ಉಡುಪಿ: ಟ್ರೇಡಿಂಗ್ ಆ್ಯಪ್ನಿಂದ 32.40ಲಕ್ಷ ರೂ.ಆನ್ಲೈನ್ ವಂಚನೆ
ಉಡುಪಿ, ಮಾ.28: ಟ್ರೇಡಿಂಗ್ ಆ್ಯಪ್ ಮೂಲಕ ಹೆಚ್ಚಿನ ಲಾಭಾಂಶ ನೀಡುವುದಾಗಿ ನಂಬಿಸಿ ಲಕ್ಷಾಂತರ ರೂ. ಮೋಸ ಮಾಡಿರುವ ಬಗ್ಗೆ ಉಡುಪಿ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜಗದೀಶ್(62) ಎಂವರಿಗೆ ಅಪರಿಚಿತ ವ್ಯಕ್ತಿಗಳು ಸಂದೇಶ ಕಳುಹಿಸಿ, ಟ್ರೆಡಿಂಗ್ ಆ್ಯಪ್ನಿಂದ ಹೆಚ್ಚಿನ ಲಾಭಾಂಶ ಪಡೆಯಬಹುದೆಂದು ಆಸೆ ತೋರಿಸಿದರು. ಇದನ್ನು ನಂಬಿದ ಅವರು ಆರೋಪಿಗಳು ತಿಳಿಸಿದ ವಿವಿಧ ಬ್ಯಾಂಕ್ ಖಾತೆಗಳಿಗೆ ಫೆ.25ರಿಂದ ಮಾ14ರ ತನಕ ಹಂತ ಹಂತವಾಗಿ ಒಟ್ಟು 32,40,000ರೂ. ಹಣವನ್ನು ಪಾವತಿಸಿದರು. ಆದರೆ ಈವರೆಗೆ ಜಗದೀಶ್ ಅವರಿಗೆ ಹೂಡಿಕೆ ಮಾಡಿದ ಹಣವನ್ನಾಗಲಿ ಅಥವಾ ಲಾಭಾಂಶವನ್ನು ನೀಡದೇ ನಂಬಿಸಿ, ಮೋಸ ಮಾಡಿರುವುದಾಗಿ ದೂರಲಾಗಿದೆ.