ಇತ್ತೀಚಿನ ದಿನಗಳಲ್ಲಿ ವಿಧಾನಪರಿಷತ್ ಸದಸ್ಯರ ರಾಜೀನಾಮೆ ಪರ್ವ ಶುರುವಾಗಿದೆ ಏಕೆ?

ಉಡುಪಿ: ಒಂದುಕಾಲವಿತ್ತು.ವಿಧಾನಪರಿಷತ್ ನಲ್ಲಿ ಬಹುಮುಖ್ಯವಾಗಿ ಶಿಕ್ಷಕರ ಕ್ಷೇತ್ರ ;ಪದವೀಧರರ ಕ್ಷೇತ್ರಗಳೆಂದರೆ ಬಿಜೆಪಿಯೇ ತುಂಬಿ ತುಳುಕುವ ಸದನವಾಗಿತ್ತು.ಬಿಜೆಪಿ ಬಿಟ್ಟರೆ ಜೆಡಿಎಸ್ ಆ ಸ್ಥಾನ ತುಂಬಿಸಿಕೊಳ್ಳುತ್ತಿತು..ಆದರೆ ಇತ್ತೀಚಿನ ಈ ಎಲ್ಲಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿತನಕ್ಕೆ ಹೆಚ್ಚಿನ ಬೇಡಿಕೆ ಇದೆ ಮಾತ್ರವಲ್ಲ ಗೆದ್ದು ಬರುವ ಅವಕಾಶ ಹೆಚ್ಚಾಗಿ ವೇದ್ಯವಾಗುವ ವಾತಾವರಣ ಸೃಷ್ಟಿಯಾಗುತ್ತಿದೆ. ಹಾಗಾಗಿ ರಾಜ್ಯ ವ್ಯಾಪಿಯಾಗಿ ಬಿಜೆಪಿ ಜೆಡಿಎಸ್ ವಿಧಾನಪರಿಷತ್ ಸದಸ್ಯರು ರಾಜೀನಾಮೆ ನೀಡಿರುವುದು ಮಾತ್ರವಲ್ಲ ಅವರು ಕಾಂಗ್ರೆಸ್ ಪಕ್ಷವನ್ನೆ ಒಪ್ಪಿಕೊಳ್ಳುವ ಅಪ್ಪಿಕೊಳ್ಳುವ ಪರಿಸ್ಥಿತಿ ಯಾಕೆ ಬಂದಿದೆ ಅನ್ನುವುದನ್ನು ಸೂಕ್ಷ್ಮವಾಗಿ ಅಧ್ಯಯನ ಮಾಡ ಬೇಕಾದ ಪರಿಸ್ಥಿತಿ ನಿಮಾ೯ಣವಾಗಿದೆ.

