ದ.ಕ ಹಿಂದುತ್ವದ ಭದ್ರಕೋಟೆ, ಹಿಂದುತ್ವದ ಆಧಾರ ಮೇಲೆ ಅಭಿವೃದ್ದಿಪಡಿಸುತ್ತೇವೆ- ಕ್ಯಾ.ಬ್ರಜೇಶ್‌ ಚೌಟ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಹಿಂದುತ್ವದ ಭದ್ರಕೋಟೆ, ಹಿಂದುತ್ವದ ಆಧಾರ ಮೇಲೆ ಅಭಿವೃದ್ದಿ ಪಡಿಸಲು ಸಂಕಲ್ಪ ಮಾಡಿದ್ದೇನೆ. ಮುಂದೆಯೂ ಹಿಂದುತ್ವದ ಭದ್ರಕೋಟೆಯಾಗಿ ಮುಂದುವರಿಸುವ ಜವಾಬ್ಧಾರಿ ನಮ್ಮ ಮೇಲಿದೆ, ಅದಕ್ಕಾಗಿ ನಾವೆಲ್ಲ ಪಣತೊಡಬೇಕಿದೆ ಎಂದು ದಕ್ಷಿಣ ಕನ್ನಡ ಕ್ಷೇತ್ರದ ಬಿಜೆಪಿ ಲೋಕಸಭಾ ಅಭ್ಯರ್ಥಿಯಾದ ಕ್ಯಾಪ್ಟನ್‌ ಬ್ರಜೇಶ್‌ ಚೌಟ ಅವರು ಮಂಗಳೂರು ಮಂಡಲದ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಕರೆ ನೀಡಿದರು.

ದಕ್ಷಿಣ ಕನ್ನಡವೆಂಬ ಸಂಘಟನಾತ್ಮಕ ಜಿಲ್ಲೆಯಲ್ಲಿ ಸಾಮಾನ್ಯ ಮನೆಯ ಹುಡುಗನಿಗೆ ಈ ಚುನಾವಣೆಯಲ್ಲಿ ಸ್ಪರ್ಧಿಸಲು ಸಿಕ್ಕ ಬಹುದೊಡ್ಡ ಅವಕಾಶ ದೈವ-ದೇವರುಗಳ ಆಶೀರ್ವಾದ, ನನ್ನ ಪೂರ್ವಜನ್ಮದ ಪುಣ್ಯ ಹಾಗೂ ಕಾರ್ಯಕರ್ತರ ಹಾರೈಕೆಯಿಂದ ನನಗೆ ದೊರೆತಿದೆ ಎಂದರು,
ಯುವಕನಾದ ನನಗೆ ಸಿಕ್ಕೆ ದೊಡ್ಡಅವಕಾಶಕೊಟ್ಟಿರುವ ಪಕ್ಷ ಯುವನಾಯಕತ್ವದ ಮೇಲೆ ಇಟ್ಟಿರುವ ವಿಶ್ವಾಸದ ಕಾರಣಕ್ಕೆ, ಮೇರುನಾಯಕ ನರೇಂದ್ರ ಮೋಡಿಯವರು ಯುವನಾಯಕತ್ವಕ್ಕೆ ಅವಕಾಶ ನೀಡಬೇಕು, ಯುವಕರು ಅಭಿವೃದ್ದ್ಧಿ ಕಾರ್ಯಗಳಲ್ಲಿ ತೊಡಗಿಸಿ ಕೊಳ್ಳಬೇಕು, ರಾಷ್ಟ್ರದ ಅಭ್ಯುದಯದಲ್ಲಿ ಪಾಲುದಾರರನ್ನಾಗಿ ಮಾಡಬೇಕೆನ್ನುವ ಉದ್ದೇಶದಿಂದ ನನ್ನಂತಹ ಯುವಕನಿಗೆ ಅವಕಾಶ ಸಿಕ್ಕಿದೆ. ಇಂತಹದು ಬಾರತೀಯ ಜನತಾ ಪಾರ್ಟಿ ಹಾಗೂ ನರೇಂದ್ರ ಮೋದಿಯವರ ನಾಯಕತ್ವದಲ್ಲಿ ಮಾತ್ರ ಸಾಧ್ಯ ಎಂದರು.

