ಉಡುಪಿ: ಬಸ್‌ನಲ್ಲಿ ಪ್ರಯಾಣಿಕರಂತೆ ಬಂದು ಪರ್ಸ್ ಎಗರಿಸಿದ ಮೂವರು ಮಹಿಳೆಯರು
ಉಡುಪಿ: (ಉಡುಪಿ ಟೈಮ್ಸ್ ವರದಿ)ಮೂವರು ಮಹಿಳೆಯರು ಮಗುವಿನೊಂದಿಗೆ ಬಸ್‌ನಲ್ಲಿ ಸಂಚರಿಸಿ ಪ್ರಯಾಣಿಕರ ಪರ್ಸ್‌ನಲ್ಲಿದ್ದ ನಗದು, ಬೆಲೆ ಬಾಳುವ ವಸ್ತುಗಳನ್ನು ದೊಚುವ ತಂಡವೊಂದು ಉಡುಪಿಯಲ್ಲಿ ಸಕ್ರಿಯವಾಗಿದೆ.
ಉಡುಪಿಯ ಸಿಟಿಬಸ್‌ನಲ್ಲಿ ಬೆಂಗಳೂರಿನ ಅರ್ಚನಾ ರಾವ್ (39) ಕುಂಜಿಬೆಟ್ಟುಗೆ ಹೋಗುತ್ತಿದ್ದಾಗ ಮೂರು ಜನ ಅಪರಿಚಿತ ಮಹಿಳೆಯರು ಕಡಿಯಾಳಿಯಲ್ಲಿ ಬಸ್‌ನ್ನು ಹತ್ತಿದ್ದು, ಅವರಲ್ಲಿ ಓರ್ವ ಮಹಿಳೆ ತನ್ನ ಬಳಿ ಇದ್ದ ಮಗುವನ್ನು ಅರ್ಚನಾರ ತೊಡೆಯ ಮೇಲೆ ಕೂರಿಸಿದ್ದರು.
ಬಳಿಕ ಮೂವರು ಮಹಿಳೆಯರು ಗೊತ್ತಾಗದ ರೀತಿಯಲ್ಲಿ ಅರ್ಚನಾ ಹೆಗಲ ಮೇಲೆ ಹಾಕಿಕೊಂಡಿದ್ದ ಬ್ಯಾಗಿನ ಜೀಪ್ ತೆರೆದು ಅದರ ಒಳಗಡೆ ಇದ್ದ ಪರ್ಸ್ ನ್ನು ಎಗರಿಸಿದ್ದಾರೆ.
ಆ ಪರ್ಸ್ ನಲ್ಲಿ ವಿವಿಧ ಬ್ಯಾಂಕ್‌ಗಳ 4 ಎ.ಟಿ.ಎಮ್ ಕಾರ್ಡ, ವೋಟರ್ ಐಡಿ, ನಗದು ರೂಪಾಯಿ 5 ಸಾವಿರ, ಹಾಗೂ ಇತರೇ ದಾಖಲೆ ಪತ್ರಗಳು ಇತ್ತು. ಬಳಿಕ ಮಹಿಳೆಯರು ಎ.ಟಿ.ಎಮ್ ಕಾರ್ಡ ಉಪಯೋಗಿಸಿ ರೂಪಾಯಿ 25,000- ಹಣವನ್ನು ಡ್ರಾ ಮಾಡಿದ್ದಾರೆಂದು ಈ ಬಗ್ಗೆ ಅರ್ಚನಾ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿರುತ್ತಾರೆ.