ಬೈಕಂಪಾಡಿ: ಸೀ ಫುಡ್ ಫ್ಯಾಕ್ಟರಿ ಬೆಂಕಿಗಾಹುತಿ- ಕೋಟ್ಯಾಂತರ ರೂ.ನಷ್ಟ

ಮಂಗಳೂರು, ಮಾ.28: ಬೈಕಂಪಾಡಿ ಕೈಗಾರಿಕಾ ವಲಯದಲ್ಲಿರುವ ಕೋಳಿ, ಮೀನಿನ ಆಹಾರ ತಯಾರಿಕಾ ಘಟಕವೊಂದರಲ್ಲಿ ಇಂದು ಮುಂಜಾನೆ ಬೆಂಕಿ ಅವಘಡ ಸಂಭವಿಸಿದ್ದು, ಕೋಟ್ಯಂತರ ರೂ. ನಷ್ಟ ಸಂಭವಿಸಿದೆ.

ಶಿಹಾರ್ ಎಂಟರ್ ಪ್ರೈಸಸ್ ಎಂಬ ಈ ಫ್ಯಾಕ್ಟರಿಯಲ್ಲಿ ಇಂದು ಮುಂಜಾನೆ 4:45ರ ವೇಳೆ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದೆ. ಕ್ಷಣಾರ್ಧದಲ್ಲಿ ಬೆಂಕಿ ಇಡೀ ಫ್ಯಾಕ್ಟರಿಯನ್ನು ಆವರಿಸಿದೆ. ಸ್ಥಳಕ್ಕೆ ಆಗಮಿಸಿದ ಎಂಆರ್ ಪಿಎಲ್, ಎನ್‌ಎಂಪಿಟಿನಿಂದ ಸುಮಾರು 8 ಅಗ್ನಿಶಾಮಕ ವಾಹನಗಳು ಬೆಂಕಿ ನಂದಿಸಲು ಹರಸಾಹಸ ಪಟ್ಟವು. ನಿರಂತರ ಮೂರೂವರೆ ಗಂಟೆಗಳ ಕಾರ್ಯಾಚರಣೆಯ ಬಳಿಕ ಬೆಂಕಿ ನಿಯಂತ್ರಣಕ್ಕೆ ಬಂದಿದೆ. ಆದರೆ ಅಷ್ಟರಲ್ಲಿ ಫ್ಯಾಕ್ಟರಿ ಸಂಪೂರ್ಣ ಬೆಂಕಿಗೆ ಆಹುತಿಯಾಗಿದೆ.

ಬೆಂಕಿ ಅವಘಡಕ್ಕೆ ಶಾರ್ಟ್ ಸರ್ಕ್ಯೂಟ್ ಕಾರಣ ಎನ್ನಲಾಗಿದೆ. ಇದರಿಂದ ಅಂದಾಜು 3 ಕೋಟಿ ರೂ.ನಷ್ಟು ನಷ್ಟ ಸಂಭವಿಸಿದೆ ಎನ್ನಲಾಗಿದೆ.

Leave a Reply

Your email address will not be published. Required fields are marked *

error: Content is protected !!