ಕೆಳಾರ್ಕಳಬೆಟ್ಟು: ಗಾಂಜಾ ಮಾರಾಟಕ್ಕೆ ಯತ್ನ- ಓರ್ವನ ಬಂಧನ

ಉಡುಪಿ, ಮಾ.26: ಅಕ್ರಮವಾಗಿ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಓರ್ವನನ್ನು ಉಡುಪಿ ಸೆನ್ ಅಪರಾಧ ಪೊಲೀಸರು ಮಾ.25ರಂದು ಕೆಳಾರ್ಕಳಬೆಟ್ಟು ಎಂಬಲ್ಲಿ ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಸುಕೇಶ್(26) ಎಂದು ಗುರುತಿಸಲಾಗಿದೆ. ಬೈಕಿನಲ್ಲಿ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಈತನನ್ನು ಪೊಲೀಸರು ಬಂಧಿಸಿ, ಬೈಕ್ ಮತ್ತು 44ಸಾವಿರ ರೂ. ಮೌಲ್ಯದ 1 ಕಿಲೋ 102 ಗ್ರಾಂ ತೂಕದ ಗಾಂಜಾ, ಮೊಬೈಲ್ ಫೋನ್ ವಶಪಡಿಸಿಕೊಂಡಿದ್ದಾರೆ.

ಈ ಬಗ್ಗೆ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!