ಉಡುಪಿ ಪೊಲೀಸರ ಕ್ಷಿಪ್ರ ಕಾರ್ಯಾಚರಣೆ: ಖತರ್ನಾಕ್ ಮೂವರು ಕಳ್ಳಿಯರ ಬಂಧನ

ಉಡುಪಿ: ಸಿಟಿ ಬಸ್ಸಿನಲ್ಲಿ ಮಹಿಳೆಯ ಪರ್ಸ್ ಕಳವು ಪ್ರಕರಣಕ್ಕೆ ಸಂಬಂಧಿಸಿ ಕ್ಷಿಪ್ರ ಕಾರ್ಯಾಚರಣೆ ನಡೆಸಿರುವ ಪೊಲೀಸರು ಘಟನೆ ನಡೆದ 12 ಗಂಟೆಯೊಳಗೆ ಖತರ್ನಾಕ್ ಮೂವರು ಕಳ್ಳಿಯರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಳ್ಳಾರಿಯ ಸಬಿತಾ, ಲತಾ, ಕವಿತಾ ಬಂಧಿತ ಆರೋಪಿಗಳು. ಇವರಿಂದ 32,400 ರೂ. ನಗದು, ಎರಡು ಮೊಬೈಲ್, ಎರಡು ಎಟಿಎಂ ಕಾರ್ಡ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಘಟನೆ ವಿವರ: ಬೆಂಗಳೂರು ಉತ್ತರಹಳ್ಳಿ ಅರ್ಚನಾ ರಾವ್ (39) ಅ.20 ರಂದು ಸಂಜೆ 6ಗಂಟೆಗೆ ಉಡುಪಿ ಸಿಟಿಬಸ್‌ನಲ್ಲಿ ಕುಂಜಿಬೆಟ್ಟುವಿಗೆ ಪ್ರಯಾಣಿಸುತ್ತಿದ್ದರು. ಈ ವೇಳೆ ಮೂವರು ಮಹಿಳೆಯರು ಉಡುಪಿ ಸಿಟಿಬಸ್ ನಿಲ್ದಾಣದಿಂದ ಕುಂಜಿಬೆಟ್ಟುವಿಗೆ ಪ್ರಯಾಣಿಸುತ್ತಿದ್ದರು.

ಈ ವೇಳೆ ಮೂವರು ಮಹಿಳೆಯರು ಕಡಿಯಾಳಿಯಿಂದ ಬಸ್ ಹತ್ತಿದ್ದು, ಅವರ ಕೈಯಲ್ಲಿದ್ದ ಮಗುವನ್ನು ಅರ್ಚನಾ ತೊಡೆಯ ಮೇಲೆ ಕೂರಿಸಿದರು.
ಆ ಮೂರು ಜನ ಮಹಿಳೆಯರು, ಅರ್ಚನಾ ರಾವ್ ಬಳಿ ನಿಂತು, ಅವರ ಹೆಗಲ ಮೇಲೆ ಇದ್ದ ಬ್ಯಾಗಿನ ಜೀಪ್ ತೆರೆದು ಅದರ ಒಳಗಡೆ ಇದ್ದ ಪರ್ಸನ್ನು ಕಳವು ಮಾಡಿದ್ದರು. ಆ ಪರ್ಸ್‌ನಲ್ಲಿ ವಿವಿಧ ಬ್ಯಾಂಕ್ ಗಳ 4 ಎಟಿಎಂ ಕಾರ್ಡ್, ವೋಟರ್ ಐಡಿ, 5 ಸಾವಿರ ರೂ. ನಗದು ಹಾಗೂ ಇತರೇ ದಾಖಲೆ ಪತ್ರಗಳು ಇದ್ದವು. ಬಳಿಕ ಆ ಮಹಿಳೆಯರು ಬ್ಯಾಗಿನಲ್ಲಿದ್ದ ಚೀಟಿಯಲ್ಲಿ ಬರೆದಿಟ್ಟಿದ್ದ ಎಟಿಎಂ ಪಿನ್ ಬಳಸಿ 25,000ರೂ. ಹಣವನ್ನು ಡ್ರಾ ಮಾಡಿದ್ದರೆಂದು ಉಡುಪಿ ನಗರ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಲಾಗಿತ್ತು.

ತಕ್ಷಣ ಕಾರ್ಯಪ್ರವರ್ತರಾದ ಪೊಲೀಸರು, ಜಿಲ್ಲೆಯ ಎಲ್ಲ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದರು. ಅದರಂತೆ ಉಡುಪಿ ನಗರ, ಸಂಚಾರ ಠಾಣೆ, ಮಣಿಪಾಲ, ಕಾಪು, ಪಡುಬಿದ್ರಿ ಪೊಲೀಸರು ಆರೋಪಿಗಳ ಚಲನವನ ಗಮನಿಸಲಾಯಿತು. ಬಸ್ ಹಾಗೂ ರಿಕ್ಷಾ ಚಾಲಕರ ಸಹಕಾರದೊಂದಿಗೆ ಮಾಹಿತಿ ಸಂಗ್ರಹಿಸಿ, ಧಾರವಾಡಕ್ಕೆ ಪ್ರಯಾಣಿಸಲು ಟಿಕೆಟ್ ಬುಕ್ ಮಾಡಿದ್ದ ಆರೋಪಿಗಳನ್ನು ಉಡುಪಿ ನಗರದಲ್ಲಿ ಇಂದು ಬೆಳಗ್ಗೆ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

1 thought on “ಉಡುಪಿ ಪೊಲೀಸರ ಕ್ಷಿಪ್ರ ಕಾರ್ಯಾಚರಣೆ: ಖತರ್ನಾಕ್ ಮೂವರು ಕಳ್ಳಿಯರ ಬಂಧನ

Leave a Reply

Your email address will not be published. Required fields are marked *

error: Content is protected !!