ಉಡುಪಿ-ಪಟ್ಲಕ್ಕೆ ಸರಕಾರಿ ಬಸ್ ಸೇವೆಗೆ ಮನವಿ

ಉಡುಪಿಯಿಂದ ಪಟ್ಲಕ್ಕೆ ಸುಮಾರು ಖಾಸಗಿ ನಾಲ್ಕೈದು ಬಸ್ ದಿನ ನಿತ್ಯ ಸಂಚರಿಸುತ್ತಿದೆ. ಅದೇ ರೀತಿ ಉಡುಪಿಯಿಂದ ಮರ್ಣೆಗೆ ಸಹ ಖಾಸಗಿ ಬಸ್ಸುಗಳು ಬರುತ್ತಿದ್ದು. ಆದರೆ ಅಲ್ಲಿಂದ ಮುಂದಕ್ಕೆ ಮೂರು ಕಿಲೋಮೀಟರ್ ದೂರದಲ್ಲಿರುವ ಅಂಗಾರಕಟ್ಟೆಗೆ ಯಾವುದೇ ಬಸ್ಸುಗಳು ಸಂಚಾರವಿಲ್ಲ.

ಇತಿಹಾಸ ಪ್ರಸಿದ್ಧ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಗುಂಡುಪಾದೆಯ ಮೂಲಕ ಅಂಗಾರಕಟ್ಟೆಯ ಮಾರ್ಗವಾಗಿ ತುಂಬಾ ಹತ್ತಿರವಾಗಿದೆ. ಊರಿನ ಶಾಲಾ ಮಕ್ಕಳು ಉದ್ಯೋಗಿಗಳಿಗೆ ಅನಾರೋಗ್ಯ ಪೀಡಿತರಿಗೆ ಹತ್ತಿರದ ಪಟ್ಲಾಕ್ಕೆ ಅಥವಾ ಇನ್ಯಾವುದೇ ಊರುಗಳಿಗೆ ಹೋಗಬೇಕಾದರೆ ಯಾವುದೇ ಇಲ್ಲಿನ ನಾಗರಿಕರಿಗೆ ಬಸ್ ಸೌಲಭ್ಯ ಇರುವುದಿಲ್ಲ.

ಎಲ್ಲಾ ಹಳ್ಳಿಗಳು ಸಹ ಅಭಿವೃದ್ಧಿ ಹೊಂದುತ್ತಿರುವ ಈ ಕಾಲಘಟ್ಟದಲ್ಲಿ ಸುಮಾರು 2700 ಜನಸಂಖ್ಯೆ ಇರುವ ಪೆರ್ಣಂಕಿಲ ಅಂಗಾರಕಟ್ಟೆ ಗ್ರಾಮವಾದ ನಮ್ಮ ಊರಿಗೆ ಅತ್ಯಂತ ಅಗತ್ಯವಾಗಿ ಮೂಲಭೂತ ಸೌಲಭ್ಯಗಳಲ್ಲಿ ಒಂದಾದ ಬಸ್ಸು ಸೌಲಭ್ಯ ಕಲ್ಪಿಸಲೇ ಇಲ್ಲ. ಇತರೆ ಊರುಗಳಿಗೆ ಸಂಪರ್ಕ ಸಾಧಿಸಲು ನಾವು ವಂಚಿತರಾಗಿದ್ದೇವೆ ಈಗಾಗಲೇ ಹಲವಾರು ಬಾರಿ ಅರ್ಜಿ ಸಲ್ಲಿಸಿರುತ್ತೇವೆ. ಆದುದರಿಂದ ಇತಿಹಾಸ ಪ್ರಸಿದ್ಧ ಪುರಾತನ ದೇವಸ್ಥಾನವಾದ ಉದ್ಭವ ಗಣಪತಿ ಎಂದೇ ಪ್ರಸಿದ್ಧಿ ಪಡೆದ ಮಹಾಗಣಪತಿಯ ಮತ್ತು ಈಶ್ವರನ ಸನ್ನಿಧಿಯಾದ ಪೆರ್ಣಂಕಿಲ ಕ್ಷೇತ್ರ ಜೀರ್ಣೋದ್ಧಾರ ಸಂದರ್ಭದಲ್ಲಿ ಲಕ್ಷಾಂತರ ಭಕ್ತರು ಆಗಮಿಸುವ ದೃಷ್ಟಿಯಲ್ಲಿ ಹಾಗೂ ಸರಕಾರಿ ಬಸ್ ಸೇವೆ ನೀಡುವಂತೆ ಆಗ್ರಹಿಸಿ ನಿಟ್ಟೂರಿನಲ್ಲಿರುವ ಕೆಎಸ್‌ಆರ್‌ಟಿಸಿ ಬಸ್ ಡಿಪೋಗೆ ಭೇಟಿ ಮನವಿ ಸಲ್ಲಿಸಲಾಯಿತು.

ಕೆಎಸ್ಆರ್‌ಟಿಸಿಯ ಟ್ರಾಫಿಕ್ ಕಂಟ್ರೋಲರ್ ರವೀಂದ್ರ ಅವರಿಗೆ ಕಾಂಗ್ರೆಸ್ನ ಹಿರಿಯ ಮುಖಂಡ ಮೋಹನ್ ದಾಸ್ ನಾಯಕ್ ಪರ್ಕಳ, ಸಾಮಾಜಿಕ ಕಾರ್ಯಕರ್ತ ಗಣೇಶ್ ರಾಜ್ ಸರಳೇಬೆಟ್ಟು ಅವರು ಮನವಿ ನೀಡಿದರು.

ಮನವಿಗೆ ಸ್ಪಂದಿಸಿದ ಅಧಿಕಾರಿಗಳು ಶೀಘ್ರವಾಗಿ ಬಸ್ ಸೇವೆ ಒದಗಿಸಿದಾಗಿ ಭರವಸೆ ನೀಡಿದ್ದಾರೆ. ಈಗಾಗಲೇ ಸರ್ವೆ ಕಾರ್ಯ ಮುಗಿದಿದೆ. ತಕ್ಷಣ ಸೇವೆ ಸಿಗುತ್ತದೆ ಎಂದು ಭರವಸೆ ನೀಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!