ಮಣಿಪಾಲ: ಪ್ರಾಧ್ಯಾಪಕ ರಾಮಕೃಷ್ಣ ನಾಯಕ್ ಮಂಡಿಸಿದ ಮಹಾಪ್ರಬಂಧಕ್ಕೆ ಪಿಎಚ್ಡಿ
ಉಡುಪಿ: ಮಣಿಪಾಲ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಾ ಹುಮಾನಿಟೀಸ್ ಅಂಡ್ ಮ್ಯಾನೇಜ್ಮೆಂಟ್ ವಿಭಾಗದ ಸಹ ಪ್ರಾಧ್ಯಾಪಕ ರಾಮಕೃಷ್ಣ ನಾಯಕ್ ಅವರು ಮಂಡಿಸಿದ “ಫ್ಯಾಬ್ರಿಕೇಷನ್ ಅಂಡ್ ಕಾರಾಕ್ಟ್ ರೈಸೇಷನ್ ಆಫ್ ಪ್ರಿಂಟೆಡ್ ಫ್ಲೆಕ್ಸಿಬಲ್ ಥೆರ್ಮೋಎಲೆಕ್ಟ್ರಿಕ್ ಜೆನೆರೇಟರ್ಸ್ ಬೇಸ್ಡ್ ಆನ್ ನಾವೆಲ್ ಇಂಕ್ ಫಾರ್ಮುಲೇಶನ್ಸ್” ಎನ್ನುವ ಮಹಾಪ್ರಬಂಧಕ್ಕೆ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ), ಮಣಿಪಾಲ ಪಿಎಚ್ಡಿ ನೀಡಿದೆ.
ಇದರ ಒಂದು ಲೇಖನವು 2022 ನೇ ಸಾಲಿನ ಡಾI ಟಿ ಎಂಎಪೈ ಚಿನ್ನದ ಪದಕವನ್ನು ಪಡೆದಿದೆ. ಆಳ್ವಾಸ್ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಅಂಡ್ ಟೆಕ್ನಾಲಜಿಯಾ ಪ್ರೊಫೆಸರ್ ಡಾI.ಪ್ರಕಾಶ ಶೆಟ್ಟಿ ಹಾಗು ಎಂ ಐ ಟಿ ಯಾ ಅಸೋಸಿಯೇಟ್ ಪ್ರೊಫೆಸರ್ ಡಾI.ಸೆಲ್ವಕುಮಾರ್ ಇವರ ಮಾರ್ಗದರ್ಶನದಲ್ಲಿ ಪ್ರಬಂಧ ಮಂಡಿಸಿದ್ದ ರಾಮಕೃಷ್ಣ ನಾಯಕ್ ಇವರು ಹಿರಿಯಡ್ಕ -ಗುಡ್ಡೆಅಂಗಡಿಯಾ ದಿ. ಎ. ರಂಗಪ್ಪ ನಾಯಕ್ ಮತ್ತು ಶಾರದಾ ನಾಯಕ್ ದಂಪತಿಯ ಪುತ್ರ.