ಯೋಜನೆ ಸದಸ್ಯರಿಗೆ ನೀಡುವ ಪ್ರಗತಿನಿಧಿ ,ಆರ್ಥಿಕ ಚಟುವಟಿಕೆ,  ಉದ್ದೇಶಿಸಿ  ಮಾರ್ಗದರ್ಶನ ನೀಡಿರುತ್ತಾರೆ . ತಾಯಿ ಸ್ಥಾನಕ್ಕೆ ವಿಕಸನ ನೀಡಿದರೆ ಪರಿಪೂರ್ಣ ಜೀವನ ದೊರಕಲು ಸಾಧ್ಯ. ಹಾಗೆ ನಮ್ಮ ಜ್ಞಾನವಿಕಾಸ ಕಾರ್ಯಕ್ರಮ ಎಂದು  ಕಾರ್ಯಕ್ರಮದ ಮಹತ್ವದ ಬಗ್ಗೆ ತಿಳಿಸಿದರು .

ಮುಖ್ಯ ಅತಿಥಿಗಳಾಗಿ ಆಗಮಿಸಿದಂತಹ ಕೊಕ್ಕರ್ಣೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಗಳಾದ ಡಾಕ್ಟರ್ ಸುರೇಶ್ ನಾಯಕ್ ರವರು ಕೋವಿಡ್ ಜಾಗೃತಿಯ ಬಗ್ಗೆ ಮಾಹಿತಿಯನ್ನು ನೀಡಿದರು. 

ಕಾರ್ಯಕ್ರಮದಲ್ಲಿ ಉಡುಪಿ ಪ್ರಾದೇಶಿಕ ಕಚೇರಿಯ ಪ್ರಾದೇಶಿಕ ನಿರ್ದೇಶಕರಾದ ವಸಂತ್ ಸಾಲಿಯಾನ್ ಉಡುಪಿ ಜಿಲ್ಲಾ ಹಿರಿಯ ನಿರ್ದೇಶಕ ಗಣೇಶ್ ಬಿ. ನಿವೃತ್ತ ಪೊಲೀಸ್ ಅಧಿಕಾರಿ ಶೇಖರ್ ಜೋಗಿ ಭಾಗವಹಿಸಿ ಶುಭ ಹಾರೈಸಿದರು.

ಕಾರ್ಯಕ್ರಮವನ್ನು ಬ್ರಹ್ಮಾವರ ತಾಲೂಕಿನ ಯೋಜನಾಧಿಕಾರಿಗಳಾದ  ದಿನೇಶ್ ಸ್ವಾಗತಿಸಿದರು. ಮೇಲ್ವಿಚಾರಕ ಹರೀಶ್ ವಂದಿಸಿದರು. ಸಾಧನ ವರದಿಯನ್ನು ಸೇವಾ ಪ್ರತಿನಿಧಿ ಸುಲೋಚನಾ ಮಂಡಿಸಿದರು.  ಸಮನ್ವಯಾಧಿಕಾರಿ ನೇತ್ರಾವತಿ ಅವರು ನಿರೂಪಿಸಿದರು. ಒಕ್ಕೂಟದ ಅಧ್ಯಕ್ಷರಾದ ಕವಿತಾ ಅಧ್ಯಕ್ಷತೆ ವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!