ಮಲ್ಪೆ: ಮೀನುಗಾರರ ಬಲೆಗೆ ಬಿದ್ದ 700 ಕೆ.ಜಿ ತೂಕದ ಬೃಹತ್ ತೊರಕೆ ಮೀನು!
ಉಡುಪಿ: ಮಲ್ಪೆಯಲ್ಲಿ ಮೀನುಗಾರಿಕಾ ಬೋಟಿನ ಬಲೆಗೆ ನಾಲ್ಕು ಬೃಹತ್ ಗಾತ್ರದ ಕಪ್ಪು ತೊರಕೆ ಮೀನು ಸಿಕ್ಕಿದೆ. ಮೂರು ಬೋಟಿಗೆ ಬೃಹತ್ ಗಾತ್ರದ ನಾಲ್ಕು ಮೀನು ಬಲೆಗೆ ಬಿದ್ದಿದ್ದು ಸ್ಥಳೀಯ ಜನರಲ್ಲಿ ಆಶ್ಚರ್ಯ ಉಂಟು ಮಾಡಿತ್ತು.
ಮಲ್ಪೆಯ ನಾಗಸಿದ್ಧಿ ಬೋಟ್ ಮತ್ತು ಕುಲಮಾಸ್ತಿ ಬೋಟ್ ಗೆ ಬೃಹತ್ ಗಾತ್ರದ ಮೀನು ಸಿಕ್ಕಿದೆ. ಮೀನುಗಳನ್ನು ಕ್ರೇನ್ ನ ಸಹಾಯದಿಂದ ಬೋಟ್ ನಿಂದ ಕೆಳಕ್ಕೆ ಇಳಿಸಲಾಯಿತು.
ಸುಮಾರು 700 ಕೆಜಿ ಮತ್ತು 250 ಕೆಜಿ ತೂಕವಿದ್ದ ಮೀನನ್ನು ಬುಧವಾರ ಮಲ್ಪೆ ಬಂದರಿನಲ್ಲಿ ಇಳಿಸಲಾಯಿತು. ಈ ಹಿಂದೆಯೂ ಇದಕ್ಕಿಂತಲೂ ದೊಡ್ಡ ಮೀನುಗಳು ಬಲೆಗೆ ಬಿದ್ದಿವೆ. ಆದರೆ ಈ ಕಪ್ಪು ತೊರಕೆ ಮೀನಿಗೆ ಬೇಡಿಕೆ ಕಡಿಮೆ, ಕೆಜಿಗೆ ಕೇವಲ 40 ರೂ. ಇದೆ ಎನ್ನುತ್ತಾರೆ ಬೋಟ್ ನ ಮಾಲಕರು.