ಸತತ 7ನೇ ಬಾರಿಗೆ ರೆಪೋ ದರ ಬದಲಾವಣೆ ಇಲ್ಲ: ಆರ್‌ಬಿಐ ಗವರ್ನರ್

ನವದೆಹಲಿ: ನಿರೀಕ್ಷೆಯಂತೆಯೇ ಸತತ ಏಳನೇ ಬಾರಿಗೆ ರೆಪೋ ದರದಲ್ಲಿ ಯಾವುದೇ ಬದಲಾವಣೆ ಮಾಡದೇ ಇರಲು ಭಾರತೀಯ ರಿಸರ್ವ್ ಬ್ಯಾಂಕ್ ಶುಕ್ರವಾರ ನಿರ್ಧರಿಸಿದೆ.

ಏಪ್ರಿಲ್ 3ರಿಂದ ನಡೆದ ಆರ್​ಬಿಐನ ಹಣಕಾಸು ನೀತಿ ಸಮಿತಿ ಅಥವಾ ಎಂಪಿಸಿ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಆರ್​ಬಿಐ ಗವರ್ನರ್ ಶಕ್ತಿಕಾಂತ ದಾಸ್ ಇಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಎಂಪಿಸಿ ಸಭೆಯ ನಿರ್ಧಾರಗಳನ್ನು ಪ್ರಕಟಿಸಿದ್ದು, ಸತತ ಏಳನೇ ಬಾರಿ ರೆಪೋ ದರ ಬದಲಾವಣೆ ಆಗಿಲ್ಲ. ಹಾಗೆಯೇ, ಹಣದ ಹರಿವು ಸಂಕುಚಿತಗೊಳಿಸುವ ಕ್ರಮವನ್ನೂ ಆರ್​ಬಿಐ ಮುಂದುವರಿಸುತ್ತಿರುವುದನ್ನು ತಿಳಿಸಿದ್ದಾರೆ.

ಎಂಪಿಸಿ ಸಭೆಯಲ್ಲಿ ಗವರ್ನರ್ ಶಕ್ತಿಕಾಂತ್ ದಾಸ್ ಅವರನ್ನೂ ಸೇರಿ ಭಾಗವಹಿಸಿದ್ದ 6 ಮಂದಿ ಪೈಕಿ ಐವರು ರೆಪೋ ದರ ಯಥಾಸ್ಥಿತಿ ಮುಂದುವರಿಸಲು ಒಲವು ತೋರಿದರೆನ್ನಲಾಗಿದೆ. 5:1 ಮತಗಳು ಈ ನಿರ್ಧಾರದ ಪರವಾಗಿ ಬಂದಿದೆ. ಇದರೊಂದಿಗೆ ಕಳೆದ ಒಂದು ವರ್ಷದಿಂದ ಇರುವ ಶೇ. 6.5ರ ಬಡ್ಡಿದರವೇ ಮುಂದುವರಿಯಲಿದೆ.

ನಿರೀಕ್ಷಿತ ನಿರ್ಧಾರ

ವಿವಿಧ ಆರ್ಥಿಕ ತಜ್ಞರು ಮತ್ತು ರೇಟಿಂಗ್ ಏಜೆನ್ಸಿಗಳು ಆರ್​ಬಿಐ ಈ ಬಾರಿಯೂ ರೆಪೋ ದರದಲ್ಲಿ ಬದಲಾವಣೆ ಮಾಡದಿರಬಹುದು ಎಂದು ನಿರೀಕ್ಷಿಸಿದ್ದವು.

Leave a Reply

Your email address will not be published. Required fields are marked *

error: Content is protected !!