ಉಡುಪಿ: ಪ್ರಧಾನಮಂತ್ರಿ ಮತ್ಯಸಂಪದ ಯೋಜನೆಗೆ ಅರ್ಜಿ ಆಹ್ವಾನ
ಉಡುಪಿ, ಮಾ.14: ಪ್ರಧಾನಮಂತ್ರಿ ಮತ್ಯಸಂಪದ ಯೋಜನೆಯ ಮತ್ಯವಾಹಿನಿ ಯೋಜನೆಯಡಿ ತಾಜಾಮೀನು ಮಾರಾಟಕ್ಕಾಗಿ ಹಾಗೂ ಮೀನು ಉತ್ಪನ್ನಗಳ ಮಾರಾಟಕ್ಕಾಗಿ ಇ-ತ್ರಿಚಕ್ರ ವಾಹನಗಳನ್ನು ಗುತ್ತಿಗೆ ಪರವಾನಗಿ ಆಧಾರದಲ್ಲಿ ಮೇಲೆ ನೀಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ರಾಜ್ಯ ಮೀನುಗಾರಿಕೆ ಅಭಿವೃದ್ಧಿ ನಿಗಮದ ಫ್ರಾಂಚೈಸಿಗಳು ಮೀನು ಮಾರಾಟ ಜಾಲವನ್ನು ವಿಸ್ತರಿಸಲು ಬಯಸಿದ್ದಲ್ಲಿ, ಸರ್ಕಾರದ ವಿವಿಧ ಕೌಶಲ್ಯ ಅಭಿವೃದ್ಧಿ ಯೋಜನೆಗಳಡಿ ತರಬೇತಿ ಪಡೆದವರು, ಮೀನುಗಾರಿಕೆ ಇಲಾಖೆಯಿಂದ ಅನುಮೋದಿತ ಮೀನುಗಾರರ ಉತ್ಪಾದಕ ಸಂಸ್ಥೆಗಳು, ಮೀನು ಮಾರಾಟ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವ ಮೀನುಗಾರಿಕೆ ಸಹಕಾರ ಸಂಘ/ ಒಕ್ಕೂಟಗಳು, ಮಹಿಳಾ ಸ್ವ- ಸಹಾಯ ಗುಂಪುಗಳು ಹಾಗೂ ಸ್ವಯಂ ಉದ್ಯೋಗ ಕೈಗೊಳ್ಳಲು ಆಸಕ್ತರಿರುವ ನಿರುದ್ಯೋಗ ಯುವಕ, ಯುವತಿಯರು ಹಾಗೂ ಪ್ರಧಾನಮಂತ್ರಿ ಮತ್ಯಸಂಪದ ಯೋಜನೆಯ ಫಲಾನುಭವಿಗಳು ಅರ್ಜಿ ಸಲ್ಲಿಸಬಹುದಾಗಿದೆ.
ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಉಡುಪಿ, ಕುಂದಾಪುರ ಹಾಗೂ ಕಾರ್ಕಳ ತಾಲೂಕು ಮೀನುಗಾರಿಕೆ ಸಹಾಯಕ ನಿರ್ದೇಶಕರನ್ನು ಸಂಪರ್ಕಿಸಬಹುದಾಗಿದೆ ಎಂದು ಮೀನುಗಾರಿಕೆ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.