ಗುರಿಯಿಲ್ಲದ ಹೋರಾಟ, ಕೇವಲ ಪತ್ರಿಕಾ ಹೇಳಿಕೆಗಳಿಂದ ಯಾವ ಸಾಧನೆಯೂ ಆಗದು: ಜಯನ್ ಮಲ್ಪೆ
ಉಡುಪಿ: ದಲಿತ ಚಳವಳಿಗೆ ಒಂದು ರಚನಾತ್ಮಕ ದಿಕ್ಕನ್ನು ಒದಗಿಸಬೇಕು, ಅದಾಗಲು ಹೊಸತಕ್ತ, ಹೊಸ ಮನಸ್ಸು, ಜನರ ನೋವುಗಳ ನಡುವೆಯೇ ಅಂಬೇಡ್ಕರ್ ಅವರನ್ನು ಕಾಣುವ ಯುವಜನಾಂಗ ಬರಬೇಕು ಎಂದು ದಲಿತ ಚಿಂತಕ ಜಯನ್ ಮಲ್ಪೆ ಹೇಳಿದ್ದಾರೆ.
ಅವರು ರವಿವಾರ ಪಾಂಗಳದ ಅಂಬೇಡ್ಕರ್ ಭವನದ ಹೊರಾಂಗಣದಲ್ಲೆ ಅಂಬೇಡ್ಕರ್ ಯುವಸೇನೆಯ ನೂತನ ಗ್ರಾಮ ಶಾಖೆಯ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯಲ್ಲಿ ಮಾತನಾಡುತ್ತಾ, ಪ್ರಸ್ತುತ ದಲಿತ ಚಳವಳಿ ನಿದ್ರೆಯಲ್ಲಿ ಲೀನವಾಗಿದೆ.ಈ ನಾಟಕೀಯ ನಿದ್ರೆಯನ್ನು ತೊಲಗಿಸುವವರು ಯಾರು? ನಮ್ಮಲ್ಲಿಯೇ ಇಚ್ಛಾ ಶಕ್ತಯಿಲ್ಲದಿದ್ದರೆ ನಮಗಾಗಿ ಮತ್ತು ದಲಿತ ಸಮಾಜಕ್ಕಾಗಿ ನಾವು ಏನನ್ನೂ ಮಾಡಲಾರೆವು.
ಗುರಿಯಿಲ್ಲದ ಹೋರಾಟಗಳಿಂದ, ಕೇವಲ ಪತ್ರಿಕಾ ಹೇಳಿಕೆಗಳಿಂದ ಯಾವ ಸಾಧನೆಯೂ ಆಗದು ಎಂದ ಜಯನ್ ಮಲ್ಪೆ ಯಾವುದೇ ಸಾಮಾಜಿಕ ಚಳವಳಿ ರಾಜಕೀಯದಿಂದ ಹೊರತಲ್ಲ.ವೈಚಾರಿಕ ಸ್ಪಷ್ಟತೆ,ಖಚಿತ ಆಲೋಚನೆ,ಪ್ರಮಾಣಿಕ ಮನಸ್ಸುಗಳು ಸೃಷ್ಟಿಯಾಗಬೇಕು ಎಂದರು.
ಪಾಂಗಾಳ ಬಬ್ಬುಸ್ವಾಮಿ ದೈವಸ್ಥಾನದ ಗುರಿಕಾರ ಸುಂದರ್ ಪಿ. ಕಾರ್ಯಕ್ರಮ ಉದ್ಘಾಟಿಸಿದರು. ಮುಖ್ಯತಿಥಿಗಳಾಗಿ ರಾಜೇಶ್ ಆಚಾರ್ಯ,ಹರೀಶ್ ಸಾಲ್ಯಾನ್,ಲೋಕೇಶ್ ಪಡುಬಿದ್ರಿ,ಗಣೇಶ್ ನೆರ್ಗಿ.ಸುಂದರ್ ಕಪ್ಪೆಟ್ಟು,ರಮೇಶ್ ಪಾಲ್,ರವಿ.ಪಿ,ಕು.ಅಶ್ವಿನಿ,ಶ್ರೀಮತಿ ರಾಜೀವಿ ವಸಂತ,ಸಂತೋಷ್ ಕಪ್ಪೆಟ್ಟು ಮುಂತ್ತಾದವರು ಉಪಸ್ಥಿತಿಯಿದ್ದರು,
ಅನಿಲ್ ಕುಮಾರ್ ಸ್ವಾಗತಿಸಿ, ದಿನೇಶ್ ವಂದಿಸಿದರು.ಶ್ರೀಮತಿ ಸತ್ಯವತಿ ಕಾರ್ಯಕ್ರಮ ನಿರೂಪಿಸಿದರು.