ಬ್ರಹ್ಮಾವರ ಶೂಟೌಟ್ ಪ್ರಕರಣ: ಘಟನಾ ಸ್ಥಳಕ್ಕೆ ಡಿಎಸ್‌ಎಸ್ ನಿಯೋಗ ಭೇಟಿ

ಉಡುಪಿ: ಬ್ರಹ್ಮಾವರ ತಾಲೂಕಿನ ಹನೆಹಳ್ಳಿ ದಲಿತ ಯುವಕ ಕೃಷ್ಣ ಎಂಬವರ ಹತ್ಯೆಯ ಸ್ಥಳಕ್ಕೆ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಮಿತಿಯ ನಿಯೋಗ ಭೇಟಿ ನೀಡಿ, ಮಾಹಿತಿಗಳನ್ನ ಕಲೆ ಹಾಕಿ, ಪ್ರಕರಣದ ತನಿಖಾಧಿಕಾರಿ ಬ್ರಹ್ಮಾವರ ಪೊಲೀಸ್ ಸರ್ಕಲ್ ಇನ್ಸ್ ಪೆಕ್ಟರ್ ದಿವಾಕರ್ ರನ್ನು ಭೇಟಿ ಮಾಡಿ ತನಿಖೆಯ ಪ್ರಗತಿಯ ಬಗ್ಗೆ ಮಾಹಿತಿ ಪಡೆಯಲಾಯಿ.

ಶೂಟೌಟ್ ನಡೆದ ಸ್ಥಳದ ನಿವಾಸಿಗಳು ಕೃತ್ಯದ ಬಗ್ಗೆ ಕೆಲವು ಮಾಹಿತಿ ನೀಡಿದ್ದರು, ಅಮಾಯಕ ದಲಿತ ಯುವಕನ ಅಮಾನವೀಯ ಶೂಟೌಟ್ ಹತ್ಯೆಯ ಬಗ್ಗೆ ಸ್ಥಳೀಯ ಜನರು ಖೇದ ಮತ್ತು ಆತಂಕ ವ್ಯಕ್ತಪಡಿಸಿದರು. ಈ ಕೊಲೆ ಪ್ರಕರಣ ತನಿಖಾಧಿಕಾರಿಗಳು ತನಿಖೆಯ ಪ್ರಗತಿ ಬಗ್ಗೆ ನಿಯೋಗಕ್ಕೆ ಮಾಹಿತಿ ನೀಡಿದರು.

ಪೊಲೀಸ್ ತನಿಖೆ ಇನ್ನೂ ಪರಿಣಾಮಕಾರಿಯಾಗಿ ನಡೆಸಬೇಕೆಂದೂ,ಕೃತ್ಯ ನಡೆಸಿದ ಆರೋಪಿತರ ಬಂಧನ ಶೀಘ್ರ ನಡೆಸಬೇಕೆಂದು ತನಿಖಾಧಿಕಾರಿಯವರಲ್ಲಿ ನಿಯೋಗವು ಆಗ್ರಹಿಸಿತು.

ಮುಂದಿನ ದಿನಗಳಲ್ಲಿ ಸೂಕ್ತ ಹೋರಾಟ ರೂಪಿಸುವುದಾಗಿಯೂ ತಿಳಿಸಲಾಯಿತು. ನಿಯೋಗ ದಲ್ಲಿ ದಲಿತ ಚಳವಳಿಯ ನಾಯಕರುಗಳಾದ ಸುಂದರ್ ಮಾಸ್ತರ್,ಶಾಮರಾಜ್ ಬಿರ್ತಿ, ಮಂಜುನಾಥ ಗಿಳಿಯಾರು, ವಿಶ್ವನಾಥ ಬೆಳ್ಳಂಪಳ್ಳಿ,ಶಾಮಸುಂದರ್ ತೆಕ್ಕಟ್ಟೆ, ಕೆ.ಸಿ.ರಾಜು ಬೆಟ್ಟಿನಮನೆ, ಶ್ರೀನಿವಾಸ ವಡ್ಡರ್ಸೆ, ಭಾಸ್ಕರ ಮಾಸ್ತರ್, ಕುಮಾರ್ ಕೋಟ, ಶಾಂತಿರಾಜ್ ಬಾರ್ಕುರ್, ಮಂಜುನಾಥ ಬಾಳ್ಕುದ್ರು, ಪ್ರಶಾಂತ್ ಬಿರ್ತಿ, ಕುಸುಮ ಮಂಜುನಾಥ್, ಗೋಪಾಲ್ ಕೊಡಂಕೂರ್ ಮತ್ತು ಹತ್ಯೆಗೊಳಗಾದ ಕೃಷ್ಣ ಅವರ ಸಮೀಪದ ಬಂಧುಗಳು ಇದ್ದರು.

Leave a Reply

Your email address will not be published. Required fields are marked *

error: Content is protected !!