ಉಡುಪಿ ಜಿಲ್ಲಾ ಕಾಂಗ್ರೆಸ್: ಮುಂಚೂಣಿ ಘಟಕಗಳ ಸಭೆ

ಉಡುಪಿ: ಲೋಕಸಭೆ ಚುನಾವಣೆ ಕಾರ್ಯತಂತ್ರಗಳ ಬಗ್ಗೆ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಕಾಂಗ್ರೆಸ್ ಮುಂಚೂಣಿ ಘಟಕಗಳ ಸಭೆ ಜರಗಿತು

ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಅಶೋಕ್ ಕುಮಾರ್ ಕೊಡವೂರು ಮಾತನಾಡಿ ಎಲ್ಲಾ ಮುಂಚೂಣಿ ಘಟಕಗಳ ಪದಾಧಿಕಾರಿಗಳು ಪಕ್ಷ ನೀಡಿರುವ ಜವಾಬ್ದಾರಿಯನ್ನು ನಿಭಾಯಿಸಿ ಪಕ್ಷದ ಅಭ್ಯರ್ಥಿಯನ್ನು ಅತಿ ಹೆಚ್ಚಿನ ಮತಗಳಿಂದ ಗೆಲ್ಲಿಸುವ ಪ್ರಯತ್ನ ಮಾಡಬೇಕು. ವಿವಿಧ ಘಟಕಗಳ ಪದಾಧಿಕಾರಿಗಳು ಅವರವರ ಕ್ಷೇತ್ರಗಳಲ್ಲಿ ಪಕ್ಷಕ್ಕೆ ಹೆಚ್ಚಿನ ಮತ ಬರುವಂತೆ ಕಾರ್ಯನಿರ್ವಹಿಸ ಬೇಕು ಎಂದರು.

ವೈಷ್ಯಮ್ಯ, ಆಡಂಬರ, ಭ್ರಷ್ಟಾಚಾರಗಳನ್ನು ವರ್ಜಿಸಿ ಅವರವರ ಕೆಲಸಗಳನ್ನು ನಿಯತ್ತಿನಿಂದ ಮಾಡಿದಾಗ ದೇಶದಲ್ಲಿ ರಾಮ ರಾಜ್ಯದ ಕನಸು ನನಸಾಗುವುದರಲ್ಲಿ ಸಂಶಯ ಇಲ್ಲ. ಹೆಗಡೆಯವರು ತಮ್ಮ ಅಧಿಕಾರದ ಅವಧಿಯಲ್ಲಿ ಉಡುಪಿಯನ್ನು ಜಿಲ್ಲೆಯಾಗಿ ರಚನೆ  ಮಾಡುವುದರೊಂದಿಗೆ ಉಡುಪಿಯ ಸಮಗ್ರ ಅಭಿವೃದ್ಧಿಗೆ ಕಾರಣೀಭೂತರಾಗಿದ್ದಾರೆ ಎಂದರುˌ

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆಯವರು ಮಾತನಾಡಿ ಸಿದ್ದರಾಮಯ್ಯನವರ 

ರಾಜ್ಯ ಸರಕಾರದ ಗೃಹಲಕ್ಷ್ಮಿ ಯೋಜನೆ ಮಹಿಳೆಯರ ಸ್ವಾವಲಂಬನೆಗೆ  ಉತ್ತೇಜನ ನೀಡುತ್ತದೆ ˌಉದ್ಯೋಗ ಸಮಸ್ಯೆ ಉಲ್ಬನವಾಗುತ್ತಿರುವುದರಿಂದ ಸರಕಾರ ಪದವೀಧರರಿಗೆ ಉದ್ಯೋಗ ಅರಸಲು ಸಹಾಯ ಮಾಡುತ್ತದೆ. ಸರಕಾರದ ಈ ಯೋಜನೆಗಳನ್ನು ಮತದಾರರಿಗೆ ಮುಟ್ಟುವಂತೆ ಕಾರ್ಯಕರ್ತರು ಮನವರಿಕೆ ಮಾಡಬೇಕು ಎಂದರು.ಅಧಿಕಾರದ  ಅವಧಿಯಲ್ಲಿ ಕರಾವಳಿ ಪ್ರದೇಶಕ್ಕೆ ನೀಡಿದ ಕೊಡುಗೆಯನ್ನು ಜನರಿಗೆ ಮನವರಿಕೆ ಮಾಡಬೇಕು ˌ  ಸಕ್ರೀಯರಲ್ಲದವರನ್ನು ಗುರುತಿಸಿ ಅವರನ್ನು ಕ್ರಿಯಾಶೀಲಯನ್ನಾಗಿಸುವುದುˌ  ಸಕ್ರೀಯರನ್ನು ಪಕ್ಷಕ್ಕೆ ಸೇರ್ಪಡೆಗೊಳಿಸುವಂತೆ ಮುಖಂಡರು ಮುತುವರ್ಜಿ ವಹಿಸಬೇಕು ಎಂದರು.

ಸಭೆಯಲ್ಲಿ ಜಿಲ್ಲಾ ಕಾಂಗ್ರೆಸ್ ಕಾರ್ಯಾಧಕ್ಷ ಕಿಶನ್ ಹೆಗ್ಡೆ ಕೊಳ್ಕೆಬೈಲ್ˌ ಮುಖಂಡರಾದ ಎಂ.ಎ.ಗಪೂರ್, ಭಾಸ್ಕರ್ ರಾವ್ ಕಿದಿಯೂರು, ಮುರಳಿ ಶೆಟ್ಟಿ ಹಾಗೂ ವಿವಿಧ ಘಟಕಗಳ ಅಧ್ಯಕ್ಷರುಗಳಾದ ಹರೀಶ್ ಕಿಣಿ, ಅಣ್ಣಯ್ಯ ಸೇರಿಗಾರ್ˌ ಗೀತಾ ವಾಗ್ಳೆ, ಶಶಿಧರ್ ಶೆಟ್ಟಿ ಎಲ್ಲೂರು, ಕಿರಣ್ ಹೆಗ್ಡೆ ˌಸರ್ಪುದ್ದಿನ್ ಶೇಕ್ˌ ಜಯ ಕುಮಾರ್, ಜಯಕುಮಾರ್ ನಾಯಕ್ˌ ಸೌರಭ್  ಬಲ್ಲಾಳ್, ದೀಪಕ್ ಕೋಟ್ಯಾನ್ˌ ಕಿಶೋರ್ ಕುಮಾರ್  ಎರ್ಮಾಳ್ˌ ವಿಶ್ವಾಸ್ ಅಮೀನ್ˌ ಹರೀಶ್ ಶೆಟ್ಟಿ  ಪಾಂಗಾಳ, ವೈ.ಬಿ.ರಾಘವೆಂದ್ರˌ ಇಸ್ಮಾಯಿಲ್   ಆತ್ರಾಡಿ ಉಪಸ್ಥಿತರಿದ್ದರು. ಪ್ರ.ಕಾರ್ಯದರ್ಶಿ ಬಿ. ನರಸಿಂಹಮೂರ್ತಿ ಸ್ವಾಗತಿಸಿದರು. 

Leave a Reply

Your email address will not be published. Required fields are marked *

error: Content is protected !!