ಮಹಾರಾಷ್ಟ್ರ: ಬೆಳ್ಳಂಬೆಳಗ್ಗೆ ಎರಡು ಬಾರಿ ಕಂಪಿಸಿದ ಭೂಮಿ – ಬೆಚ್ಚಿ ಬಿದ್ದ ಜನತೆ

ಮಹಾರಾಷ್ಟ್ರ: ಗುರುವಾರ ಮುಂಜಾನೆ ಮಹಾರಾಷ್ಟ್ರದ ಹಿಂಗೋಲಿ ನಗರದಲ್ಲಿ 10 ನಿಮಿಷಗಳ ಅಂತರದಲ್ಲಿ ಎರಡು ಬಾರಿ ಭೂಮಿ ಕಂಪಸಿದ ಬಗ್ಗೆ ವರದಿಯಾಗಿದೆ.
ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರದ ಮಾಹಿತಿ ಪ್ರಕಾರ, 4.5 ತೀವ್ರತೆಯ ಮೊದಲ ಕಂಪನವು ಸುಮಾರು 06.08 ಗಂಟೆಗೆ ಸಂಭವಿಸಿದ್ದು ಇದಾದ ಹತ್ತು ನಿಮಿಷಗಳಲ್ಲಿ 3.6 ತೀವ್ರತೆಯ ಮತ್ತೊಂದು ಕಂಪನ ಸಂಭವಿಸಿದೆ ಎಂದು ಹೇಳಿದ್ದಾರೆ.
ಭೂಕಂಪದಿಂದ ಯಾವುದೇ ಆಸ್ತಿ-ಪಾಸ್ತಿ ಹಾನಿ ಅಥವಾ ಪ್ರಾಣ ಹಾನಿ ಸಂಭವಿಸಿರುವ ಬಗ್ಗೆ ಮಾಹಿತಿ ತಿಳಿದುಬಂದಿಲ್ಲ.