ಕಾರ್ಕಳ: ಕೋಳಿ ಅಂಕಕ್ಕೆ ದಾಳಿ- ಐವರ ಬಂಧನ

ಕಾರ್ಕಳ, ಎ.4: ಕೋಳಿಅಂಕಕ್ಕೆ ದಾಳಿ ನಡೆಸಿದ ಪೊಲೀಸರು ಐದು ಮಂದಿಯನ್ನು ಬಂಧಿಸಿರುವ ಘಟನೆ ಎ.2ರಂದು ಬೆತ್ತೊಟ್ಟು ಎಂಬಲ್ಲಿ ನಡೆದಿದೆ.

ಉದಯ ಎಂಬಾತ ಬಂಧಿತ ಆರೋಪಿ. ಸತೀಶ, ಜಯ, ಗಣೇಶ, ಉಮೇಶ, ಸುರೇಶ ಮತ್ತಿತರು ಪೊಲೀಸ್ ದಾಳಿ ವೇಳೆ ಓಡಿ ಪರಾರಿ ಯಾಗಿದ್ದಾರೆ. ದಾಳಿ ವೇಳೆ 3 ಕೋಳಿಗಳನ್ನು ಮತ್ತು 4 ವಾಹನಗಳನ್ನು ಹಾಗೂ 900ರೂ. ನಗದು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!