ಉಡುಪಿ ಮಹಿಳಾ ದಿನಾಚರಣೆ: ಅಂಚೆ ಕಛೇರಿ ಮಹಿಳಾ ಸಿಬ್ಬಂದಿಗೆ ಸನ್ಮಾನ

ಉಡುಪಿ: ಲಯನ್ಸ್‌ ಕ್ಲಬ್‌ ಉದ್ಯಾವರ ಸನ್‌ ಶೈನ್‌ ವತಿಯಿಂದ ಮಹಿಳಾ ದಿನಾಚರಣೆಯನ್ನು ಸಂಪಿಗೆ ನಗರದ ಲ. ವಿಲ್ಫ್ರೆಡ್ ಡಿಸೋಜ ಅವರ ಮನೆಯಲ್ಲಿ ಇತ್ತೀಚೆಗೆ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಉದ್ಯಾವರ ಪರಿಸರದ ಕುತ್ಪಾಡಿ ಅಂಚೆ ಕಛೇರಿಯಲ್ಲಿ ಉತ್ತಮ, ಜನಪರ ಸೇವೆ ಸಲ್ಲಿಸುತ್ತಿರುವ ಇಬ್ಬರು ಮಹಿಳಾ ಅಂಚೆ ಸಿಬ್ಬಂದಿಯವರನ್ನು ಸನ್ಮಾನಿಸಲಾಯಿತು. ಬ್ರಾಂಚ್‌ ಪೋಸ್ಟ್‌ ಮಾಸ್ಟರ್‌ ನಯನಾ ಡಿಸೋಜ ಹಾಗೂ ಪೋಸ್ಟ್ ಮ್ಯಾನ್‌ ಮೇಘಾ ಹಾರುಗೊಪ್ಪ‌ ಇವರ ಉದಾತ್ತ ಸೇವೆಯನ್ನು ಸ್ಮರಿಸಿ ಶಾಲು ಹೊದಿಸಿ ಕಾಣಿಕೆ ನೀಡಿ ಗೌರವಿಸಲಾಯಿತು.

ಲಯನ್‌ ವಿಲ್ಫ್ರೆಡ್‌ ಡಿಸೋಜರವರು ಸನ್ಮಾನಿತರ ಪರಿಚಯವನ್ನು ಹೇಳಿ ಅವರಿಗೆ ಶುಭ ಹಾರೈಸಿದರು. ಸನ್ಮಾನಿತರು ಅವರಿಗೆ ಸಲ್ಲಿಸಿದ ಗೌರವಕ್ಕೆ ಧನ್ಯವಾದ ಸಲ್ಲಿಸಿದರು. ಈ ಸಂದರ್ಭದಲ್ಲಿ ಉದ್ಯಾವರ ಸನ್‌ ಶೈನ್‌ ಲಯನ್ಸ್‌ ಕ್ಲಬ್‌ ನ ಅಧ್ಯಕ್ಷರಾದ ಲ.ಪ್ರೇಮ್‌ ಮಿನೇಜಸ್‌, ಲ. ಅನಿಲ್‌ ಮಿನೇಜಸ್‌, ಲ.ಹರ್ಷ ಮೈಂದನ್, ಮಾಜಿ ಅಧ್ಯಕ್ಷರಾದ ಲ. ಗೋಡ್ಫ್ರಿ ಡಿಸೋಜ ಎಂ.ಜೆ.ಎಫ್.‌, ಲ.ವಿಲ್ಫ್ರೆಡ್‌ ಡಿಸೋಜ, ಲ.ರೋಯ್ಸ್‌ ಫೆರ್ನಾಂಡಿಸ್, ಮೆಲ್ವಿನ್‌ ದಾಂತಿ ಹಾಗೂ ಕುಟುಂಬದ ಸದಸ್ಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!