ಜೀವ ಪಣಕ್ಕಿಟ್ಟು ಜೀವನ ನಡೆಸುವ ಮೀನುಗಾರರ ಕುಟುಂಬಗಳಿಗೆ ಭದ್ರತೆ ಬೇಕು: ಕ್ಯಾ.ಬ್ರಿಜೇಶ್‌

ಮಂಗಳೂರು: ದಕ್ಷಿಣ ಕನ್ನಡ ಕ್ಷೇತ್ರದ ಬಿಜೆಪಿ ಲೋಕಸಭಾ ಅಭ್ಯರ್ಥಿಯಾದ ಕ್ಯಾಪ್ಟನ್‌ ಬ್ರಿಜೇಶ್‌ ಚೌಟ ಅವರು, ಮಂಗಳೂರು ನಗರದ ಬಿಜೆಪಿ ಜಿಲ್ಲಾ ಕಚೇರಿ ಜಗನ್ನಾಥ ಭವನದಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲೆ ಮೀನುಗಾರರ ಪ್ರಕೋಷ್ಠ ವತಿಯಿಂದ ಆಯೋಜಿಸಲಾಗಿದ್ದೆ ಮೀನುಗಾರರ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದರು, ನಮ್ಮ ಮೀನುಗಾರರು ಕಡಲಿನೊಂದಿಗೆ ತಾಯಿ-ಮಕ್ಕಳ ಸಂಬಂಧವುಳ್ಳವರು. ಕಡಲಿನ ರಕ್ಷಣೆಗೆ ಸರ್ಕಾರಗಳು ವ್ಯವಸ್ಥೆ ರೂಪಿಸುವ ಮೊದಲೇ ಕಡಲ ರಕ್ಷಣೆಗೆ ತಮ್ಮ ಬದುಕನ್ನು ಮುಡಿಪಾಗಿಟ್ಟವರು. ಈ ಹಿಂದೆ ಇದ್ದ ಸರ್ಕಾರಗಳಾಗಲಿ, ವ್ಯವಸ್ಥೆಗಳಾಗಲಿ ನಮ್ಮ ಮೀನುಗಾರರ ಆದ್ಯತೆ, ಅವರಿಗೆ ಬೇಕಾದ ಮೂಲಸೌಕರ್ಯಗಳ ಕುರಿತಂತೆ ತೋರಿದ ಕಾಳಜಿ ತುಂಬಾ ಕಡಿಮೆ. ಆದರೆ ನಮ್ಮ ಪ್ರಧಾನಿ ಮೋದಿಜಿಯವರು ಬಂದ ಮೇಲೆ ಮೀನುಗಾರರ ಸಮಸ್ಯೆಗೆ ಪೂರಕವಾಗಿ ಯೋಜನೆಗಳನ್ನು ರೂಪಿಸುವ ಮೂಲಕ ಮೀನುಗಾರಿಕಾ ಇಲಾಖೆ ಸ್ಥಾಪಿಸಿ ಮೀನುಗಾರರ ಬೆನ್ನೆಲುಬಾಗಿ ನಿಂತಿದ್ದಾರೆನ್ನಬಹುದು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಪಕ್ಷದ ಹಿರಿಯ ನಾಯಕ ರಾಮಚಂದ್ರ ಬೈಕಂಪಾಡಿ, ಮಾಜಿ ಸಚಿವ ನಾಗರಾಜ ಶೆಟ್ಟಿ, ಮಂಗಳೂರು ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್‌ ಕುಂಪಲ, ಮಂಗಳೂರು ಮೇಯರ್‌ ಸುಧೀರ್‌ ಶೆಟ್ಟಿ ಕಣ್ಣೂರು, ಬಿಜೆಪಿ ಮೀನುಗಾರರ ಪ್ರಕೋಷ್ಠದ ಸಂಚಾಲಕ ಗಿರೀಶ್‌ ಕರ್ಕೇರಾ ಸೇರಿದಂತೆ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.

ಸುಳ್ಯ ವಿಧಾನಸಭಾ ಕ್ಷೇತ್ರದ ಬಿಜೆಪಿ ಕಾರ್ಯಕರ್ತರ ಸಮಾವೇಶ: ಕಳೆದ 10 ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಕೈಗೊಂಡ ಅಭಿವೃದ್ದೀ ಕಾರ್ಯಗಳನ್ನು, ಆರ್ಥಿಕ ಸುಧಾರಣೆಗಳನ್ನು ಕೊಂಡಾಡಿದ ಕ್ಯಾ. ಬ್ರಿಜೇಶ್‌ ಚೌಟ ಅವರು, ಇಂದು ಭಾರತೀಯ ಸೈನ್ಯ ವಿಶ್ವದ ಬಲಿಷ್ಠ ಸೇನೆಗಳಲ್ಲಿ ಒಂದೆನಿಸಿದ್ದರೆ, ಅದಕ್ಕೆ ಕಾರಣ ಅವರು ಕೈಗೊಂಡ ಸುಧಾರಣೆಗಳು ಇಂದು ನಮ್ಮ ಸೈನಿಕರಿಗೆ ಹೆಚ್ಚು ಸುರಕ್ಷೆಯನ್ನು, ಸೇನೆಯಲ್ಲಿ ಆಧುನಿಕ ಶಸ್ತ್ರಾಸಗಳನ್ನು ಕಾಣುವಂತಾಗಿದೆ.

ಹಾಗೆಯೇ, ಬಡವರ, ಮಹಿಳೆಯರ, ಯುವಕರ ಮೇಲಿರುವ ಹೃದಯಾಂತರಾದ ಕಾಳಜಿಯಿಂದ ಎಲ್ಲರೂ ನನ್ನ ಪರಿವಾರದವರು ಎಂಬ ಭಾವನೆ ಹೊತ್ತು ದೇಶವನ್ನು ಮುನ್ನಡೆಸುತ್ತಿದ್ದಾರೆ.
ಮುಂಬರುವ ದಿನಗಳಲ್ಲಿ ಸಂಸದನಾಗಿ ಸಿಕ್ಕ ಅವಕಾಶವನ್ನು ನಿಮ್ಮ ಸೇವೆಗಾಗಿ ಮೀಸಲಿಡುತ್ತೇನೆ. ಜಿಲ್ಲೆಯನ್ನು ತ್ವರಿತಗತಿಯಲ್ಲಿ ಆದುನಿಕಗೊಳಿಸುವ, ಸಮೃದ್ಧಗೊಳಿಸುವ ಪ್ರಯತ್ನಗಳನ್ನು ನಾನು ಮಾಡುತ್ತೇನೆ ಎಂದರು.

Leave a Reply

Your email address will not be published. Required fields are marked *

error: Content is protected !!