ಪ್ರಜಾಪ್ರಭುತ್ವದ ನಿಜವಾದ ಅರ್ಥವನ್ನು ಮತ್ತು ನಿಜವಾದ ಮೌಲ್ಯವನ್ನು ಪ್ರತಿಪಾದಿಸಿದ್ದರೆ ಅದು ಬಾರತೀಯ ಜನತಾ ಪಾರ್ಟಿ ಮಾತ್ರ, ದಕ್ಷಿಣ ಕನ್ನಡ ಜಿಲ್ಲೆಯನ್ನು ಅಭಿವೃದ್ಧಿಶೀಲ ಜಿಲ್ಲೆಯನ್ನಾಗಿಸುವ ಮೂಲಕ ರಾಜ್ಯದ ಅಭಿವೃದ್ಧಿ ಹಾಗೂ ದೇಶದ ಅಭಿವೃದ್ಧಿ ಮಾಡುವ ಕನಸನ್ನು ನನಸಾಗಿಸುವ ಪರಿಕಲ್ಪನೆ ನನ್ನದು, ಸಾಂಸ್ಕೃತಿಕವಾಗಿ, ಶೈಕ್ಷಣಿಕವಾಗಿ ಹಾಗೂ ಉಧ್ಯಮಿಗಳಾಗಿ ಯಶಸ್ಸಿನ ಸಾಧನೆಮಾಡಿದ ಸಾಮಾರ್ಥ್ಯವಂತರ ಜಿಲ್ಲೆಯನ್ನು ಪ್ರತಿನಿಧಿಸುವುದು ನನ್ನ ಹೆಮ್ಮಯಿದೆ, ಹಿಂದುತ್ವದ ಬದ್ಧತೆಯೊಂದಿಗೆ ಅಭಿವೃದ್ಧಿಯ ಆಧ್ಯತೆಯಾಗಿಸುವ ಭರವಸೆ ನೀಡಿದರು.

ಪ್ರಧಾನಿ ನರೇಂದ್ರ ಮೋದಿಯವರ ಅವಧಿಯಲ್ಲಿ ಸಂಸದರಾದ ನಳಿನ್‌ ಕುಮಾರ್ ಅವರು ರಾಷ್ಟ್ರೀಯ ಹೆದ್ದಾರಿ ಅಭಿವೃದ್ದಿ ಸೇರಿದಂತೆ ಹಲವಾರು ಯೋಜನೆಗಳನ್ನು ತಂದಿದ್ದಾರೆ, ಅನುಷ್ಠಾನದ ಹಂತದಲ್ಲಿರುವ ಯೋಜನೆಗಳನ್ನು ಎಲ್ಲಾ ಜನಪ್ರತಿನಿಧಿಗಳ ಸಹಕಾರದೊಂದಿಗೆ ಶೀಘ್ರವಾಗಿ ಪೂರ್ಣಗೊಳಿಸುವ ವಿಶ್ವಾಸ ವ್ಯಕ್ತಪಡಿಸಿದರು. ತಜ್ಞರು ಹಾಗೂ ವಿಶೇಯ ಪರಿಣಿತರ ಸಲಹೆ, ಸಹಕಾರದೊಂದಿಗೆ ಮಂಗಳೂರು-ಬೆಂಗಳೂರು ಹೆದ್ದಾರಿ ಯೋಜನೆಯನ್ನು ಅಭಿವೃದ್ಧಿಪಡಿಸಲು ಜೊತೆಗೆ ಮಂಗಳೂರು-ಬೆಂಗಳೂರು ರೈಲಿನ ಯೋಜನೆಯನ್ನು ಹೊಸ ಪರಿಕಲ್ಪನೆಯೊಂದಿಗೆ ಅಭಿವೃದ್ಧಿಪಡಿಸಲು ಆಧ್ಯತೆಯಾಗಿ ಪರಿಗಣಿಸಿ, ಮಂಗಳೂರು ಎಂಬ ಬಂದರು ನಗರವನ್ನು ಕರ್ನಾಟಕ ಆರ್ಥಿಕ ಶಕ್ತಿಯನ್ನಾಗಿಸುವ ನಗರವಾಗಿ ಅಭಿವೃದ್ದಿಪಡಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುವುದಾಗಿ ತಿಳಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷರಾದ ಸತೀಶ್‌ ಕುಂಪಲ, ಶಾಸಕರಾದ ವೇದವ್ಯಾಸ ಕಾಮತ್‌, ಮಂಗಳೂರು ನಗರ ಬಿಜೆಪಿ ಅಧ್ಯಕ್ಷರಾದ ಜಗದೀಶ ಆಳ್ವ, ವಿಧಾನಪರಿಷತ್‌ ಸದಸ್ಯರಾದ ಪ್ರತಾಪ್‌ ಸಿಂಹ ನಾಯಕ್‌, ಮಾಜಿ ಶಾಸಕ ಜಯರಾಮ ಶೆಟ್ಟಿ, ಬಿಜೆಪಿ ಜಿಲ್ಲಾ ಚುನಾವಣಾ ಸಂಚಲಕರಾದ ನಿತಿನ್‌ ಕುಮಾರ್‌, ಉಪಾಧ್ಯಕ್ಷರಾದ ರವೀಂದ್ರ ಶಟ್ಟಿ ಉಳಿದೊಟ್ಟು, ಪ್ರಧಾನ ಕಾರ್ಯದರ್ಶಿಗಳಾದ ಪ್ರೇಮಾನಂದಶೆಟ್ಟಿ, ಯತೀಶ್ ಆರ್ವಾರ ಹಾಗೂ ಮತ್ತಿತರರು ಉಪಸ್ಥಿರಿದ್ದರು.

Leave a Reply

Your email address will not be published. Required fields are marked *

error: Content is protected !!