ಕೋಟ ಗೆಲುವು ಹಿಂದುತ್ವದ ಗೆಲುವು- ಯಶ್ಪಾಲ್ ಸುವರ್ಣ

ಉಡುಪಿ: ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾದ ಕೋಟ ಶ್ರೀನಿವಾಸ ಪೂಜಾರಿಯವರ ಗೆಲವು ಹಿಂದುತ್ವ ಮತ್ತು ಅಭಿವೃದ್ಧಿಯ ಗೆಲುವು ಎಂದು ಉಡುಪಿ ಶಾಸಕರಾದ ಯಶ್ ಪಾಲ್ ಎ. ಸುವರ್ಣ ರವರು ಕುಂಜಿಬೆಟ್ಟು ವಾರ್ಡ್ ನ ಕಾರ್ಯಕರ್ತರ ಸಭೆಯಲ್ಲಿ ಹೇಳಿದರು.

ಈ ಸಭೆಯ ಅಧ್ಯಕ್ಷತೆಯನ್ನು ಉಡುಪಿ ನಗರ ಬಿಜೆಪಿ ಅಧ್ಯಕ್ಷರಾದ ದಿನೇಶ್ ಅಮೀನ್ ವಹಿಸಿದ್ದರು.

ನಗರಸಭಾ ಸದಸ್ಯರಾದ ಗಿರೀಶ್ ಎಂ.ಅಂಚನ್, ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾದ ಕಿರಣ್ ಕುಮಾರ್ ಬೈಲೂರು, ಪಕ್ಷದ ಪ್ರಮುಖರಾದ ಮಾಜಿ ನಗರಸಭಾ ಸದಸ್ಯರಾದ ಮೋಹನ್ ಉಪಾಧ್ಯಾಯ, ಮಂಡಲದ ಪ್ರಧಾನ ಕಾರ್ಯದರ್ಶಿ ಜಗದೀಶ್ ಆಚಾರ್ಯ ಕಪ್ಪೆಟ್ಟು, ನಗರ ಯುವ ಮೋರ್ಚಾ ಅಧ್ಯಕ್ಷರಾದ ಶ್ರೀವತ್ಸ, ಕುಂಜಿಬೆಟ್ಟು ವಾರ್ಡ್ ನ ಬೂತ್ ಅಧ್ಯಕ್ಷರುಗಳಾದ ಶರತ್ ಸಾಲಿಯಾನ್, ಸುಪ್ರೀತ್ ಭಂಡಾರಿ, ಹರೀಶ್ ಸೇರಿಗಾರ್ ಬೈಲಕೆರೆ, ಹಾಗೂ ನೂರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!