ಹಿಂದೆ ಬಿಜೆಪಿಗೆ ಈ ಶಿಕ್ಷಕರ ಪದವೀಧರ ಕ್ಷೇತ್ರಗಳಲ್ಲಿ ವಿರೇೂಧಿಗಳೇ ಇಲ್ಲ ಅನ್ನುವ ಮಟ್ಟಿಗೆ ಪರಿಸ್ಥಿತಿ ಇತ್ತು.ಆದರೆ ಇಂದು ಈ ಪರಿಸ್ಥಿತಿ ಬದಲಾಗುತ್ತಿದೆ. ಇದಕ್ಕೆ ಕಾರಣಗಳೇನು…?
1.ಹತ್ತು ಹದಿನೈದು ವರುಷಗಳ ಹಿಂದಿನ ಅವಧಿಯಲ್ಲಿ ಈ ಕ್ಷೇತ್ರಗಳಲ್ಲಿ ಸ್ಪಧೆ೯ಮಾಡುವ ಬಿಜೆಪಿ ಅಭ್ಯರ್ಥಿಗಳು ತಮ್ಮದೇ ಸಿದ್ಧಾಂತ ಒಪ್ಪಿಕೊಂಡ ಶಿಕ್ಷಕರನ್ನು ಪದವೀಧರರನ್ನು ಈ ಕ್ಷೇತ್ರಗಳಲ್ಲಿ ಮತದಾರರನ್ನಾಗಿ ನೊಂದಾಯಿಸಿಕೊಂಡು ಮತ ಬ್ಯಾಂಕ್ ಆಗಿ ಬಳಸಿಕೊಳ್ಳುತ್ತಿದ್ದರು.ಅದೇಷ್ಟೊ ಕಾಲದ ತನಕ ಈ ಕ್ಷೇತ್ರಗಳಲ್ಲಿ ಚುನಾಯಿತ ಸದಸ್ಯರು ಕೆಲಸ ಮಾಡಲಿ ಮಾಡದಿರಲಿ ಸಲೀಸಾಗಿ ಗೆದ್ದು ಬರುತ್ತಿದ್ದರು.
ಈ ಚುನಾಯಿತ ಸದಸ್ಯರ ಅಸಡ್ಧೆ ಸೇೂಮಾರಿತನ ಶಿಕ್ಷಕರ ಪದವೀಧರ ಸಮಸ್ಯೆಗಳಿಗೆ ಸಕಾಲದಲ್ಲಿ ಸ್ಪಂದಿಸದೇ ಇರುವ ಈ ಚುನಾಯಿತ ಸದಸ್ಯರನ್ನು ನಾವೇಕೆ ಬೆಂಬಲಿಸ ಬೇಕು ಅನ್ನುವ ಪ್ರಶ್ನೆ ಈ ಮತದಾರರಲ್ಲಿ ಹುಟ್ಟಿ ಕೊಂಡ ಕಾರಣ..ಬಿಜೆಪಿ ತನ್ನ ನಂಬಿಗ್ಥ ಮತದಾರರ ವಿಶ್ವಾಸ ನಿಧಾನವಾಗಿ ಕಳೆದು ಕೊಳ್ಳುವ ಸ್ಥಿತಿಗೆ ಬಂತು.
2.ಇನ್ನೂ ಒಂದು ಬಹುಮುಖ್ಯ ಕಾರಣ ಬಹು ಸಂಖ್ಯೆಯ ಸರಕಾರಿ ಮತ್ತು ಖಾಸಗಿರಂಗದ ಉದ್ಯೋಗಳಿಗೆ 2006ರ ಅನಂತರದಲ್ಲಿ ಕಾಡುತ್ತಿದ್ದ ಪಿಂಚಣಿ ಸಮಸ್ಯೆ ಬಗ್ಗೆ ಬಿಜೆಪಿಯ ಕೇಂದ್ರ ಸರ್ಕಾರ ರಾಜ್ಯ ಸರ್ಕಾರದ ಅವರ ಬೇಡಿಕೆಗಳಿಗೆ ಬಿಡಿಕಾಸಿನ ಮನ್ನಣೆ ನೀಡಲೇ ಇಲ್ಲ. ಇಲ್ಲಿ ಬಿಜೆಪಿಯಿಂದ ಆಯ್ಕೆ ಕೊಂಡ ವಿಧಾನಪರಿಷತ್ ಸದಸ್ಯರ ಪರಿಸ್ಥಿತಿ ಹೇಗಿತ್ತು ಅಂದರೆ ಈ ವಿಚಾರದಲ್ಲಿ ಅವರದ್ದೇ ಸರ್ಕಾರದ ವಿರುದ್ಧ ಧ್ವನಿ ಎತ್ತಿದಾಗಲೂ ಕೂಡಾ ಸರ್ಕಾರ ಅದಕ್ಕೆ ಎಳ್ಳು ಕಾಳಿನಷ್ಟುಮಯಾ೯ದೆ ಸದನದ ಒಳಗೂ ಕೊಡಲಿಲ್ಲ ಹೊರಗೂ ಕೊಡಲಿಲ್ಲ. ಮಾತ್ರವಲ್ಲ ಪ್ರಶ್ನೆ ಕೇಳಿದ ಸದಸ್ಯರ ಬಾಯಿ ಮುಚ್ಚಿಸುವ ಕೆಲಸವನ್ನು ಮುಖ್ಯಮಂತ್ರಿಗಳು ಸಚಿವರಾದಿಯಾಗಿ ಕೈಗೆತ್ತಿಕೊಂಡರು. ಇದು ಎಲ್ಲಾ ವಿದ್ಯಾವಂತ ಮತದಾರರ ಗಮನಕ್ಕೂ ಬಂತು. ಪದವೀಧರ ಹತ್ತು ಹಲವು ಸಮಸ್ಯೆಗಳಿಗೂ ಸರ್ಕಾರದ ನಿಲೀ೯ಪ್ತ ಧೇೂರಣೆ ಈ ಎಲ್ಲಾ ಮತದಾರರನ್ನು ತಾವು ನಂಬಿಕೊಂಡಿದ್ದ ಪಕ್ಷದಿಂದ ನಿಧಾನವಾಗಿ ದೂರವಾಗಲೂ ಕಾರಣವಾಯಿತು. ಈ ಸ್ಥಿತಿಯ ಸತ್ಯತೆ ಚುನಾಯಿತ ಸದಸ್ಯರಿಗೆ ಗೊತ್ತಾಗಿದೆ ಇಷ್ಟಾದರೂ ಬಿಜೆಪಿಯ ರಾಷ್ಟ್ರ್ರರಾಜ್ಯದ ನಾಯಕರುಗಳಿಗೆ ಇನ್ನೂ ಗಮನಕ್ಕೆ ಬಾರದಿರುವುದು ಆಶ್ಚರ್ಯವೇ ಸರಿ?
ಹಾಗಾಗಿ ಇತ್ತೀಚೆಗೆ ನಡೆದ ವಿಧಾನಪರಿಷತ್ನ ಸುಶಿಕ್ಷಿತರ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವಿನ ನಗೆ ಬೀರಲು ಸಾಧ್ಯವಾಯಿತು. ಅಂದರೆ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಈ ಎಲ್ಲಾ ಸಮಸ್ಯೆಗಳಿಗೆ ಸ್ಪಂದಿಸುವ ಭರವಸೆಯನ್ನು ನೀಡುತ್ತಾ ಬಂದಿರುವ ಕಾರಣ ಈ ಸುಶಿಕ್ಷಿತ ಶಿಕ್ಷಕರ ಪದವಿಧರರ ಗಮನ ಸೆಳೆಯಲು ಕಾರಣವಾಯಿತು.

