ಮಂಗಳೂರು: ಡಿವೈಡರ್‌ಗೆ ಬೈಕ್ ಢಿಕ್ಕಿ- ಪತ್ನಿ ಮೃತ್ಯು, ಪತಿ‌ ಗಂಭೀರ

ಮಂಗಳೂರು: ಕೊಣಾಜೆ‌ ಠಾಣಾ ವ್ಯಾಪ್ತಿಯ ನಾಟೆಕಲ್ ಸಮೀಪದ ತಿಪ್ಲೆಪದವು ಎಂಬಲ್ಲಿ‌ ರಸ್ತೆ ಡಿವೈಡರ್ ಗೆ ಬೈಕ್ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಗಂಭೀರ ಗಾಯಗೊಂಡು, ಸಹ ಸವಾರೆ ಅವರ ಪತ್ನಿ ಮೃತಪಟ್ಟಿರುವ ಘಟನೆ‌ ಸಂಭವಿಸಿದೆ.

ಸಾವನ್ನಪ್ಪಿದ ವ್ಯಕ್ತಿ ಬೋಂದೇಲ್ ನಿವಾಸಿ ಶ್ರೀನಿಧಿ (29) ಎಂದು ತಿಳಿಯಲಾಗಿದೆ. ಬೈಕ್‌ ಸವಾರ ಯತೀಶ್‌ (30) ಎಂಬವರು ಗಂಭೀರ ಗಾಯಗೊಂಡು ಆಸ್ಪತ್ರೆಯ ಲ್ಲಿ‌ ಚಿಕಿತ್ಸೆ ಪಡೆಯುತ್ತಿದ್ದಾರೆ.

ಶ್ರೀನಿಧಿ ಹಾಗೂ ಗಾಯಾಳು ಪತಿ, ಮುಡಿಪುವಿನಲ್ಲಿನ ಸಂಬಂಧಿಕರ ಗೃಹಪ್ರವೇಶಕ್ಕೆ ತೆರಳಿ ವಾಪಸ್ಸಾಗುವ ಸಂದರ್ಭ ಬೈಕ್, ಸವಾರನ ನಿಯಂತ್ರಣ ತಪ್ಪಿ ನಾಟೆಕಲ್ ಗ್ರೀನ್ ಗ್ರೌಂಡ್ ಸಮೀಪ ಡಿವೈಡರ್ ಗೆ ಬಡಿದು ಈ ದುರ್ಘಟನೆ ನಡೆದಿದೆ. ಇನ್ನು ಮೃತ ಶ್ರೀನಿಧಿ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

ಈ ಬಗ್ಗೆ ಮಂಗಳೂರು ದಕ್ಷಿಣ ಸಂಚಾರಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!