ಉಡುಪಿ: ನಿಂತಿದ್ದ ಕಾರಿಗೆ ರಿಕ್ಷಾ ಡಿಕ್ಕಿ, ಚಾಲಕನ ಸಾವು
ಉಡುಪಿ: (ಉಡುಪಿ ಟೈಮ್ಸ್ ವರದಿ)ಗುಂಡಿಬೈಲ್‌ನಲ್ಲಿ ನಿಂತಿದ್ದ ಕಾರಿಗೆ ರಿಕ್ಷಾವೊಂದು ಡಿಕ್ಕಿಯಾಗಿ, ರಿಕ್ಷಾ ಚಾಲಕ ಮೃತ ಪಟ್ಟ ಘಟನೆ ನಡೆದಿದೆ.
ಮೃತ ರಿಕ್ಷಾ ಚಾಲಕ ಮೂಡುಬೆಟ್ಟಿನ ಸುನಿಲ್ (44) ಎಂದು ತಿಳಿದು ಬಂದಿದೆ.
ಅಂಬಾಗಿಲಿನಿಂದ ಉಡುಪಿ ಕಡೆಗೆ ಬರುತ್ತಿದ್ದ ರಿಕ್ಷಾ ಗುಂಡಿಬೈಲ್‌ನ ನಾಗನ ಕಟ್ಟೆ ಬಳಿ ಪಾರ್ಕ್ ಮಾಡಿದ್ದ ಝೆನ್ ಕಾರಿಗೆ ಡಿಕ್ಕಿ ಹೊಡೆದಿತ್ತು. ಡಿಕ್ಕಿ ಹೊಡೆದ ರಭಸಕ್ಕೆ ರಿಕ್ಷಾ ಪಲ್ಟಿಯಾಗಿ ರಿಕ್ಷಾ ಚಾಲಕ ರಸ್ತೆಗೆ ಎಸೆಯಲ್ಪಟ್ಟ ಎನ್ನಲಾಗಿದೆ. ಈ ಸಂದರ್ಭ ಚಾಲಕ ಸುನಿಲ್ ಮೇಲೆ ರಿಕ್ಷಾ ಬಿದ್ದು ತೀವೃ ಗಾಯಗೊಂಡಿದ್ದ. ತಕ್ಷಣ ಸ್ಥಳೀಯರು ಆತನನ್ನು ಗಾಂಧಿ ಆಸ್ಪತ್ರೆಗೆ ಚಿಕಿತ್ಸೆಗೆಂದು ಕರೆದುಕೊಂಡು ಹೋಗಿದ್ದರು. ಅಲ್ಲಿ ಪರೀಕ್ಷಿಸಿದ ವೈದ್ಯರು ಸುನಿಲ್ ಮೃತ ಪಟ್ಟಿದ್ದಾಗಿ ತಿಳಿಸಿದ್ದಾರೆ.
ರಿಕ್ಷಾದಲ್ಲಿ ಓರ್ವ ಪ್ರಯಾಣಿಕರಿದ್ದು ಸಣ್ಣ ಪುಟ್ಟ ಗಾಯಗೊಂಡು ಪ್ರಾಣಪಾಯದಿಂದ ಪಾರಗಿದ್ದಾರೆ.
.