3.ಇತ್ತೀಚೆಗೆ ವಿಧಾನಪರಿಷತ್ ಅಧ್ಯಕ್ಷರಾದ ಬಸವರಾಜ ಹೊರಟ್ಟಿ ಹೇಳಿದ ಹೇಳಿಕೆ ಅಂದರೆ “ತಾನು ವಿಧಾನಪರಿಷತ್ ಅಧ್ಯಕ್ಷನಾದ ಮೇಲೆ ಹತ್ತು ಮಂದಿ ವಿಧಾನಪರಿಷತ್ ಸದಸ್ಯರು ಅವಧಿಮುಗಿಯುವ ಮುನ್ನವೇ ರಾಜೀನಾಮೆ ಸಲ್ಲಿಸಿದ್ದಾರೆ.
4.ರಾಜೀನಾಮೆ ಸಲ್ಲಿಸಿದವರ ಮುಂದಿನ ಹೆಜ್ಜೆ ಕಾಂಗ್ರೆಸ್ ಪಕ್ಷ ದಿಂದಲೇ ಸ್ಪಧಿ೯ಸಿ ವಿಧಾನಪರಿಷತ್ ಪ್ರವೇಶ ಮಾಡುವ ರಾಜಕೀಯ ನಡೆಯೂ ಹೌದು..ಬಿಜೆಪಿಯಲ್ಲಿ ಇದ್ದರೆ ತಮಗೆ ಕನಿಷ್ಠ ಪಕ್ಷ ವಿಧಾನಪರಿಷತ್ ಸದಸ್ಯ ಹುದ್ದೆಗೂ ಸಂಚಕಾರ ಬರ ಬಹುದು ಅನ್ನುವ ಹೆದರಿಕೆ. ಅಂತೂ ವಿದ್ಯಾವಂತ ಮತದಾರರುಕೂಡಾ ತಾವು ನಂಬಿದ ಪಕ್ಷದಿಂದ ದೂರವಾಗುವ ಎಚ್ಚರಿಕೆಯ ಘಂಟೆ ಬಾರಿಸುತ್ತಿರುವುದಂತೂ ಇತ್ತೀಚಿನ ವಿಧಾನಪರಿಷತ್ ಸದಸ್ಯರ ರಾಜೀನಾಮೆ ಪವ೯ಕ್ಕೆ ಕನ್ನಡಿ ಹಿಡಿದಂತಿದೆ.:ಪ್ರೊ.ಕೊಕ್ಕಣೆ೯ ಸುರೇಂದ್ರನಾಥ ಶೆಟ್ಟಿ ಉಡುಪಿ.

Leave a Reply

Your email address will not be published. Required fields are marked *

error: Content is protected !!