ಕಡಿಯಾಳಿ ಶ್ರೀಮಹಿಷಮರ್ದಿನಿ ದೇವಸ್ಥಾನದ ನೂತನ ಆಡಳಿತ ಮಂಡಳಿ ಸದಸ್ಯರ ನೇಮಕ
ಉಡುಪಿ: ಕಡಿಯಾಳಿ ಶ್ರೀಮಹಿಷಮರ್ದಿನಿ ದೇವಸ್ಥಾನದ ನೂತನ ಆಡಳಿತ ಮಂಡಳಿಯ ಸದಸ್ಯರ ನೇಮಕ.
ನೂತನ ಆಡಳಿತ ಮಂಡಳಿಗೆ ಡಾಕ್ಟರ್ ರವಿರಾಜ್ ಆಚಾರ್ಯ, ನಾಗರಾಜ ಶೆಟ್ಟಿ ಕಡಿಯಾಳಿ, ಮಂಜುನಾಥ್ ಹೆಬ್ಬಾರ್, ರರ್ಮೇಶ್ ಶೇರಿಗಾರ್ ಕುಂಜಿಬೆಟ್ಟು, ಕಿಶೋರ್ ಸಾಲ್ಯಾನ್ ಕಾತ್ಯಾಯಿನಿ ನಗರ, ಸಂಧ್ಯಾ ಪ್ರಭು, ಶಶಿಕಲಾ ಭರತ್, ಗಣೇಶ ನಾಯ್ಕ, ಪ್ರಸ್ತುತ ಪಾಳಿಯಲ್ಲಿ ಇರುವ ಅರ್ಚಕರನ್ನು ನೇಮಿಸಿ ಆದೇಶವನ್ನು ಮುಜರಾಯಿ ಇಲಾಖೆ ಹೊರಡಿಸಿದೆ.
ನೂತನ ಆಡಳಿತ ಮಂಡಳಿಯ ಸದಸ್ಯರಿಗೆ ಉಡುಪಿ ಶಾಸಕ ಕೆ ರಘುಪತಿ ಭಟ್, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ. ರಾಘವೇಂದ್ರ ಕಿಣಿ, ಕುಂಜಿಬೆಟ್ಟು ವಾರ್ಡಿನ ನಗರಸಭಾ ಸದಸ್ಯ ಗಿರೀಶ್ ಅಂಚನ್, ಕಡಿಯಾಳಿ ವಾರ್ಡಿನ ನಗರಸಭಾ ಸದಸ್ಯ ಗೀತಾ ಶೇಟ್ ಅಭಿನಂದನೆ ಸಲ್ಲಿಸಿರುತ್ತಾರೆ.