ಟಿಕೆಟ್ ಕೈ ತಪ್ಪೋ ವಿಚಾರ: ಪಕ್ಷ ಗುಡಿಸಿ ಅಂದ್ರೆ ಗುಡಿಸ್ತೇವೆ, ಒರೆಸಿ ಅಂದ್ರೆ ಒರೆಸ್ತೇವೆ- ನಳಿನ್ ಕುಮಾರ್

ಮಂಗಳೂರು, ಮಾ 12: ಸಾಮಾನ್ಯ ಕಾರ್ಯಕರ್ತರನ್ನ ಗುರುತಿಸೋದು ನಮ್ಮ ಪಾರ್ಟಿಯ ವಿಶೇಷತೆ ಪಕ್ಷದ ರಾಷ್ಟ್ರೀಯ ನಾಯಕರು ಯೋಚನೆ ಮಾಡಿಕೊಂಡು ಆಯ್ಕೆ ಮಾಡ್ತಾರೆ. ರಾಷ್ಟ್ರೀಯ ನಾಯಕರ ಯೋಚನೆಗೆ ನಾವು ಬದ್ದರಾಗಿ ಕೆಲಸ ಮಾಡ್ತೇವೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಭಾವುಕರಾಗಿ ಅಚ್ಚರಿ ಹೇಳಿಕೆ ನೀಡಿದ್ದಾರೆ.

ಅವರು ಬಿಜೆಪಿ ಟಿಕೆಟ್ ಕೈತಪ್ಪೋ ಸಾಧ್ಯತೆ ವಿಚಾರಕ್ಕೆ ಪ್ರತಿಕ್ರಿಯಿಸಿ,ಪಕ್ಷ ನಿಂತ ನೀರಾಗಬಾರದು, ಹೊಸಬರು ಬರ್ತಾ ಇರಬೇಕು, ಅದನ್ನು ಸ್ವಾಗತಿಸ್ತೇನೆ. ಪಕ್ಷದ ರಾಷ್ಟ್ರೀಯ ನಾಯಕರ ನಿರ್ಧಾರಕ್ಕೆ ನಾವು ಬದ್ದರಾಗಿದ್ದೇವೆ. ಯಾರೇ ಆದರೂ ಮೋದಿ ಪ್ರಧಾನಿಯಾಗಬೇಕು, ಬಿಜೆಪಿ ಮತ್ತೆ ಗೆಲ್ಲಬೇಕು .ರಾಷ್ಟ್ರೀಯ ನಾಯಕರ ಯೋಚನೆಗೆ ನಾವು ಬದ್ದರಾಗಿ ಕೆಲಸ ಮಾಡ್ತೇವೆ. ಪಾರ್ಟಿ ಏನು ಹೇಳುತ್ತೋ ಅದನ್ನ ನಾವು ಮಾಡ್ತೇವೆ ಎಂದು ಹೇಳಿದರು.ಗುಡಿಸಿ ಅಂದ್ರೆ ಗುಡಿಸ್ತೇವೆ, ಒರೆಸಿ ಅಂದ್ರೆ ಒರೆಸ್ತೇವೆ. ಅಧಿಕಾರ ಪ್ರಮುಖ ಅಲ್ಲ, ರಾಷ್ಟ್ರೀಯ ನಾಯಕರ ಚಿಂತನೆ ಮುಖ್ಯ ನಾನು ಸಾಮಾಜಿಕ ತಾಣಗಳ ಬಗ್ಗೆ ತಲೆ ಕೆಡಿಸಿಕೊಳ್ಳಲ್ಲ, ಪಕ್ಷದ ನಿರ್ಧಾರಕ್ಕೆ ಬದ್ದ ನಾವು ಅದನ್ನೇ ನಂಬಿ ಇದ್ದವರಲ್ಲ, ಸಂಘಟನೆ ಕಾರ್ಯವನ್ನು ನಂಬಿದವರು ಕಾರ್ಯಕರ್ತರ ಆಧಾರದಲ್ಲಿ ಇದೆಲ್ಲಾ ಕಾರ್ಯಗಳು ಆಗುತ್ತದೆ. ರಾಷ್ಟ್ರೀಯ ನಾಯಕರ ಯಾವ ತೀರ್ಮಾನಕ್ಕೂ ನಾವು ಬದ್ದ ಎಂದರು.

ನನಗೆ ಮೂರು ಬಾರಿ ಅವಕಾಶ ಕೊಡಲಾಗಿದೆ, 15 ವರ್ಷ ಕೆಲಸ ಮಾಡಿದ್ದೇನೆ. ಎಲ್ಲೂ ವ್ಯತ್ಯಾಸಗಳಿಲ್ಲ, ನಮ್ಮ ಪಕ್ಷದಲ್ಲಿ ತುಳಿಯೋ ಕೆಲಸ ನಡೆಯಲ್ಲ, ಬೆಳೆಸೋ ಕೆಲಸ ಮಾಡ್ತಾರೆ. ನಾನು ಸಾಮಾನ್ಯ ಕಾರ್ಯಕರ್ತನಾಗಿದ್ದೆ, ಸಂಘದ ವಿಚಾರ ಇಟ್ಟುಕೊಂಡಿದ್ದೆ.ಬಿಜೆಪಿ ಕೆಲಸ ಮಾಡು ಅಂತ ಹೇಳಿದ್ರು, ಲೋಕಸಭೆಗೆ ನಿಂತೆ ಸಾಮಾನ್ಯ ಕಾರ್ಯಕರ್ತನಿಗೆ ರಾಜ್ಯಾಧ್ಯಕ್ಷ ಸ್ಥಾನ ಕೂಡ ಕೊಟ್ಟರು.ಅವಕಾಶ ಸಿಕ್ಕಾಗ ನ್ಯಾಯ ಸಿಕ್ಕಿದೆ, ಸಿಗದೇ ಇದ್ದಾಗ ಅನ್ಯಾಯ ಆಗಿದೆ ಅನ್ನೋ ಹಕ್ಕು ನನಗಿಲ್ಲ ಎಂದು ನುಡಿದರು. ಪಕ್ಷ ಎಲ್ಲರನ್ನೂ ಬೆಳೆಸಿದೆ, ಪಕ್ಷದ ಕೆಲಸಕ್ಕೆ ಜನ ಬೇಕಿದೆ ಅಸಮಾಧಾನ ಯಾಕೆ? ನಾವು ಮಾಡೋದು ಸಂಘಟನೆ ಕಾರ್ಯ ಅಸಮಾಧಾನ ಯಾವುದೇ ಸಂಧರ್ಭದಲ್ಲಿ ಇರಲ್ಲ, ಅದು ಅಸಾಧ್ಯ ಎಂದರು.

Leave a Reply

Your email address will not be published. Required fields are marked *

error: Content is protected !!