ಮೂಡ್ಲಕಟ್ಟೆ: ಯುವ ರೆಡ್ ಕ್ರಾಸ್ ಘಟಕ ರಕ್ತ ನಿಧಿ ಕೇಂದ್ರಕ್ಕೆ ಭೇಟಿ

ಕುಂದಾಪುರ ಮಾ.16: ಮೂಡ್ಲಕಟ್ಟೆಯ  ಐಎಂಜೆ  ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ಯುವ ರೆಡ್ ಕ್ರಾಸ್ ಘಟಕವು ಭಾರತೀಯ ರೆಡ್ ಕ್ರಾಸ್  ಸಂಸ್ಥೆ  ಕುಂದಾಪುರ ಇವರ ಸಹಕಾರದೊಂದಿಗೆ ಕುಂದಾಪುರದ ರಕ್ತನಿಧಿ ಕೇಂದ್ರಕ್ಕೆ ಭೇಟಿ ನೀಡಲಾಯಿತು.

ಭಾರತೀಯ ರೆಡ್ ಕ್ರಾಸ್  ಸಂಸ್ಥೆಯ ಹಿರಿಯ  ತಾಂತ್ರಿಕ ಮೇಲ್ವಿಚಾರಕರಾದ ಸುಜಯ ಮತ್ತು ವೀರೇಂದ್ರ ವಿದ್ಯಾರ್ಥಿಗಳಿಗೆ ರಕ್ತದಾನದ ಮಹತ್ವವನ್ನು ತಿಳಿಸುತ್ತಾ, ರಕ್ತ ಸಂಗ್ರಹಣೆ, ಪರಿಷ್ಕರಣೆ, ಸಂಗ್ರಹಿಸಿದ ರಕ್ತದ ವಿವಿಧ ಪ್ರಕ್ರಿಯೆಯ ಕುರಿತು ಸವಿಸ್ತಾರವಾಗಿ ವಿದ್ಯಾರ್ಥಿಗಳಿಗೆ ತಿಳಿಸಿದರು.

ಭಾರತೀಯ ರೆಡ್ ಕ್ರಾಸ್  ಸಂಸ್ಥೆ ಕುಂದಾಪುರದ ಅಧ್ಯಕ್ಷರು ಎಸ್.ಜಯಕರ ಶೆಟ್ಟಿ, ಕಾಲೇಜಿನ ಯುವ ರೆಡ್ ಕ್ರಾಸ್ ಘಟಕದ ಸಂಯೋಜಕಿ ಹಾಗು ವಾಣಿಜ್ಯ ಉಪನ್ಯಾಸಕಿಯಾದ

ಶಬೀನಾ ಹೆಚ್, ಬಿ ಸಿ ಎ ವಿಭಾಗದ ಉಪನ್ಯಾಸಕರಾದ ಜಿತೇಶ್‌ರವರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಈ ಕಾರ್ಯಕ್ರಮದ ಮೂಲಕ ವಿದ್ಯಾರ್ಥಿಗಳಿಗೆ ರಕ್ತದಾನದ ಮಹತ್ವ ಮತ್ತು ಅದರ ಸಂರಕ್ಷಣೆಯ ಕುರಿತು ಅರಿವು ಮೂಡಿಸಲಾಯಿತು.

Leave a Reply

Your email address will not be published. Required fields are marked *

error: Content is protected !!